Advertisement

ಆರೋಗ್ಯ ವಿಮೆ ವ್ಯಾಪ್ತಿಗೆ ಮತ್ತಷ್ಟು ಕಾಯಿಲೆ ; IRDA ನಿರ್ಧಾರ

05:45 PM Apr 19, 2020 | Hari Prasad |

ನವದೆಹಲಿ: ಕೋವಿಡ್ ವೈರಸ್‌ ಸೋಂಕಿನಂತಹ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿ ಆರೋಗ್ಯ ವಿಮೆಗಳನ್ನು ಮತ್ತಷ್ಟು ಗ್ರಾಹಕ ಸ್ನೇಹಿ ಮಾಡುವ ನಿಟ್ಟಿನಲ್ಲಿ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಮಹತ್ವದ ಹೆಜ್ಜೆ ಇರಿಸಿದೆ.

Advertisement

ಐಆರ್‌ಡಿಎ ಆದೇಶದಂತೆ ಈಗಿರುವ ಕಾಯಿಲೆಗಳ ಜತೆಗೆ, ಮಾನಸಿಕ ರೋಗ, ಬೊಜ್ಜು, ಮೆನೋಪಾಸ್‌ (ಮುಟ್ಟು ನಿಲ್ಲುವ ಅವಧಿ), ಅಲ್‌ಝೈಮರ್‌, ಪಾರ್ಕಿನ್ಸನ್‌ ರೀತಿಯ ಅನಾರೋಗ್ಯ ಸಮಸ್ಯೆಗಳು ಮತ್ತು ರೋಬೋಟಿಕ್‌ ಸರ್ಜರಿ ಕೂಡ ಇನ್ನುಮುಂದೆ ವಿಮೆ ವ್ಯಾಪ್ತಿಗೆ ಸೇರಲಿದೆ.

ಇದರೊಂದಿಗೆ ಎಲ್ಲ ಪಾಲಿಸಿಗಳು ಒಂದೇ ರೀತಿಯ ಸೇರ್ಪಡೆ ಮತ್ತು ಹೊರಗಿರಿಸುವಿಕೆ ಅಂಶಗಳನ್ನು ಹೊಂದಿರಬೇಕು, ಪಾಲಿಸಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಕರಪತ್ರಗಳು ಏಕ ಭಾಷೆಯಲ್ಲಿ ಇರಬೇಕು ಎಂದು ಐಆರ್‌ಡಿಎ ವಿಮಾ ಕಂಪೆನಿಗಳಿಗೆ ಸೂಚನೆ ನೀಡಿದೆ.

ಈ ಎಲ್ಲ ಬದಲಾವಣೆಗಳ ಅನುಷ್ಠಾನಕ್ಕೆ ಸೆ.30ರ ಗಡುವು ನಿಗದಿ ಮಾಡಲಾಗಿದೆ. ಐಆರ್‌ಡಿಎ ಸೂಚನೆಯಂತೆ ಪಾಲಿಸಿಯಲ್ಲಿ ಬದಲಾವಣೆಗಳನ್ನು ತರಲು ವಿಮಾ ಕಂಪೆನಿಗಳು ಈಗಾಗಲೇ  ಕಾರ್ಯಪ್ರವೃತ್ತವಾಗಿವೆ. ಈ ಎಲ್ಲ ಬದಲಾವಣೆಗೆ ಅನುಗುಣವಾಗಿ ವಿಮಾ ಮೊತ್ತ ಶೇ.25ರಷ್ಟು ಹೆಚಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next