Advertisement

ಬಸವಣ್ಣಗೆ ಅವಮಾನ ಖಂಡಿಸಿ ಪ್ರತಿಭಟನೆ

11:36 AM Jun 25, 2022 | Team Udayavani |

ಜೇವರ್ಗಿ: ವಿಶ್ವಗುರು ಅಣ್ಣ ಬಸವಣ್ಣನ ಮೂರ್ತಿಗೆ ಚಿತ್ತಾಪುರ ಪಟ್ಟಣದಲ್ಲಿ ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ವೀರಶೈವ ಸಮಾಜ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್‌ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

Advertisement

ಚಿತ್ತಾಪುರ ಪಟ್ಟಣದ ಮುಖ್ಯ ಸರ್ಕಲ್‌ದಲ್ಲಿರುವ ಅಶ್ವಾರೂಢ ವಿಶ್ವಗುರು ಬಸವಣ್ಣನ ಮುಖಕ್ಕೆ ಕಪ್ಪು ಬಟ್ಟೆ ಹಾಕಿ ಅವಮಾನ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ. ಇದರ ಹಿಂದೆ ಇನ್ನು ಕೆಲ ಕಿಡಿಗೇಡಿಗಳ ಕೈವಾಡವಿದೆ. ಕೂಡಲೇ ಈ ಕುರಿತು ತನಿಖೆ ಕೈಗೊಂಡು ಎಲ್ಲ ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು. ಇಂತಹ ಘಟನೆ ಮರುಕಳುಹಿಸದಂತೆ ಎಚ್ಚರವಹಿಸಬೇಕು. ನಿರ್ಲಕ್ಷಿಸಿದರೇ ಮುಂಬರುವ ದಿನಗಳಲ್ಲಿ ತಾಲೂಕಿನಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ವೀರಶೈವ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಸಿದ್ಧು ಸಾಹು ಅಂಗಡಿ ಎಚ್ಚರಿಸಿದರು.

ನಂತರ ತಹಶೀಲ್ದಾರ್‌ ಸಂಜೀವ ಕುಮಾರ ದಾಸರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ವೀರಶೈವ ಸಮಾಜದ ಗೌರವಾಧ್ಯಕ್ಷ ಗುರುಲಿಂಗಯ್ಯಸ್ವಾಮಿ ಯನಗುಂಟಿ, ಉಪಾಧ್ಯಕ್ಷ ಭಗವಂತ್ರಾಯ ಶಿವಣ್ಣವರ್‌, ಅಶೋಕ ಬಿರಾದಾರ ಗುಡೂರ, ಸಿದ್ಧು ಅಂಕಸದೊಡ್ಡಿ, ಗುರುಲಿಂಗಪ್ಪಗೌಡ ಮಾಲಿಪಾಟೀಲ, ರಾಜಶೇಖರ ಶಹಾಬಾದ ಜೈನಾಪುರ, ಮಂಜುನಾಥ ಪುರಾಣಿಕ ಯಡ್ರಾಮಿ, ರಮೇಶ ಪತ್ತಾರ, ಅಣ್ಣಾರಾಯ ನರಿಬೋಳ, ಸಾಹೇಬಗೌಡ ಬುಟ್ನಾಳ, ಕೇದಾರಲಿಂಗಯ್ಯ ಹಿರೇಮಠ, ವಿಶಾಲ ಭಂಕೂರ, ಬಸವಂತ್ರಾಯ ನರಿಬೋಳ ಹಾಗೂ ವೀರಶೈವ ಸಮಾಜದ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next