Advertisement
ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನದಿಗಳ ನೀರು ಸಮುದ್ರ ಸೇರುವ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರುವ ಸಾಧ್ಯತೆಯಿದೆ. ಇಂತಹ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಬೇಕು ಎಂದರು.
ಮಾನ್ಸೂನ್ ಸಂದರ್ಭ ಗಾಳಿ -ಮಳೆಯಿಂದ ಮರಗಳು ಉರುಳುವ ಸಂಭವವಿದ್ದು, ಅಂತಹ ಮರಗಳನ್ನು ಗುರುತಿಸಿ, ತೆರವುಗೊಳಿಸುವ ಕುರಿತು ತತ್ ಕ್ಷ ಣವೇ ಕ್ರಮ ತೆಗೆದುಕೊಳ್ಳಬೇಕು. ಇದಕ್ಕಾಗಿ ಅರಣ್ಯ ಇಲಾಖೆಯ ಅನುಮತಿ ವಿಳಂಬವಾದಲ್ಲಿ ಮೊದಲು ಮರಗಳನ್ನು ತೆರವುಗೊಳಿಸಿ ಅನಂತರ ಘಟನೋತ್ತರ ಮಂಜೂರಾತಿ ಪಡೆಯಿರಿ. ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಾರ್ವಜನಿಕ ಕಾರ್ಯಗಳಿಗೆ ಯಾವುದೇ ತೊಂದರೆ, ವಿಳಂಬವಾಗದಂತೆ ಅಗತ್ಯ ನೆರವು ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕ ಕಟ್ಟಡದ ಆಡಿಟ್
ಎಲ್ಲ ಶಾಲಾ ಕಟ್ಟಡಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಭವನಗಳ ಸ್ಥಿತಿಗತಿ ಕುರಿತು ಆಡಿಟ್ ನಡೆಸಬೇಕು ಎಂದರು.
Related Articles
ವಿಕೋಪದಿಂದ ಮಾನವ ಜೀವ ಹಾನಿಯಾದಲ್ಲಿ ವರದಿಗಳನ್ನು ಶೀಘ್ರ ಸಿದ್ಧಪಡಿಸಿ 24 ಗಂಟೆಯ ಒಳಗೆ ಪರಿಹಾರ ವಿತರಿಸಬೇಕು ಎಂದರು.
Advertisement
ಮೇ 31ರೊಳಗೆ ಎಲ್ಲಾ ಇಲಾಖೆಗಳು ತಮ್ಮ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಅದರಂತೆ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.
ಜಿ.ಪಂ. ಸಿಇಒ ಪ್ರಸನ್ನ ಎಚ್., ಕುಂದಾಪುರ ಡಿಎಫ್‌ಒ ಆಶೀಶ್ ರೆಡ್ಡಿ, ಎಡಿಸಿ ವೀಣಾ, ಎ.ಸಿ. ರಾಜು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.