Advertisement

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

09:42 PM Mar 28, 2024 | Team Udayavani |

ಬಜಪೆ: ದ್ವಿಚಕ್ರ ವಾಹನ ಕಳ್ಳನೋರ್ವನನ್ನು ಬಜಪೆ ಠಾಣೆಯ ಎಎಸ್‌ಐ ರಾಮ ಪೂಜಾರಿ ಮತ್ತು ಸಿಬಂದಿ ಸ್ವಾಮಿಲಪದವು ಎನ್ನುವಲ್ಲಿ ಗುರುವಾರ ಬಂಧಿಸಿದ್ದಾರೆ.

Advertisement

ಉಡುಪಿ ಜಿಲ್ಲೆಯ ಕುಂದಾಪುರ ಸಾಸ್ತಾನದ ಗೋಳಿಬೆಟ್ಟುಮನೆಯ ಪ್ರಹ್ಲಾದ್‌ (30) ಬಂಧಿತ. ಗುರುವಾರದಂದು ಮುಂಜಾನೆ ವಾಹನ ತಪಾಸಣೆ ಮಾಡುತ್ತಿರುವಾಗ ಸ್ಕೂಟರ್‌ ಅನ್ನು ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸದೆ ಇದ್ದು, ಆಗ ಆತನನ್ನು ಹಿಡಿದು ವಿಚಾರಿಸಿದಾಗ ಸ್ಕೂಟರ್‌ ಅನ್ನು ಬಂಟ್ವಾಳದ ಮೆಲ್ಕಾರ್‌ ಎಂಬಲ್ಲಿಂದ ಕಳವು ಮಾಡಿದಾಗಿ ತಿಳಿಸಿದ್ದ.

ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈತನ ವಿರುದ್ಧ ಹಿಂದೆ ಕುಂದಾಪುರ, ಮಂಗಳೂರು ಉತ್ತರ, ಕೋಟ, ಬ್ರಹ್ಮಾವರ, ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಳ್ಳತನಕ್ಕೆ ಹಾಗೂ ಬೈಕ್‌ ಕಳ್ಳತನಕ್ಕೆ ಸಂಬಂಧಪಟ್ಟ ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರಿಸಿಕೊಂಡಿದ್ದ.

 

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next