Advertisement
ಸುಮಾರು 3ಎಕ್ರೆಯಲ್ಲಿ 29 ವರ್ಷದಿಂದ ಸಮಗ್ರ ಕೃಷಿ ಪದ್ಧತಿ ಆಳವಡಿಸಿದ್ದಾರೆ. ಬೇಸಗೆಯಲ್ಲಿ ರೈತರು ಬೆಳೆ ತೆಗೆಯಲು ಹಿಂದೇಟು ಹಾಕುತ್ತಾರೆ. ಆದರೆ ಇವರು ವರ್ಷ ಪೂರ್ತಿ ಮಾವು, ತೆಂಗು, ಅಡಿಕೆ, ತರಕಾರಿ, ಭತ್ತ, ತರಕಾರಿಗಳನ್ನು ಬೆಳೆಸುತ್ತಾರೆ. ಬೇಸಗೆಯಲ್ಲಿ ಇಡೀ ನಗರ ನೀರಿಗಾಗಿ ಪರದಾಡಿದರೂ ಇವರಿಗೆ ಅದು ತಟ್ಟದು. ಇದಕ್ಕೆ ಕಾರಣ ಮಳೆ ನೀರು ಸಂಗ್ರಹ ತೊಟ್ಟಿ.ಮಳೆ ನೀರು ಸಂಗ್ರಹ ತೊಟ್ಟಿ
ಗೋಪಾಲ ಅವರು ತಮ್ಮ ತಂದೆ ಮರಣ ಬಳಿಕ ತಮ್ಮ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯ ತೊಡಗಿದರು. 1990ರಲ್ಲಿ ಸಣ್ಣ ಕೆರೆಗಳ ರೂಪದಲ್ಲಿ ಮಳೆ ನೀರಿನ ಸಂಗ್ರಹ ತೊಟ್ಟಿ ನಿರ್ಮಿಸಿದರು. 2016 ರಲ್ಲಿ ತೋಟಗಾರಿಕಾ ಇಲಾಖೆಯ ಸಹಾಯದಿಂದ ಸುಮಾರು 60 ಅಡಿ ಅಗಲ ಹಾಗೂ 15 ಅಡಿ ಆಳದ ನೀರು ಸಂಗ್ರಹಣ ತೊಟ್ಟಿ (ಕೆರೆ) ಕಟ್ಟಿದರು. ವಿವಿಧ ಪ್ರದೇಶದಿಂದ ಹರಿದು ಬಂದ ಸುಮಾರು 16 ಲಕ್ಷ ಲೀ. ನೀರು ಇದರಲ್ಲಿ ಸಂಗ್ರಹವಾಗುತ್ತದೆ.
ಈ ತೊಟ್ಟಿಯ ಸುಮಾರು 20 ಅಡಿ ದೂರದಲ್ಲಿ 35 ಅಡಿ ಆಳದ ಬಾವಿಯಿದೆ. ಅದಕ್ಕೂ ಮಳೆ ನೀರು ಹಾಯಿಸುತ್ತಾರೆ. ತೊಟ್ಟಿಯಲ್ಲಿ ಸಂಗ್ರಹಿಸಿದ ನೀರನ್ನು ಡಿಸೆಂಬರ್ -ಜನವರಿವರೆಗೆ ಕೃಷಿಗೆ ಬಳಸಲಾಗುತ್ತಿದೆ. ಫೆಬ್ರವರಿ ಅನಂತರ ಬಾವಿಯ ನೀರು ಬಳಸುತ್ತಾರೆ.
ತೊಟ್ಟಿಯಲ್ಲಿ ನೀರು ಸಂಗ್ರಹವಾಗಿ ಭೂಮಿಯಲ್ಲಿ ಇಂಗುವ ಕಾರಣ ಕಡು ಬೇಸಗೆಯಲ್ಲಿ ಸಹ ಗೋಪಾಲ ನಾಯಕ್ ಅವರ ಬಾವಿಯಿಂದ ಸುಮಾರು 3 ಎಚ್‌ಪಿ ಪಂಪಿನಲ್ಲಿ ಕೃಷಿಗೆ ಅರ್ಧಗಂಟೆ ನೀರು ತೆಗೆಯಬಹುದು. ಈ ಪರಿಸರಕ್ಕೆ ಹೊಂದಿಕೊಂಡ ಬಾವಿಗಳ ಅಂತರ್ಜಲ ಮಟ್ಟ ಸಹ ಏರಿಕೆಯಾಗಿದೆ. ಪ್ರೇರಣೆಯಾಗಲಿ
ಪ್ರತಿಯೊಬ್ಬರೂ ಸಣ್ಣಮಟ್ಟದಲ್ಲಿ ಯಾದರೂ ಮಳೆ ನೀರು ಭೂಮಿಯಲ್ಲಿ ಇಂಗಿಸುವ ಮೂಲಕ ಜಲಸಂಪನ್ಮೂಲವನ್ನು ಸಂರಕ್ಷಿಸಬೇಕು. ಉದಯವಾಣಿ ಅಭಿಯಾನದಿಂದ ಪ್ರೇರಣೆಗೊಂಡು ಇನ್ನಷ್ಟು ಜನರು ಮಳೆ ಕೊಯ್ಲು ಪದ್ಧತಿ ಆಳವಡಿಸಲಿ.
–ಗೋಪಾಲ್ ನಾಯಕ್,
ಪ್ರಗತಿ ಪರ ಕೃಷಿಕ, ಅಲೆವೂರು
Related Articles
ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್ ನಲ್ಲಿ ಕಳಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529
Advertisement