Advertisement

ಸಂಕಷ್ಟಕ್ಕೆ ಸಿಲುಕಿದ ಕೃಷಿಕನ ನೆರವಿಗೆ ಸಿಗದ ವಿಮೆ

11:40 AM Oct 28, 2021 | Team Udayavani |

ಆಳಂದ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರು ಸಂಕಷ್ಟಕ್ಕೆ ಸಿಲುಕಿ ಸರ್ಕಾರದ ಬೆಳೆ ಹಾನಿ ಪರಿಹಾರ ಹಾಗೂ ಕಂಪನಿಗಳಿಗೆ ತುಂಬಿದ ವಿಮೆಯತ್ತ ಕೈಚಾಚಿ ನಿಂತಿದ್ದರೂ ಇದುವರೆಗೂ ಯಾವ ರೈತರಿಗೂ ಬೆಳೆ ಹಾನಿ ಪರಿಹಾರ ಅಥವಾ ವಿಮೆ ತುಂಬಿದ ರೈತರಿಗೆ ವಿಮಾ ಮೊತ್ತ ಬಂದಿಲ್ಲ.

Advertisement

ಇದರಿಂದ ರೈತರು ನಿತ್ಯ ವಿಮಾ ಕಂಪನಿಗಳಿಗೆ, ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆಯಿಂದ ಕಳೆದ ಜುಲೈ ತಿಂಗಳಿಂದ ನಡೆಯುತ್ತಿರುವ ಹಾನಿಯ ಸರ್ವೇ ಅಂತಿಮಗೊಳಿಸಲು ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ. ಆದರೆ ಸತತ ಮಳೆಯಿಂದಾಗಿ ಆರಂಭದಲ್ಲಿ 100 ಹೆಕ್ಟೇರ್‌ ಹಾನಿಯ ಲೆಕ್ಕದಲ್ಲಿ ಆರಂಭವಾದ ಸರ್ವೇ ಈಗ ತಾಲೂಕಿನ 43394 ಹೆಕ್ಟೇರ್‌ ಪ್ರದೇಶಕ್ಕೆ ತಲುಪಿದೆ.

ಕಳೆದ ಜುಲೈನಲ್ಲಿ 100 ಹೆಕ್ಟೇರ್‌ ಹಾನಿ ಯಾಗಿದ್ದರೇ, ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ತಿಂಗಳಿಂದ ಆರಂಭಗೊಂಡ ಸರ್ವೇ ಅಂತಿಮವಾಗಿ ತೋಟಗಾರಿಕೆ ಹಾಗೂ ಖುಷ್ಕಿ ಸೇರಿ ಒಟ್ಟು 43394 ಹೆಕ್ಟೇರ್‌ನಷ್ಟು ತಾಲೂಕಿನಲ್ಲಿ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಹಾನಿಯಾದ ಬೆಳೆಗೆ ಇನ್ನೂ ಪರಿಹಾರ ದೊರೆಯಲಿದೆ ಎಂದು ರೈತ ಸಮುದಾಯ ಆಶಾಭಾವನೆ ಹೊಂದಿದೆ. ತಾಲೂಕಿನ ಐದು ಹೋಬಳಿ ಕೇಂದ್ರ ಖಜೂರಿ, ಆಳಂದ, ನಿಂಬರಗಾ, ನರೋಣಾ ಮತ್ತು ಮಾದನಹಿಪ್ಪರಗಾ ವಲಯಗಳಲ್ಲಿ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲಾಗಿದೆ.

ಖಷ್ಕಿ ಕ್ಷೇತ್ರಕ್ಕೆ ಸಂಬಂಧಿಸಿದ ಆಳಂದ ವಲಯದಲ್ಲಿ ತೊಗರಿ 7615 ಹೆಕ್ಟೇರ್‌, ಹೆಸರು 12 ಹೆಕ್ಟೇರ್‌, ಉದ್ದು 138 ಹೆಕ್ಟೇರ್‌, ಸೋಯಾಬಿನ್‌ 553 ಹೆಕ್ಟೇರ್‌, ಹತ್ತಿ 5 ಹೆಕ್ಟೇರ್‌, ಕಬ್ಬು 135 ಹೆಕ್ಟೇರ್‌ ಹೀಗೆ ಒಟ್ಟು 8458 ಹೆಕ್ಟೇರ್‌ ಪ್ರದೇಶದಲ್ಲಿ ಹಾನಿಯಾಗಿದೆ ಎಂದು ಅಂದಾಸಲಾಗಿದೆ.

