Advertisement
ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯ ಭಾಗವಾಗಿ ಸಿಂಧನೂರಿನಲ್ಲಿ ಆಯೋಜಿಸಿದ್ದ ರೈತ-ರೈತ ಮಹಿಳೆಯರ ಜತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತ ಕೃಷಿ ಪ್ರಧಾನ ದೇಶ. ಪ್ರಸ್ತುತ ಕೃಷಿ ಮಾಡಲು ಸರಕಾರದ ನೆರವು ಅತ್ಯಗತ್ಯವಾಗಿ ಬೇಕು. ರೈತ ಸಾಲ ಮುಕ್ತನಾಗಲು ಸಾಲ ಮನ್ನಾ ಮಾಡುವ ಮೂಲಕ ಅವರನ್ನು ಸ್ವಾವಲಂಬಿಯಾಗಿಸಬೇಕು.
ಅದರಂತೆ ಕೇಂದ್ರ ಸರಕಾರ ಕೂಡ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡುವಂತೆ ರಾಹುಲ್ ಆಗ್ರಹಿಸಿದರು. ದೇಶದ ವಿವಿಧ ಭಾಗದಲ್ಲಿ ಸಂಚಾರ ಮಾಡಿ ರೈತ ಕೃಷಿಗೆ ಸಂಬಂಧಿಸಿದ ತೊಂದರೆ ಅಧ್ಯಯನ ನಡೆಸಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಲು ಈಗಾಗಲೇ ತಯಾರಿ ನಡೆಸಿದೆ ಎಂದರು.
Related Articles
Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ, ತುಂಗಭದ್ರಾ ಜಲಾಶಯದಲ್ಲಿ ಸುಮಾರು 32 ಟಿಎಂಸಿಯಷ್ಟು ಹೂಳು ತುಂಬಿದೆ. ಆದ್ದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಯಾಗಿದೆ. ರೈತರಿಗೆ ಎರಡು ಬೆಳೆಗಳಿಗೆ ಪೂರ್ಣ ನೀರು ಹರಿಸಲು ಆಗುತ್ತಿಲ್ಲ. ಹೂಳು ತೆಗೆಯಲು ಅಸಾಧ್ಯ ಎಂದು ತಜ್ಞರ ವರದಿ ಪ್ರಕಾರ ತಿಳಿದಿದೆ.
ಅವೈಜ್ಞಾನಿಕವಾಗಿದ್ದು ಮಳೆಗಾಲದಲ್ಲಿ ನೀರು ಹರಿದು ಪೋಲಾಗದಂತೆ ತಡೆಯಲು ಸಮನಾಂತರ ಜಲಾಶಯ ನಿರ್ಮಾಣ ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. 1000ಕ್ಕೂ ಹೆಚ್ಚು ರೈತ -ರೈತ ಮಹಿಳೆಯರು ಕೃಷಿ ಪದವೀಧರರಿದ್ದರು.
ಆಧಾರ್ ಇಲ್ಲದ ರೈತರಿಗಿಲ್ಲ ಎಂಟ್ರಿ ಸಿಂಧನೂರಿನ ಸ್ತ್ರೀ ಶಕ್ತಿ ಭವನದಲ್ಲಿ ರಾಹುಲ್ ಗಾಂಧಿ ಅವರು ನಡೆಸಿದ ರೈತರೊಂದಿಗೆ ಸಂವಾದಕ್ಕೆ ಪಾಸ್ ಜೊತೆಗೆ ಆಧಾರ್ ಕಾರ್ಡ್ ತರದ ರೈತರನ್ನು ಪೊಲೀಸರು ವಾಪಸ್ ಕಳುಹಿಸಿದ ಘಟನೆ ಜರುಗಿತು. ಸಂವಾದದಲ್ಲಿ ಪಾಲ್ಗೊಳ್ಳಲು ಆಯ್ಕೆಯಾದ ರೈತರಿಗೆ ಪಾಸ್ ನೀಡಲಾಗಿತ್ತು. ಜೊತೆಗೆ ಆಧಾರ್ ಕಾರ್ಡ್ ತರುವಂತೆ ಸೂಚಿಸಲಾಗಿತ್ತು. ಆದರೆ ಆಧಾರ್ ಕಾರ್ಡ್ ತರಲು ಮರೆತ ರೈತರಿಗೆ ಸಂವಾದದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದೇ ಪೊಲೀಸರು ವಾಪಸ್ ಕಳುಹಿಸುತ್ತಿದ್ದರು.