Advertisement
ಮತ್ತೂಂದೆಡೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಮನೆಯೊಡತಿಗೆ ಎರಡು ಸಾವಿರ ರೂ. ತಲುಪಬೇಕು. ಮನೆಯೊಡತಿ ಅತ್ತೆಯಾ, ಸೊಸೆಯಾ ಎಂಬುದು ಖಾತರಿಪಡಿಸಿಕೊಂಡು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಇವೆಲ್ಲದಕ್ಕೂ ಸಮಯ ಹಿಡಿಯಲಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ನೀಡಿರುವ ಗ್ಯಾರಂಟಿ ಖಂಡಿತವಾಗಿಯೂ ಜಾರಿಗೆ ಬರಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು.
Related Articles
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಗ್ಯಾರಂಟಿ ಜಾರಿ ನಮ್ಮ ಬದ್ಧತೆ. ಇದರ ಬಗ್ಗೆ ಬಿಜೆಪಿಯವರು ಮಾತನಾಡಲಿ, ಅವರು ಟೀಕೆ, ಮಾತನಾಡಿದಾಗಲೇ ಗ್ಯಾರಂಟಿ ಯೋಜನೆಗಳಿಗೆ ಪ್ರಚಾರ ಸಿಗುತ್ತದೆ ಎಂದು ಹೇಳಿದರು.
Advertisement
ಇಷ್ಟೆಲ್ಲ ಮಾತನಾಡುವ ಬಿಜೆಪಿಯವರಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಬೇಕಾಗಿದೆ. ಪ್ರಧಾನಿ ಮೋದಿ ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ರೂ. ಹಾಕುತ್ತೇನೆ ಎಂದು ಹೇಳಿದ್ದರು. ಹಾಕಿದ್ದಾರಾ? ಪ್ರಣಾಳಿಕೆಯಲ್ಲಿ ರೈತರ 1 ಲಕ್ಷ ರೂ. ಸಾಲ ಮನ್ನಾ ಘೋಷಿಸಿದ್ದರು. ಅದನ್ನು ಮಾಡಿದ್ದಾರಾ? ಕುಮಾರಣ್ಣನೂ ಇದಕ್ಕೆ ಉತ್ತರಿಸಲಿ ಎಂದು ತಿಳಿಸಿದರು.ಮತ್ತೂಂದೆಡೆ ಸಚಿವ ಡಾ| ಜಿ.ಪರಮೇಶ್ವರ್ ಮಾತನಾಡಿ, ಕೆಟ್ಟ ಆಡಳಿತ ಕೊಟ್ಟು ಮನೆಗೆ ಹೋಗಿರುವ ಬಿಜೆಪಿಯವರಿಂದ ನಾವು ಪಾಠ ಹೇಳಿಸಿಕೊಳ್ಳಬೇಕಿಲ್ಲ. ನುಡಿದಂತೆ ನಡೆಯುತ್ತೇವೆ, ಈಗಾಗಲೇ ಸಂಪುಟದಲ್ಲಿ ತೀರ್ಮಾನ ಮಾಡಿದ್ದೇವೆ. ತಾಳ್ಮೆ ಇರಲಿ ಎಂದು ತಿಳಿಸಿದರು