Advertisement

ಬೋಧಕರಿಗೆ ಡಿಜಿಟಲ್ ತಂತ್ರಜ್ಞಾನ ಮಾಹಿತಿ ಅಗತ್ಯ

11:35 AM May 31, 2019 | Team Udayavani |

ಬೆಳಗಾವಿ: ಉಪನ್ಯಾಸಕರಲ್ಲಿ ವೃತ್ತಿ ಬಗ್ಗೆ ಶಿಸ್ತು, ಬದ್ಧತೆ ಮತ್ತು ಪ್ರಾಮಾಣಿಕತೆ ಅಗತ್ಯ. ಶಿಕ್ಷಕ ವೃತ್ತಿಗೆ ನಿವೃತ್ತಿ ಎನ್ನುವುದು ಇಲ್ಲ. ಶಿಕ್ಷಕರು ತಮ್ಮ ನಿವೃತ್ತಿ ನಂತರವೂ ತಮ್ಮ ಜ್ಞಾನವನ್ನು ಇತರರಿಗೆ ನೀಡಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಶಿವಾನಂದ ಹೊಸಮನಿ ಹೇಳಿದರು.

Advertisement

ಮಹಾಂತೇಶ ನಗರದ ಮಹಾಂತ ಸಭಾ ಭವನದಲ್ಲಿ ಎಂಎನ್‌ಅರ್‌ಎ ಶಿಕ್ಷಣ ಮಹಾವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ವ್ಯವಸ್ಥಾಪನಾ ವಿಭಾಗದ ಪ್ರಾಧ್ಯಾಪಕರ ಸಂಘದ ವತಿಯಿಂದ ಗುರುವಾರ ನಡೆದ ಕಲಿಯುವಿಕೆ, ಕಲಿಸುವಿಕೆ ಮತ್ತು ಮೌಲ್ಯಮಾಪನ ಕುರಿತು ಹಮ್ಮಿಕೊಳ್ಳಲಾದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಲಿಯುವಿಕೆ ಮತ್ತು ಕಲಿಸುವಿಕೆಗೆ ಎಂದೂ ಕೊನೆ ಎನ್ನುವುದು ಇಲ್ಲ. ಇವು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಇಂದಿನ ಅಧುನಿಕ ಜಗತ್ತಿನಲ್ಲಿ ಉಪನ್ಯಾಸಕರು ಕೂಡ ಡಿಜಿಟಲ್ ತಂತ್ರಜ್ಞಾನ ಬಗ್ಗೆ ತಿಳಿದುಕೊಳ್ಳಬೇಕು. ಆಧುನಿಕ ತಂತ್ರಜ್ಞಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕಂಪ್ಯೂಟರ್‌ ಸಾಕ್ಷರತೆ ಎಲ್ಲ ಉಪನ್ಯಾಸಕರಿಗೆ ಅಗತ್ಯವಾಗಿದೆ. ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲಿ ಪಾಲಕರಷ್ಟೇ ಜವಾಬ್ದಾರಿ ಶಿಕ್ಷಕರ ಮೇಲೆಯೂ ಇದೆ. ಹೀಗಾಗಿ ಶಿಕ್ಷಕರು ಉತ್ತಮ ಮಾರ್ಗದರ್ಶಕರು ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ವ್ಯವಸ್ಥಾಪನೆ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಡಾ| ಚಂದ್ರಶೇಖರ ಗುಡಸಿ ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರಿನ ನ್ಯಾಕ್‌ ಕೇಂದ್ರದ ಡಾ| ವಿ.ಬಿ. ಹಿರೇಮಠ, ಡಾ| ಎಸ್‌.ಒ. ಹಲಸಗಿ, ಡಾ| ಸಿ.ವಿ. ಕೊಪ್ಪದ, ಡಾ| ಬಿ.ಎಸ್‌. ಮಾಳಿ, ಪ್ರೊ| ಡಿ.ಎಸ್‌. ಗುಡದಿನ್ನಿ, ಸಿಂಡಿಕೇಟ್ ಸದಸ್ಯ ಡಾ| ಎಸ್‌.ಎಂ. ಜೋಶಿ ಪ್ರೊ| ಬಸವರಾಜ ಗಲಗಲಿ ಸೇರಿದಂತೆ ಇತರರು ಇದ್ದರು.

Advertisement

ಬೆಂಗಳೂರಿನ ನ್ಯಾಕ್‌ ಕೇಂದ್ರದ ಮೌಲ್ಯಮಾಪಕ ಡಾ| ವಿ.ಬಿ.ಹಿರೇಮಠ ಅವರು ಕಲಿಯುವಿಕೆ, ಕಲಿಸುವಿಕೆ ಮತ್ತು ಮೌಲ್ಯಮಾಪನ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಿವೃತ್ತ ಪ್ರಾಚಾರ್ಯ ಡಾ| ಜಿ.ಜಿ. ಕರಲಟ್ಟಿ, ಡಾ| ಪ್ರಹ್ಲಾದ ಹುಯಿಲಗೋಳ ಮತ್ತು ಪ್ರೊ| ಪಿ.ಕೆ. ರೆಡ್ಡೇರ ಮತ್ತು ಪಿಎಚ್‌ಡಿ ಪಡೆದ ಡಾ| ಜ್ಯೋತಿ ಬಿರಾದಾರ, ಡಾ| ಎಂ.ಬಿ. ಯಾದಗುಡಿ ಅವರನ್ನು ಸನ್ಮಾನಿಸಲಾಯಿತು. ಡಾ| ಆರ್‌.ಎಂ. ಪಾಟೀಲ ಸ್ವಾಗತಿಸಿದರು. ಡಾ| ನಿರ್ಮಲಾ ಬಟ್ಟಲ ವಂದಿಸಿದರು. ಡಾ| ವಿದ್ಯಾ ಜೀರಗೆ ನಿರೂಪಿಸಿದರು.

ಡಾ| ರಾಜಶೇಖರ ಹುರಕಡ್ಲಿ, ಪ್ರೊ| ಎಸ್‌.ಟಿ. ಧನೋಡೆ, ಮಾರುತಿ ಡೊಂಬರ, ಮಂಟೂರ, ಡಾ| ಸುಭಾಸ ಕಚಕರಟ್ಟಿ ಸೇರಿದಂತೆ ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ವಾಣಿಜ್ಯ ಮತ್ತು ವ್ಯವಸ್ಥಾಪನಾ ವಿಭಾಗದ ಉಪನ್ಯಾಸಕರು ಇದ್ದರು.

ಸನ್ಮಾನದ ಹಣ ಆಶ್ರಮಕ್ಕೆ ಸಹಾಯ:

ನಾಲ್ಕು ವರ್ಷಗಳ ಅವಧಿಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಯಾವುದೇ ಸಾರ್ವಜನಿಕರ ಸಮಾರಂಭಗಳಲ್ಲಿ ನನಗೆ ಸನ್ಮಾನ ಮಾಡದೆ, ಸನ್ಮಾನ ಮಾಡಲು ತಗಲುವ ವೆಚ್ಚವನ್ನು ಚೆಕ್‌ ಮೂಲಕ ನನಗೆ ನೀಡಿದರೆ ಅದನ್ನು ಸ್ಥಳೀಯ ವಿವೇಕಾನಂದ ಆಶ್ರಮ ಮತ್ತು ಮಾಹೇಶ್ವರ ಅಂಧ ಮಕ್ಕಳ ಶಾಲೆಗೆ ನೀಡುತ್ತಿದ್ದೇನೆ ಎಂದು ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ| ಶಿವಾನಂದ ಹೊಸಮನಿ ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next