Advertisement

ಲಕ್ಷಕ್ಕೂ ಹೆಚ್ಚು ಜನರಿಗೆ ವಿಮಾ ಚಿಕಿತ್ಸಾ ಸೌಲಭ್ಯ

01:11 PM Apr 24, 2017 | |

ನಂಜನಗೂಡು: ಈ ಕಾರ್ಮಿಕ ಆಸ್ಪತ್ರೆ ಯಿಂದಾಗಿ ಈ ಭಾಗದ 517 ಕಾರ್ಖಾನೆಗಳ 34 ಸಾವಿರ ಕಾರ್ಮಿಕರು ಹಾಗೂ ಅವರ ಕುಟುಂಬದ 1 ಲಕ್ಷಕ್ಕೂ ಹೆಚ್ಚು ಜನರಿಗೆ ವಿಮಾ ಚಿಕಿತ್ಸಾ ಸೌಲಭ್ಯ ದೊರೆಯಲಿದೆ ಎಂದು ಸಂಸದ ಆರ್‌. ಧ್ರುವನಾರಾಯಣ ಹೇಳಿದರು.

Advertisement

ನೂತನ ಶಾಸಕ ಕಳಲೆ ಕೇಶವ ಮೂರ್ತಿ ಅವರೊಂದಿಗೆ 8.65 ಕೋಟಿ ವೆಚ್ಚದ ಕಾರ್ಮಿಕ ವಿಮಾ ಆಸ್ಪತ್ರೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, 
ರಾಜ್ಯದ ಪ್ರಮುಖ ಕೈಗಾರಿಕಾ ಕೇಂದ್ರವಾದ ಇಲ್ಲಿಗೆ ಈ ಆತ್ಯಾಧುನಿಕ ಆಸ್ಪತ್ರೆ  ಮಂಜೂರು ಮಾಡಿದವರು ಹಿಂದಿನ ಕೇಂದ್ರ ಸಚಿವರಾದ ಆಸ್ಕರ್‌ ಫ‌ರ್ನಾಂಡಿಸ್‌ ಹಾಗೂ ಮಲ್ಲಿ ಕಾರ್ಜುನ ಖರ್ಗೆ ಎಂದ ಸಂಸದರು ಅದಕ್ಕಾಗಿ ಅವರುಗಳಿಗೆ ಕೃತಜ್ಞತೆ ಸಲ್ಲಿಸಿದರು.

ನಾಲ್ಕು ವರ್ಷಗಳ ಹಿಂದೆಯೇ ಈ ಆಸ್ಪತ್ರೆಯ ಕಾಮಗಾರಿಗೆ ಅಂದಿನ ಕಾರ್ಮಿಕ ಸಚಿವ ಸುರೇಶ್‌ ಶಂಕುಸ್ಥಾಪನೆ ನೆರವೇರಿಸಿದ್ದದು ಆದರೆ  ಕಾರಣಾಂ ತರದಿಂದ ಈಗ ಕಾಮಗಾರಿ ಪ್ರಾರಂಭವಾಗುತ್ತಿದೆ. ಇನ್ನೂ 15 ತಿಂಗಳಿನಲ್ಲಿ ಈ ಆತ್ಯಾಧುನಿಕ ಆಸ್ಪತ್ರೆ ಲೋಕಾರ್ಪಣೆಗೊಳ್ಳುವುದು ಎಂದರು. 

ಪ್ರತಿ ಕಾಮಿಕರಿಗೆ 3 ಸಾವಿರ: ಕೇಂದ್ರ ಸರ್ಕಾರ ನೋಂದಾವಣೆ ಗೊಂಡ ಪ್ರತಿ ಕಾರ್ಮಿಕನಿಗೆ ವಾರ್ಷಿಕವಾಗಿ ತಲಾ 3 ಸಾವಿರ ನೀಡುತ್ತಿದ್ದು ಆ ಹಣದಲ್ಲಿ  ರಾಜ್ಯಸರ್ಕಾರ ಕಾರ್ಮಿಕರ ಆರೋಗ್ಯದ ವೆಚ್ಚ ಭರಿಸಲಾಗುತ್ತದೆ . ನಮ್ಮ ಕಾರ್ಮಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ನೂತನ ಶಾಸಕ ಕಳಲೆ ಕೇಶವ ಮೂರ್ತಿ ಮಾತನಾಡಿ, 1 ಲಕ್ಷದ 44  ಸಾವಿರ ಜನರಿಗೆ ಉಪ ಯೋಗವಾಗುವ ಈ  ಜನೋಪಯೋಗಿ ಸಮಾರಂಭ ತಮ್ಮ ಪ್ರಥಮ ಸರ್ಕಾರಿ ಸಮಾರಂಭವಾಗಿದ್ದು ತಮ್ಮ ಭಾಗ್ಯವೇ ಸರಿ ಎಂದರು.

1968ರಲ್ಲಿ ಬಿರ್ಲಾ ಒಡೆತನದ ಸುಜಾತಾ ಹತ್ತಿಗಿರಣಿಯ 9 ಸಾವಿರ ಕಾರ್ಮಿಕರಿಗಾಗಿ ಇಲ್ಲಿ ವಿಮಾ ಆಸ್ಪತ್ರೆ ಆರಂಭಗೊಳ್ಳುವಂತಾಗಿದ್ದನ್ನು ನೆನಪಿಸಿದ ಶಾಸಕರು ಈಗ ಈ ಆಸ್ಪತ್ರೆಯ ವ್ಯಾಪ್ತಿ ಚಾಮರಾಜನಗರ ಜಿಲ್ಲೆ ವ್ಯಾಪಿಸಿದೆ. 1990ರಲ್ಲಿ 8 ಏಕರೆ ಪ್ರದೇಶದ ಈ ಜಾಗದಲ್ಲಿ ಆಸ್ಪತ್ರೆಯು  ಸ್ವಂತ ಕಟ್ಟಡದಲ್ಲಿ ನಡೆಯುವಂತಾಯಿತು ಎಂದು ತಿಳಿಸಿದರು.

Advertisement

ಈಗ ಇದೇ ಜಾಗದಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣವಾಗುವುದರಿಂದ ನಮ್ಮ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು. ಕಾರ್ಮಿಕ ಇಲಾಖೆಯ ಸಹಾಯಕ ನಿರ್ದೇಶಕ ಸತ್ಯನಾರಾಯಣ ಮಾತನಾಡಿ, ಕೇಂದ್ರ ಸರ್ಕಾರ ರಾಷ್ಟ್ರದ ವಿವಿಧ ಮೆಡಿಕಲ್‌ ಕಾಲೇಜುಗಳಲ್ಲಿ ನಮ್ಮ ಕಾರ್ಮಿಕರ ಮಕ್ಕಳಿಗಾಗಿ ಪ್ರತಿ ಕಾಲೇಜು ಗಳಲ್ಲಿ 45 ಸ್ಥಾನಗಳನ್ನು ಕಾದಿರಿಸಿದ್ದು, ಅದನ್ನು ಪಡೆದುಕೊಳ್ಳುವ ಅರ್ಹತೆಯನ್ನು ಕಾರ್ಮಿಕರ ಮಕ್ಕಳು ಪಡೆದು ಕೊಳ್ಳಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next