Advertisement

ನಂದಿಗುಡ್ಡೆ ಶ್ಮಶಾನದಲ್ಲಿ ಮೂಲಸೌಕರ್ಯ ಕಲ್ಪಿಸಲು ಶಾಸಕ ಲೋಬೋ ಸೂಚನೆ

02:00 AM Jul 13, 2017 | Team Udayavani |

ಕದ್ರಿ: ನಂದಿಗುಡ್ಡೆ ಶ್ಮಶಾನದಲ್ಲಿ ಎಲ್ಲ ರೀತಿಯ ಮೂಲಭೂತ ಆವಶ್ಯಕತೆಗಳನ್ನು ಪೂರೈಸುವಂತೆ ಶಾಸಕ ಜೆ.ಆರ್‌. ಲೋಬೋ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಕದ್ರಿಯ ತಮ್ಮ ಕಚೇರಿಯಲ್ಲಿ ನಂದಿಗುಡೆ ಶ್ಮಶಾನ ಸಮಿತಿಯ ಸಭೆಯಲ್ಲಿ ನಂದಿಗುಡ್ಡೆ ಶ್ಮಶಾನದ ನವೀಕರಣ ಕಾಮಗಾರಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

Advertisement

ನಂದಿಗುಡ್ಡೆ ಶ್ಮಶಾನದಲ್ಲಿ ಜನರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಬೇಕು. ರಾತ್ರಿ ಹೊತ್ತು ಶ್ಮಶಾನಕ್ಕೆ ಬಂದರೆ ಅನುಕೂಲವಾಗುವಂತೆ ಜನರೇಟರ್‌ ವ್ಯವಸ್ಥೆ ಒದಗಿಸಬೇಕು. ಶ್ಮಶಾನದ ಪರಿಸರವನ್ನು ಸ್ವಚ್ಛಗೊಳಿಸಬೇಕು ಎಂದು ತಿಳಿಸಿದರು. ವಾಹನಗಳಿಗೆ ಸೂಕ್ತ ಪಾರ್ಕಿಂಗ್‌ ಸ್ಥಳ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನಂದಿಗುಡ್ಡೆ ಶ್ಮಶಾನ ಸಮಿತಿ ಹೆಚ್ಚು ಕ್ರಿಯಾಶೀಲವಾಗಿ ಕಟ್ಟಿಗೆ ಸಂಗ್ರಹಣೆ ಮಾಡಲು ಸೂಕ್ತ ಶೆಡ್‌ ನಿರ್ಮಿಸುವಂತೆಯೂ ಅವರು ಸೂಚಿಸಿದರು. ನಂದಿಗುಡ್ಡೆ ಶ್ಮಶಾನ ಸಮಿತಿಯ ಸದಸ್ಯರು ಹಾಗೂ ಸ್ಥಳೀಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next