ಚಿತ್ರದುರ್ಗ: ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನಿಂದ 2017-18ರಿಂದ 2020-21ನೇ ಸಾಲಿನವರೆಗೆ 139.47 ಕೋಟಿ ರೂ.ಗಳಲ್ಲಿ ಒಟ್ಟು 167 ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಇದರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದರೂ ಇನ್ನು ಆರಂಭವಾಗದಕಾಮಗಾರಿಗಳನ್ನು ರದ್ದು ಮಾಡಿ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ನಗರದ ಜಿಲ್ಲಾ ಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಖನಿಜ ಪ್ರತಿಷ್ಠಾನದ ಸಭೆಯ ನಂತರ ಅವರುನೀಡಿದರು.2017-18ರಲ್ಲಿ 21 ಕೋಟಿ, 2019-20ರಲ್ಲಿ 65.17 ಕೋಟಿ, 2020-2021ರಲ್ಲಿ 53.30 ಕೋಟಿ ರೂ. ಸೇರಿ ಒಟ್ಟು 139.40 ಕೋಟಿ ರೂ. ಕ್ರಿಯಾ ಯೋಜನೆ ತಯಾರಿಸಿ ಅನುಮೋದಿಸಲಾಗಿದೆ. ಇದರಲ್ಲಿ 85.34 ಕೋಟಿಯ 131 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರೂ ಕೇವಲ 5 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಹಾಗೂ 20.55 ಕೋಟಿ ರೂ. ಮಾತ್ರ ವೆಚ್ಚ ಮಾಡಲಾಗಿದೆ. ಇದಕ್ಕೆಸಚಿವರು 2017-2018ನೇ ಸಾಲಿನಲ್ಲಿ ಕೈಗೊಂಡ ಕ್ರಿಯಾ ಯೋಜನೆ ಕಾಮಗಾರಿಗಳನ್ನು ಇನ್ನು ಪೂರ್ಣಗೊಳಿಸಿಲ್ಲ.ವಿಳಂಬ ಮಾಡದೆ ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಲುಅನುಷ್ಠಾನಾಧಿ ಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆಡಳಿತಾತ್ಮಕ ಅನುಮೋದನೆ ನೀಡಿದ 131 ಕಾಮಗಾರಿಗಳಲ್ಲಿ 23.56 ಕೋಟಿ ರೂ.ಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ 22 ಕಾಮಗಾರಿಗಳು, ಪರಿಸರ ಸಂರಕ್ಷಣೆ ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು 5 ಕಾಮಗಾರಿಗೆ 7.70 ಕೋಟಿ, ಹೆಲ್ತ್‌ಕೇರ್‌ನ 22 ಕಾಮಗಾರಿಗೆ 6.2 ಕೋಟಿ, ಶಿಕ್ಷಣದ 55 ಕಾಮಗಾರಿಗೆ ಸಂಬಂಧಿಸಿದಂತೆ 29.97 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 10 ಕಾಮಗಾರಿಗೆ 10.17 ಕೋಟಿ, ಹಿರಿಯ ನಾಗರಿಕ ಮತ್ತು ವಿಕಲಚೇತನರ ಕಲ್ಯಾಣಇಲಾಖೆಗೆ 6 ಕಾಮಗಾರಿಗೆ 4.31 ಕೋಟಿ, ಕೌಶಲ್ಯಾಭಿವೃದ್ಧಿ 4 ಕಾಮಗಾರಿಗೆ 1.70 ಕೋಟಿ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ 7 ಕಾಮಗಾರಿಗೆ 1.44 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜಾಗತಿಕವಾಗಿ ಹಾಗೂ ದೇಶದಲ್ಲಿ ಹರಡುತ್ತಿರುವ ಸಾಂಕ್ರಾಮಿಕ ರೋಗ ತಡೆಗಟ್ಟಲು ಡಿಎಂಎಫ್ ನಿ ಧಿಯಡಿಯಲ್ಲಿ ಸಂಗ್ರಹವಾದ ಶೇ.30 ರಷ್ಟು ಅನುದಾನ ಬಳಸಲು ಅವಕಾಶ ಮಾಡಿಕೊಡಲಾಗಿದೆ.
ಜಿಲ್ಲೆಯಲ್ಲಿ ಕೋವಿಡ್‌ಗಾಗಿ 36 ಕೋಟಿ ರೂ. ಮೀಸರಿಸಿದ್ದು, ಇದರಲ್ಲಿ 8.97 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೋವಿಡ್ ಗೆ ಅಗತ್ಯವಿರುವ ವೈದ್ಯಕೀಯ ಪರಿಕರ, ಲ್ಯಾಬ್ ಸೇರಿದಂತೆ ಇನ್ನಿತರ ಉದ್ದೇಶಕ್ಕಾಗಿ ಖರ್ಚು ಮಾಡಬಹುದಾಗಿದೆ. ಈ ಉದ್ದೇಶ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ವೆಚ್ಚ ಮಾಡುವಂತಿಲ್ಲ ಎಂದರು.
ನೂತನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಹೊಸದಾಗಿ ಸಂಗ್ರಹವಾಗುವ ಡಿಎಂಎಫ್ ನಿ ಧಿಯಲ್ಲಿ 25 ಕೋಟಿ ರೂ. ಮೀಸರಿಸಲಾಗಿದೆ. ಇನ್ನೂ ಅಗತ್ಯವಿರುವ ಅನುದಾನವನ್ನು ಗರಿಷ್ಠ ಮಟ್ಟದಲ್ಲಿ ನೀಡಲಾಗುತ್ತದೆ ಎಂದು ಸಮಿತಿಯ ಎಲ್ಲ ಸದಸ್ಯರು ಇದಕ್ಕೆ ಒಮ್ಮತ ಅಭಿಪ್ರಾಯ ವ್ಯಕ್ತಪಡಿಸಿದರು. ಮೆಡಿಕಲ್ ಕಾಲೇಜು ಆರಂಭಿಸುವುದು ನಮ್ಮೆಲ್ಲರ ಒತ್ತಾಸೆಯಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಂಸದ ಎ. ನಾರಾಯಣಸ್ವಾಮಿ, ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಟಿ. ರಘುಮೂರ್ತಿ, ಗೂಳಿಹಟ್ಟಿ ಡಿ. ಶೇಖರ್, ಎಂ. ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ. ಯೋಗೇಶ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಲಿಂಗರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.