Advertisement

ಮಿಡತೆಗಳಿಂದ ಹಾನಿ ತಪ್ಪಿಸಲು ಸೂಚನೆ

05:19 PM May 30, 2020 | Suhan S |

ಕೊಪ್ಪಳ: ಮಿಡತೆಗಳಿಂದ ಕೃಷಿ ಬೆಳೆಗಳಿಗೆ ಉಂಟಾಗುವ ಹಾನಿ ತಪ್ಪಿಸಲು ಅಗತ್ಯ ಮುನಚ್ಚರಿಕೆ ವಹಿಸುವಂತೆ ಪಿ. ಸುನೀಲ್‌ ಕುಮಾರ್‌ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮರುಭೂಮಿ ಮಿಡತೆಗಳಿಂದಾಗುವ ಹಾನಿ ತಪ್ಪಿಸುವ ಮುನಚ್ಚರಿಕೆ ಕ್ರಮ ಹಾಗೂ ಹತೋಟಿ ಕ್ರಮಗಳ ಬಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಮರುಭೂಮಿ ಮಿಡತೆಯನ್ನು ಸಣ್ಣ ಕೊಂಬಿನ ಮಿಡತೆ ಎಂದು ಕರೆಯುತ್ತಾರೆ. ಸಿಸ್ಟೊಸರ್ಕ ಗ್ರಿಗೇರಿಯ ಇದು ವಿಶ್ವದ ಅತ್ಯಂತ ವಿನಾಶಕಾರಕ ಕೀಟಗಳಲ್ಲೊಂದಾಗಿದೆ. ಗಾಳಿಯ ದಿಕ್ಕನ್ನೆ ಅವಲಂಬಿಸಿ ಮುನ್ನಗ್ಗುವ ಈ ಕೀಟ ಹಾದಿಯಲ್ಲಿ ಯಾವ ಆಹಾರವನ್ನು ಬಿಡದೆ ತಿನ್ನುತ್ತದೆ ಎಂದರು.

ಜಂಟಿ ಕೃಷಿ ನಿರ್ದೇಶಕಿ ಶಬಾನ ಶೇಖ್‌ ಮಾತನಾಡಿ, ಗಾಳಿ ದಿಕ್ಕು ಆಧರಿಸಿ ಮಿಡತೆ ಚಲಿಸುತ್ತಿದ್ದು, ಕೀಟಬಾಧಿತ ಪ್ರದೇಶದಲ್ಲಿ ಹೊಗೆ ಮತ್ತು ಬೆಂಕಿ ಹಾಕುವುದರಿಂದ ಕೀಟವನ್ನು ಬೇರೆಡೆಗೆ ಓಡಿಸಬಹುದು. ಕೀಟವು ಬೆಳೆಗಳಲ್ಲಿ ಕಂಡುಬಂದರೆ ಡ್ರಮ್‌, ಪಾತ್ರೆ ಅಥವಾ ಫಲಕಗಳನ್ನು ಬಡಿಯುವುದರ ಮೂಲಕ ಹೆಚ್ಚು ಶಬ್ಧ ಮಾಡಿ ಮಿಡತೆ ಓಡಿಸುವುದು, ಬೇವಿನ ಮೂಲದ ಕೀಟನಾಶಕಗಳನ್ನು (ಶೇ. 0.15 ಇ.ಸಿ. ಪ್ರತಿ ಲೀಟರಿಗೆ 3 ಮೀಲಿ ಲೀಟರ್‌) ಬೆಳೆಗಳಲ್ಲಿ ಸಿಂಪಡಿಸಿ, ಕೀಟವು ಬೆಳೆಹಾನಿ ಕಡಿಮೆ ಮಾಡುವುದು. ಬಾಧಿತ ಪ್ರದೇಶದಲ್ಲಿ ಕನಿಷ್ಠ 2 ಅಡಿ ಆಳ ಮತ್ತು 3 ಅಡಿ ಅಗಲದ ಗುಂಡಿ ನಿರ್ಮಿಸಿ ಮರಿಹುಳು ಸೆರೆ ಹಿಡಿದು ನಾಶಪಡಿಸುವುದು, ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಸೂಕ್ತ ರಸಾಯನಿಕ ಬಳಸಿ ಕೀಟಗಳ ಹತೋಟಿ ಮಾಡಬಹುದು. ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕೃಷಿ ವಿಜ್ಞಾನ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು ಎಂದರು. ಸಭೆಯಲ್ಲಿ ಎಡಿಸಿ ಎಂ.ಪಿ. ಮಾರುತಿ, ತೋಟಗಾರಿಕೆ ಡಿಡಿ ಕೃಷ್ಣ ಉಕ್ಕುಂ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next