Advertisement

ಸಂವಿಧಾನ ಅವಮಾನ ಸಹಿಸಲಾಗದು

03:01 PM May 02, 2019 | pallavi |

ಬೆಳಗಾವಿ: ಸಂವಿಧಾನದಲ್ಲಿ ಭಾರತದ ಪರಂಪರೆ ಕಡೆಗಣಿಸಲಾಗಿದೆ. ಧರ್ಮ ಶಾಸ್ತ್ರಗಳೇ ನಮ್ಮ ಸಂವಿಧಾನ ಎಂದು ನಾಡಿನ ಖ್ಯಾತ ಸಾಹಿತಿ ಎಸ್‌.ಎಲ್. ಭೈರಪ್ಪ ಹೇಳಿಕೆ ನೀಡುವ ಮೂಲಕ ನಮ್ಮ ಪವಿತ್ರ ಸಂವಿಧಾನವನ್ನೇ ಅವಮಾನಿಸಿದ್ದಾರೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯಿಕ ಹೇಳಿದರು.

Advertisement

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಘಟಕದಿಂದ ವತಿಯಿಂದ ವಿಶ್ವ ಕಾರ್ಮಿಕ ದಿನಾಚರಣೆ ನಿಮಿತ್ತ ಬುಧವಾರ ನಡೆದ ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ದೇಶದ ಕುಲಗೆಟ್ಟ ಪರಂಪರೆ ಹೊಡೆದು ಹಾಕಲು ಹುಟ್ಟಿಕೊಂಡಿದ್ದೇ ಬಂಡಾಯ ಸಾಹಿತ್ಯ. ಡಾ| ಬಿ.ಆರ್‌. ಅಂಬೇಡ್ಕರ್‌ ದೇಶದ ಎಲ್ಲ ನಾಗರಿಕರ ಉನ್ನತಿ ಆಧರಿಸಿ ಸಂವಿಧಾನ ರಚಿಸಿದ್ದಾರೆ. ಆದರೆ ಭೈರಪ್ಪ ಅವರು ಒಳ್ಳೆಯ ಜ್ಞಾನಗಳಾಗಿ ಸಂವಿಧಾನಕ್ಕೆ ಅವಮಾನಿಸುವ ರೀತಿ ಮಾತಾಡಿದ್ದು ತಪ್ಪು. ಭೈರಪ್ಪ ಅವರ ದೃಷ್ಟಿಯಲ್ಲಿ ದೇವದಾಸಿಯರ ಮಕ್ಕಳು ದೇವದಾಸಿಗಳೇ ಆಗಬೇಕೆ ಎಂದು ಪ್ರಶ್ನಿಸಿದ ಅವರು, ತುಳಿತಕ್ಕೊಳಗಾದ ಸಮುದಾಯ ನಿರಂತರವಾಗಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾಯಕದಲ್ಲಿ ಮೇಲು- ಕೀಳು ಇಲ್ಲ: ಬಂಡಾಯ ಸಂಘಟನೆ ರಾಜ್ಯ ಸಂಚಾಲಕ ಡಾ| ಯಲ್ಲಪ್ಪ ಹಿಮ್ಮಡಿ ಮಾತನಾಡಿ, ಕಾಯಕದಲ್ಲಿ ಮೇಲು- ಕೀಳೆಂಬುದಿಲ್ಲ. ಅದಕ್ಕೆ 12ನೇ ಶತಮಾನದಲ್ಲಿ ಬಸವಣ್ಣನವರು ಕಡಿವಾಣ ಹಾಕಿದ್ದಾರೆ. ಇಂದು ವಿಶ್ವ ಕಾರ್ಮಿಕ ದಿನಾಚರಣೆ ನಿಮಿತ್ತ ನಮ್ಮ ನಗರ ಸ್ವಚ್ಛವಾಗಿಡುವ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು.

ಪೌರ ಕಾರ್ಮಿಕರಾದ ಗೋಪಾಲ ಹೂವನ್ನವರ, ಪರಶುರಾಮ ಹೂವನ್ನವರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

Advertisement

ಸಂತೋಷ ನಾಯಕ, ನಿಖೀತಾ ಭರಮನ್ನವರ, ಲಕುಷಾ ಭರಮನ್ನವರ ಕ್ರಾಂತಿಗೀತೆ ಹಾಡಿದರು. ಮಹಾಂತೇಶ ರಣಗಟ್ಟಿಮಠ, ಮಂಜುನಾಥ ಪಾಟೀಲ, ಅತೀಶ ಢಾಲೆ, ಗಜಾನನ ಸಂಗೋಟೆ, ಶಂಕರ ಕೊಡಲೆ, ರಮೇಶ ಕೋಲಕಾರ, ಅಡಿವೆಪ್ಪ ಇಟಗಿ, ರಾಜು ಸನದಿ, ನೀಲಕಂಠ ಭೂಮನ್ನವರ, ರಮೇಶ ಹುಲ್ಲೂರು ಇತರರು ಇದ್ದರು.

ಶ‌ಂಕರ ಬಾಗೇವಾಡಿ ನಿರೂಪಿಸಿದರು. ಸಂಶೋಧನಾ ವಿದ್ಯಾರ್ಥಿ ಬಾಲಕೃಷ್ಣ ನಾಯಕ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next