Advertisement
ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಮಂಗಳೂರಿನ ಕುಲಶೇಖರ-ಮೂಡಬಿದ್ರೆ ಕಾರ್ಕಳದವರೆಗಿನ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ದಿಲೀಪ್ ಬಿಲ್ಡ್ ಕಾಸ್ ಕಂಪೆನಿ ರಸ್ತೆ ಕಾಮಗಾರಿ ಗುತ್ತಿಗೆ ಪಡೆದಿದ್ದು ರಸ್ತೆ 45 ಕಿ. ಮೀ ಉದ್ದ, 45 ಮೀಟರ್ ಅಗಲ ಇರಲಿದೆ. ಅಂಡರ್ ಪಾಸ್ ಬೇಕಿರಲಿಲ್ಲ.
Related Articles
Advertisement
ಆದರೀಗ ಕೇವಲ 40 ಮೀ.ನಷ್ಟು ತೆರೆದ ಜಾಗ ಮಾತ್ರ ಬಿಡಲಾಗುತ್ತಿದೆ ಎಂಬುದು ಸ್ಥಳೀಯರ ಆರೋಪ. ಈ ಚಿಕ್ಕ ಪೇಟೆಯನ್ನು ಎರಡು ಭಾಗಗಳನ್ನಾಗಿ ಮಾಡಿದರೆ ಹೆ¨ªಾರಿಯ ಪೂರ್ವ ಮತ್ತು ಪಶ್ಚಿಮ ದಿಕ್ಕಿನ ಅಂಗಡಿಗಳಿಗೆ ಹೋಗಲು ಜನರು ಸುತ್ತು ಬಳಸಿ ಹೋಗಬೇಕಾಗಲಿದೆ. ಇದರಿಂದ ಜನರು ಮತ್ತು ವ್ಯಾಪಾರಿಗಳಿಗೆ ಅನಾನುಕೂಲವಾಗಲಿದೆ.
ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ತೆಗೆದಿರುವ ಪಿಲ್ಲರ್‌ಗಳ ತನಕ ಎರಡು ಬದಿಯಲ್ಲಿ ಮಣ್ಣು ತುಂಬಿಸಿ ಅಂಡರ್ ಪಾಸ್ ನಿರ್ಮಿಸುವುದರಿಂದ ಪೇಟೆಯ ಒಂದು ಬದಿ ಮತ್ತೂಂದು ಬದಿಗೆ ತೋರದು. ಜತೆಗೆ ಇಲ್ಲಿರುವ ಮಾರ್ಕೆಟ್ ಇಕ್ಕಟ್ಟಿನಿಂದ ಕೂಡಿದ್ದು, ಇಲ್ಲಿ ವ್ಯವಹಾರ ಮಾಡಲು ಸಾಕಷ್ಟು ಜಾಗವಿಲ್ಲ. ಇದರ ಜತೆಗೆ ಆಟೋರಿಕ್ಷಾ, ಟೆಂಪೋ ಚಾಲಕರು ತಮ್ಮ ಗಾಡಿಗಳನ್ನು ನಿಲ್ಲಿಸಲು ಜಾಗ ಸಿಗದು ಎನ್ನುತ್ತಾರೆ. ಹಾಗಾಗಿ ಈ ವ್ಯವಸ್ಥೆ ಈ ಪೇಟೆಗೆ ಸೂಕ್ತವಾಗಿಲ್ಲ ಎನ್ನುವ ಅಸಮಾಧಾನ ಸ್ಥಳೀಯರದ್ದು.
ಸಂಕಷ್ಟದ ಮೇಲೆ ಸಂಕಷ್ಟ
ಎರಡೂ ಬದಿಗಳಲ್ಲಿ ತಂಗುದಾಣ ಇಲ್ಲದೆ ಪ್ರಯಾಣಿ ಕರು ಪರದಾಡುವಂತಾಗಿದೆ. ಪೇಟೆಯಲ್ಲಿ ಕನಿಷ್ಠ 200 ಮೀ.ನಷ್ಟು ತೆರೆದ ಜಾಗ ಸಿಕ್ಕಿದಲ್ಲಿ ಒಂದಿಷ್ಟು ಸಮಸ್ಯೆಗಳು ಪರಿಹಾರವಾಗಬಹುದು. ಕಾಮಗಾರಿ ಇನ್ನೂ ಪಿಲ್ಲರ್ ಹಂತದಲ್ಲಿದೆ.
ಬದಲಾವಣೆಗೆ ಅವಕಾಶವಿರುವುದರಿಂದ ಸ್ಥಳೀಯ ಆಗತ್ಯಗಳಿಗೆ ಅನುಗುಣವಾಗಿ ಯೋಜನೆ ಮಾರ್ಪಾಡು ಮಾಡಬೇಕೆಂಬುದು ಸ್ಥಳೀಯರ ಆಗ್ರಹ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪ್ರಮುಖರು ಅಧಿಕಾರಿಗಳು, ಸಂಸದರಿಗೆ ಮತ್ತೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಅದು ಫಲಿಸದಿದ್ದರೆ ಹೋರಾಟ ಅನಿವಾರ್ಯ ಎಂಬುದು ಸ್ಥಳೀಯರ ಅಭಿಪ್ರಾಯ.
ಆರಂಭದಲ್ಲಿ ಮೇಲ್ಸೆತುವೆ ಅಂದಿದ್ದರು. ಬಳಿಕ ಅಂಡರ್‌ಪಾಸ್ ಎಂದಾಗಿದೆ. ಸ್ಥಳದಲ್ಲಿ 200 ಮೀ .ಮೀ. ತೆರೆದಿಡುವಂತೆ ನಾವು ಕೆಲ ಪ್ರಮುಖರೆಲ್ಲ ಸೇರಿ ಸಂಸದರು, ಶಾಸಕರಿಗೆ ಮನವಿ ಮಾಡಿದ್ದೆವು. ಹೆದ್ದಾರಿ ಇಲಾಖೆ 75 ಮೀ.ಗೆ ಒಪ್ಪಿಕೊಂಡಿತ್ತು. ಈಗ ಅದನ್ನೂ ಬಿಟ್ಟಿಲ್ಲ. ಸ್ಥಳೀಯರು ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎನ್ನುತ್ತಾರೆ ಯೋಜನೆ ವಿರುದ್ಧ ಹೋರಾಡುತ್ತಿರುವವರಲ್ಲಿ ಒಬ್ಬರಾದ ಭಾಸ್ಕರ್ ಎಸ್. ಕೋಟ್ಯಾನ್ ತಿಳಿಸಿದ್ದಾರೆ.
ಇಲಾಖೆಗೆ ಪತ್ರ ಬರೆಯಲಾಗಿದೆ: ಅಂಡರ್‌ಪಾಸ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿತ್ತು. –ಸುಶೀಲಾ, ಅಧ್ಯಕ್ಷೆ , ಗ್ರಾ.ಪಂ. ಬೆಳುವಾಯಿ
-ಬಾಲಕೃಷ್ಣ ಭೀಮಗುಳಿ