Advertisement

ಎಚ್‌1ಬಿ ನಿಯಮ ಬದಲು

12:30 AM Feb 23, 2019 | |

ವಾಷಿಂಗ್ಟನ್‌: ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳ ಸಂಗಾತಿಗಳಿಗೆ ನೀಡುವ ಎಚ್‌1ಬಿ ವೀಸಾ ನೀಡಿಕೆ ಕ್ರಮದಲ್ಲಿ ಬದಲು ಮಾಡುವ ಸರ್ಕಾರದ ಪ್ರಸ್ತಾಪ ಸ್ವೀಕೃತವಾಗಿದೆ ಎಂದು ಶ್ವೇತ ಭವನ ತಿಳಿಸಿದೆ. ಅಮೆರಿಕದ ಗೃಹ ಸಚಿವಾಲಯ ಈ ಪ್ರಸ್ತಾವನೆ ಕಳುಹಿಸಿ ಕೊಟ್ಟಿದೆ. ಒಂದು ವೇಳೆ ಈ ಕ್ರಮಕ್ಕೆ ಒಪ್ಪಿಗೆ ಸಿಕ್ಕಿದರೆ 90 ಸಾವಿರ ಮಂದಿಗೆ ಅನನುಕೂಲ ಉಂಟಾಗಲಿದೆ. ಈ ಪೈಕಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲಿದ್ದಾರೆ. ಶ್ವೇತ ಭವನ ಪರಿಷ್ಕೃತ ನಿಯಮಗಳನ್ನು 30 ದಿನಗಳ ಒಳಗಾಗಿ ಕೋರ್ಟ್‌ನ ರಿಜಿಸ್ಟ್ರಿಯಲ್ಲಿ ಪ್ರಕಟಿಸಬೇಕು. ಆಗ ಮಾತ್ರ ಹೊಸ ನಿಯಮ ಜಾರಿಗೆ ಬರುತ್ತವೆ. ಭಾರತೀಯ ಮೂಲದ ಅಮೆರಿಕ ಸಂಸದರಾದ ಕಮಲಾ ಹ್ಯಾರಿಸ್‌ ಸೇರಿದಂತೆ ಹಲವು ಮತ್ತು ಸಿಲಿಕಾನ್‌ ವ್ಯಾಲಿಯ ಪ್ರಮುಖ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳು ಈ ಕ್ರಮದಿಂದ ಅಮೆರಿಕದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದು ಈಗಾಗಲೇ ಪ್ರತಿಪಾದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next