Advertisement

ಮೀಸಲು ಕಾನ್ಸ್‌ಸ್ಟೇಬಲ್‌ ಆಯ್ಕೆ ಪ್ರಕ್ರಿಯೆ ಬದಲು

11:01 PM Mar 14, 2020 | Lakshmi GovindaRaj |

ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯ ಮೀಸಲು ಪಡೆ(ಕೆಎಸ್‌ಆರ್‌ಪಿ-ಸಿಎಆರ್‌, ಐಆರ್‌ಬಿ)ಯ ಕಾನ್ಸ್‌ಸ್ಟೇಬಲ್‌ ಹುದ್ದೆ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲ ಬದಲಾವಣೆ ತರಲಾಗಿದ್ದು, ಈ ಕುರಿತು ರಾಜ್ಯ ಮೀಸಲು ಪೊಲೀಸ್‌ (ವೃಂದ ಮತ್ತು ನೇಮಕಾತಿ) ನಿಯಮ-2020 ಎಂಬ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ.

Advertisement

ಈ ಮೊದಲು ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಡ್ಯ ಪರೀಕ್ಷೆ ನಡೆಸಿದ ಬಳಿಕ ಅರ್ಹತೆ ಪಡೆದವರಿಗೆ ಲಿಖೀತ ಪರೀಕ್ಷೆ ನಡೆಸಲಾಗುತ್ತಿತ್ತು. ಈಗಾಗಲೇ ನಾಗರಿಕ ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಹುದ್ದೆಗಳಿಗೆ ಮೊದಲಿಗೆ ಲಿಖೀತ ಪರೀಕ್ಷೆ ನಡೆಸಲಾಗುತ್ತಿದೆ. ಅದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಸಹಿಷ್ಣುತೆ ಮತ್ತು ದೇಹದಾಡ್ಯತೆ ಪರೀಕ್ಷೆಗೆ ಆಹ್ವಾನಿಸಲಾಗುತ್ತಿದೆ.

ವಿಶೇಷ ಮೀಸಲು ಪಡೆಯ ಕಾನ್ಸ್‌ಸ್ಟೇಬಲ್‌ ನೇಮಕದಲ್ಲಿ ಈ ಬದಲಾವಣೆ ಜಾರಿಗೆ ತರುವ ಉದ್ದೇಶದಿಂದ ರಾಜ್ಯ ಮೀಸಲು ಪೊಲೀಸ್‌ (ವೃಂದ ಮತ್ತು ನೇಮಕಾತಿ) ನಿಯಮ-2020 ಎಂಬ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. 15 ದಿನಗಳ ಕಾಲಾವಕಾಶ ನೀಡಿದ್ದು, ಈ ಸಂದರ್ಭದಲ್ಲಿ ಬರುವ ಆಕ್ಷೇಪಣೆ ಪರಿಶೀಲಿಸಿ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next