Advertisement

ಸಮಗ್ರ ಕರಾವಳಿ ವಲಯ ನಿರ್ವಹಣಾ ಯೋಜನೆಗೆ ಕೇಂದ್ರ ಅಸ್ತು

10:48 AM Jun 10, 2019 | keerthan |

ಮಂಗಳೂರು: ದ. ಕ., ಉಡುಪಿ ಮತ್ತು ಉ.ಕ. ಜಿಲ್ಲೆಗಳ ಕಡಲ ತೀರ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಯ 310 ಕೋ.ರೂ.ಗಳ ಮಹತ್ವದ “ಸಮಗ್ರ ಕರಾವಳಿ ವಲಯ ನಿರ್ವಹಣಾ ಯೋಜನೆ’ಗೆ ಕೇಂದ್ರ ಸರಕಾರವು ಅನುಮೋದನೆ ನೀಡಿದ್ದು, ಶೀಘ್ರ ಕಾಮಗಾರಿ ಆರಂಭವಾಗುವ ನಿರೀ ಕ್ಷೆಯಿದೆ.

Advertisement

ಒಟ್ಟು 310 ಕೋ.ರೂ. ವೆಚ್ಚದ ಯೋಜನೆಗೆ ಶೇ. 50ರಷ್ಟು ಮೊತ್ತವನ್ನು ವಿಶ್ವಬ್ಯಾಂಕ್‌ ಸಾಲವಾಗಿ ನೀಡಲಿದೆ. ಉಳಿದುದರಲ್ಲಿ ಶೇ. 30ರಷ್ಟು ಕೇಂದ್ರ ಮತ್ತು ಶೇ. 20ರಷ್ಟು ರಾಜ್ಯ ಸರಕಾರ ನೀಡಲಿವೆ.

ಗುಜರಾತ್‌, ಒಡಿಶಾ ಮತ್ತು ಪಶ್ಚಿಮ ಬಂಗಾಲಗಳಲ್ಲಿ ಇದೇ ಯೋಜನೆಯನ್ನು ವಿಶ್ವಬ್ಯಾಂಕ್‌ ನೆರವಿನೊಂದಿಗೆ 2010ರಲ್ಲಿ ಆರಂಭಿಸಿ, 2018ರಲ್ಲಿ ಪೂರ್ಣಗೊಳಿಸಲಾಗಿತ್ತು. ದ್ವಿತೀಯ ಹಂತದಲ್ಲಿ ಕರ್ನಾಟಕ, ಕೇರಳ ಸಹಿತ 9 ರಾಜ್ಯ ಮತ್ತು 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ಬರಲಿದೆ. ಯೋಜನೆ ನಿರ್ವಹಣೆಗಾಗಿ ಪ್ರತ್ಯೇಕ ಕಚೇರಿ ಮಂಗಳೂರಿನಲ್ಲಿ ಆರಂಭವಾಗಲಿದೆ.

“ಬಗ್ಗುಂಡಿಕೆರೆ’ಗೆ ಹೊಸ ಜೀವ
ಬೈಕಂಪಾಡಿಯ ಬಗ್ಗುಂಡಿ ಕೆರೆ, ಕುದುಂಬೂರು ಹೊಳೆ ಕೈಗಾರಿಕೆಗಳ ತ್ಯಾಜ್ಯದಿಂದ ಮಲಿನವಾಗಿವೆ. ಕೈಗಾರಿಕೆ ತ್ಯಾಜ್ಯ ನೀರು ಹೊಳೆ-ಕೆರೆ ಸೇರದಂತೆ ಎಚ್ಚರ ವಹಿಸುವುದು ಈ ಯೋಜನೆಯ ಭಾಗ.

ಉದ್ದೇಶವೇನು?
ತೀರ ಪ್ರದೇಶದಲ್ಲಿ ಕಾಂಡ್ಲಾ ವನ ಅಭಿವೃದ್ಧಿ, ಕೈಗಾರಿಕೆಗಳಿಂದ ನದಿ-ಕಡಲು ಮಾಲಿನ್ಯ ತಡೆ, ಜಲಚರಗಳ ಸಾವಿಗೆ ಕಾರಣಗಳನ್ನು ಶೋಧಿಸುವುದು, ಮೀನು ಗಾರರು- ತೀರವಾಸಿಗಳ ಜೀವನ ಮಟ್ಟ ಸುಧಾರಣೆ ಮತ್ತು ಈ ಬಗ್ಗೆ ತರಬೇತಿ ಕೇಂದ್ರ ರಚನೆಯ ಉದ್ದೇಶ ಈ ಯೋಜನೆಯ ಹಿಂದಿದೆ.

Advertisement

ಕರಾವಳಿ ಕಾಯುವ “ಕಾಂಡ್ಲಾ ವನ’!
ಸಮುದ್ರ ಮತ್ತು ಮುಖಜ ಭೂಮಿಯ ಉಪ್ಪು – ಸಿಹಿ ನೀರಿನ ಸಂಗಮ ಸ್ಥಳದಲ್ಲಿ ಬೆಳೆಯುವ ಕಾಂಡ್ಲಾ ವನ ಜಲಚರಗಳ ಸಂತಾನೋತ್ಪತ್ತಿಯ ಮಹತ್ವದ ಜಾಗ. ಅಘನಾಶಿನಿ, ಕಾಳಿ, ಶರಾವತಿ, ಕುಂದಾಪುರ, ಸೇರಿದಂತೆ ಪಶ್ಚಿಮ ಕರಾವಳಿಯ ಸುಮಾರು 7,000 ಹೆಕ್ಟೇರ್‌ ಪ್ರದೇಶದಲ್ಲಿ ಕಾಂಡ್ಲಾವನಗಳಿವೆ. ಇಲ್ಲೂ “ಕಾಂಡ್ಲಾ ವನ ಕೇಂದ್ರ’ ಆರಂಭಿಸಲು ಉದ್ದೇಶಿಸಲಾಗಿದೆ ಎನ್ನುತ್ತಾರೆ ಮೀನುಗಾರಿಕೆ ಇಲಾಖೆಯ ಹಿ. ಸಹಾಯಕ ನಿರ್ದೇಶಕ ಮಹೇಶ್‌ ಕುಮಾರ್‌.

ಕರಾವಳಿ ಸಮಗ್ರ ಅಭಿವೃದ್ಧಿಯ ಗುರಿ
310 ಕೋ.ರೂ. ವೆಚ್ಚದಲ್ಲಿ “ಸಮಗ್ರ ಕರಾವಳಿ ವಲಯ ನಿರ್ವಹಣಾ ಯೋಜನೆ’ ರಾಜ್ಯದಲ್ಲಿ ಅನುಷ್ಠಾನಗಳೊಳ್ಳಲಿದೆ. ಕರಾವಳಿ ತೀರ ಪ್ರದೇಶದ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ಈ ಯೋಜನೆ ಅತ್ಯಂತ ಮಹತ್ವದ್ದು.
ಡಾ| ವೈ.ಕೆ. ದಿನೇಶ್‌ ಕುಮಾರ್‌, ಪ್ರಾದೇಶಿಕ ನಿರ್ದೇಶಕರು, (ಪರಿಸರ) ಮಂಗಳೂರು

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next