Advertisement

ಅಂಬೇಡ್ಕರ್‌ಗೆ ಅಪಮಾನ: ಖಂಡನೆ

03:32 PM Nov 15, 2019 | Suhan S |

ಸಕಲೇಶಪುರ: ಸಂವಿಧಾನ ಶಿಲ್ಪಿ ಡಾ. ಬಿ. ಆರ್‌. ಅಂಬೇಡ್ಕರ್‌ ಅವರಿಗೆ ಅಪಮಾನ ಮಾಡಿರುವ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಉಮಾಶಂಕರ್‌ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಾಲೂಕು ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮಂಜುನಾಥ್‌ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ತಾಲೂಕು ದಲಿತರ ಪರ ಸಂಘಟನೆಗಳ ಒಕ್ಕೂಟದ ಸಮಿತಿ ಅಧ್ಯಕ್ಷ ಕಾಡಪ್ಪ ಮಾತನಾಡಿ, ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಉಮಾಶಂಕರ್‌ ಅವರು ಅ.28ರಂದು ಹೊರಡಿ ಸಿರುವ ಶಿಕ್ಷಣ ಇಲಾಖೆ ಸುತ್ತೋಲೆ ಭಾರತದ ಸಂವಿಧಾನವನ್ನು ಅಂಬೇಡ್ಕರ್‌ ಅವರು ರಚಿಸಿಲ್ಲ, ಸಂವಿಧಾನವನ್ನು ಅನೇಕಸದಸ್ಯರನ್ನೊಳಗೊಂಡ ಸಮಿತಿ ರಚಿಸಿರುವುದಾಗಿ ಪಠ್ಯದಲ್ಲಿ ಸೇರ್ಪಡೆಗೊಳಿಸಿದ್ದಾರೆ ಎಂದು ಆಪಾದಿಸಿದರು. ಈ ಸುತ್ತೋಲೆಯಿಂದ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಂವಿಧಾನ ರಚನಾ ಸಮಿತಿ: 1947ರ ಆ.15 ರಂದು ನಮ್ಮ ಭಾರತಕ್ಕೆ ಸ್ವಾತಂತ್ರ ಸಿಕ್ಕಿದ ನಂತರ ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ  ಪ್ರಸಾದ್‌ ಅವರಿಂದ ನೇಮಕಗೊಂಡ ಭಾರತದ ಸಂವಿಧಾನ ರಚಿಸುವ ಜವಾಬ್ದಾರಿಯನ್ನು 7 ಜನರ ಸಮಿತಿಯ ಸದಸ್ಯರಿಗೆ ನೀಡಲಾಗಿತ್ತು. ಆದರೆ ಸಮಿತಿ ಸದಸ್ಯರು ಸಂವಿಧಾನ ರಚನೆಯ ಜವಾಬ್ದಾರಿಯನ್ನು ನಿರ್ವಹಿಸದೇ ತಟಸ್ಥರಾಗಿದ್ದರು ಎಂದರು.

ಅಂಬೇಡ್ಕರ್‌ ಪರಿಶ್ರಮ: ಅಂದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಅವಿರತವಾಗಿ 2 ವರ್ಷ 11 ತಿಂಗಳು 28 ದಿನಗಳ ಕಾಲ ಸುದೀರ್ಘ‌ವಾಗಿ ಒಬ್ಬರೇ ತಮ್ಮ ಕಾಲ ಮಿತಿಯಲ್ಲಿ ಈ ದೇಶಕ್ಕೆ ಲಿಖೀತ ಸಂವಿಧಾನ ಬರೆದು ಭಾರತ ರಾಷ್ಟ್ರಕ್ಕೆ ಸಮರ್ಪಿಸಿರುವುದು ಇತಿಹಾಸದಲ್ಲಿ ದಾಖಲಾಗಿದೆ. ವಿಶ್ವದ ಎಲ್ಲಾ ದೇಶದ ಜನರಿಗೂ ತಿಳಿದ ವಿಚಾರವಾಗಿದೆ ಮತ್ತು ಭಾರತ ದೇಶವೂ ಸಹ ಸಂವಿಧಾನ ಶಿಲ್ಪಿ, ಭಾರತರತ್ನ, ವಿಶ್ವ ಮಾನವ ಎಂಬ ಅನೇಕ ಬಿರುದುಗಳನ್ನು ನೀಡಿ ಗೌರವಿಸಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ದಲಿತರ ಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಬೈಕೆರೆ ದೇವರಾಜ್‌, ಜೈಭೀಮ್‌ ಮಂಜು, ವಳಲಹಳ್ಳಿ ವೀರೇಶ್‌, ಹೆತ್ತೂರು ನಾಗರಾಜ್‌,ಹೆತ್ತೂರು ದೊಡ್ಡಯ್ಯ, ಮಳಲಿ ಶಿವಣ್ಣ, ಲಕ್ಷ್ಮಣ್‌ ಕೀರ್ತಿ, ಹಾನುಬಾಳ್‌ ಗೋಪಾಲ್‌, ಕೌಡಹಳ್ಳಿ ತಿಮ್ಮರಾಜ್‌, ತಾಲೂಕು ಪಂಚಾಯಿತಿ ಸದಸ್ಯ ಯಡೆಹಳ್ಳಿ ಮಂಜುನಾಥ್‌ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next