Advertisement

ಖಜೂರಿ ವಲಯಕ್ಕೆ ತೊಗರಿ 7618 ಹೆಕ್ಟೇರ್‌, ಹೆಸರು 9 ಹೆಕ್ಟೇರ್‌, ಉದ್ದು 153 ಹೆಕ್ಟೇರ್‌, ಸೋಯಾಬಿನ್‌ 866 ಹೆಕ್ಟೇರ್‌, ಹತ್ತಿ 2 ಹೆಕ್ಟೇರ್‌, ಕಬ್ಬು 13 ಹೆಕ್ಟೇರ್‌ ಹೀಗೆ ಒಟ್ಟು 8661 ಹೆಕ್ಟೇರ್‌ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಮಾದನಹಿಪ್ಪರಗಾ ವಲಯದಲ್ಲಿ ತೊಗರಿ 8152 ಹೆಕ್ಟೇರ್‌, ಹೆಸರು 8 ಹೆಕ್ಟೇರ್‌, ಉದ್ದು 51 ಹೆಕ್ಟೇರ್‌, ಸೋಯಾಬಿನ್‌ 59 ಹೆಕ್ಟೇರ್‌, ಹತ್ತಿ 5 ಹೆಕ್ಟೇರ್‌, ಕಬ್ಬು 177 ಸೇರಿ 8452 ಹೆಕ್ಟೇರ್‌ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ನಿಂಬರಗಾ ವಲಯದಲ್ಲಿ ತೊಗರಿ 8215 ಹೆಕ್ಟೇರ್‌, ಹೆಸರು 11 ಹೆಕ್ಟೇರ್‌, ಉದ್ದು 125 ಹೆಕ್ಟೇರ್‌, ಸೋಯಾಬಿನ್‌ 47 ಹೆಕ್ಟೇರ್‌, ಹತ್ತಿ 11 ಹೆಕ್ಟೇರ್‌, ಕಬ್ಬು 566 ಹೆಕ್ಟೇರ್‌ ಹೀಗೆ ಒಟ್ಟು 8955 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ನರೋಣಾ ವಲಯಕ್ಕೆ ತೊಗರಿ 7725 ಹೆಕ್ಟೇರ್‌, ಹೆಸರು 13 ಹೆಕ್ಟೇರ್‌, ಉದ್ದು 115 ಹೆಕ್ಟೇರ್‌, ಸೋಯಾಬಿನ್‌ 598 ಹೆಕ್ಟೇರ್‌, ಹತ್ತಿ 2 ಹೆಕ್ಟೇರ್‌, ಕಬ್ಬು 15 ಹೆಕ್ಟೇರ್‌ ಹೀಗೆ ಒಟ್ಟು 8468 ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ರೀತಿಯ ಬೆಳೆಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಧಾರವಾಡ: ಅಖಿಲ ಭಾರತೀಯ ಆರೆಸ್ಸೆಸ್ ಬೈಠಕ್ ಗೆ ಚಾಲನೆ

ಒಟ್ಟು 652 ರೈತರ 966.26 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಈರುಳ್ಳಿ ಟೊಮ್ಯಾಟೋ, ಬದನೆ, ಮೆಣಸಿಕಾಯಿ ಹಾಗೂ ಇತರೆ ತರಕಾರಿ ಸೇರಿದಂತೆ ಪಪ್ಪಾಯಿ, ಬಾಳೆ ಹಣ್ಣು ಸೇರಿ ಆಳಂದ ವಲಯದಲ್ಲಿ 192 ಎಕರೆ, ಖಜೂರಿ 167.05 ಎಕರೆ, ಮಾದನಹಿಪ್ಪರಗಾ 244.15 ಎಕರೆ, ನಿಂಬರಗಾ 250.05 ಎಕರೆ, ನರೋಣಾ 113.05 ಎಕರೆಯಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಹಾನಿಯಾದ ಕುರಿತು ಸರ್ವೇ ಕೈಗೊಂಡು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಂತಿಮ ಪಟ್ಟಿಯನ್ನು ತಹಶೀಲ್ದಾರ್‌ಗೆ ಸಲ್ಲಿಸಿದ ಮೇಲೆ ಹಾನಿಯ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಈ ಕ್ಯಾ ಪ್ರಗತಿಯಲ್ಲಿದೆ. -ಶಂಕರಗೌಡ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ

ವಿವಿಧ ಬೆಳೆಗಳ ಹಾನಿ ಕುರಿತು ಯಾರಿಗೂ ಅನ್ಯಾಯವಾಗದಂತೆ ತಾಲೂಕಿನಾದ್ಯಂತ 42994 ಹೆಕ್ಟೇರ್‌ ಬೆಳೆ ಹಾನಿ ಕುರಿತು ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಕಳುಹಿಸಲಾಗುತ್ತಿದೆ. -ಶರಣಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ

-ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next