Advertisement

ಮಾಡಿದ ಕರ್ಮಕ್ಕೆ ಅಲ್ಲೇ ಪ್ರತಿಫ‌ಲ!; ಏ.01 ಇನ್ಸ್ಟಂಟ್‌ ಕರ್ಮ ರಿಲೀಸ್‌

12:21 PM Mar 26, 2022 | Team Udayavani |

ಮಾಡಿದ ಪ್ರತಿಯೊಂದು ಕರ್ಮಕ್ಕೂ ಪ್ರತಿಫ‌ಲ ಅನುಭವಿಸಲೇ ಬೇಕು. ಅದು ಯಾವಾಗ ಬೇಕಾದರೂ ಆಗಿರಬಹುದು. ಇದು ಪುರಾಣ ಕಥೆಗಳಲ್ಲಿ ಬರುವ ಕರ್ಮಫ‌ಲ ಸಿದ್ಧಾಂತ. ಆದರೆ ಇಂದಿನ ಜಮಾನದಲ್ಲಿ ಹಾಗಲ್ಲ. ಎಲ್ಲವೂ “ಫಾಸ್ಟ್‌’ ಆಗಿರುವುದರಿಂದ, ಮಾಡಿದ ಕರ್ಮಕ್ಕೆ ಕೂಡ ಅಷ್ಟೇ “ಫಾಸ್ಟ್‌’ ಆಗಿ ಅಲ್ಲೇ ಕರ್ಮಫ‌ಲ ಅನುಭವಿಸಬೇಕು. “ಮಾಡಿದ್ದುಣ್ಣೋ ಮಹರಾಯ’ ಎಂಬ ಮಾತಿನಂತೆ “ಕರ್ಮ ರಿಟರ್ನ್ಸ್’ ಅನ್ನೋದು ಕೂಡ ” ಇನ್ಸ್ಟಂಟ್‌’’ ಆಗಿರುತ್ತದೆ. ಈಗ ಇದೇ ವಿಷಯವನ್ನು ಇಟ್ಟುಕೊಂಡು ” ಇನ್ಸ್ಟಂಟ್‌ ಕರ್ಮ’ ಎಂಬ ಹೆಸರಿನಲ್ಲೇ ಸಿನಿಮಾವೊಂದು ತೆರೆಗೆ ಬರುತ್ತಿದೆ.

Advertisement

ಈ ಹಿಂದೆ “ಡಿ. ಕೆ. ಬೋಸ್‌’ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದ ಸಂದೀಪ್‌ ಮಹಾಂತೇಶ್‌ ಈ ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳಿ ತೆರೆಗೆ ತರುತ್ತಿದ್ದಾರೆ. “ಕೆಲವು ತಿಂಗಳ ಹಿಂದೆ ನಮ್ಮ ತಾಯಿಯನ್ನು ಆಸ್ಪತ್ರೆಗೆ ಕರೆದು ಕೊಂಡು ಹೋದಾಗ ಅಲ್ಲಿ ನಡೆದ ನೈಜ ಘಟನೆಯೊಂದು ಈ ಸಿನಿಮಾ ಮಾಡೋದಕ್ಕೆ ಸ್ಫೂರ್ತಿಯಾಯಿತು. ಅದಕ್ಕೆ ಒಂದಷ್ಟು ಅಂಶಗಳನ್ನು ಸೇರಿಸಿ ಈ ಸಿನಿಮಾವನ್ನು ತೆರೆಗೆ ತರುತ್ತಿದ್ದೇವೆ. ಮುಂದಿನ 5 ವರ್ಷಕ್ಕೂ ಅಪ್ಡೆಟ್‌ ಇರುವಂಥ ಸಿನಿಮಾ ಇದಾಗಿದೆ’ ಎನ್ನುವುದು ಸಿನಿಮಾದ ಕಥಾಹಂದರದ ಬಗ್ಗೆ ನಿರ್ದೇಶಕರ ಮಾತು.

ಇದನ್ನೂ ಓದಿ:ಹೌಸ್‌ಪಾರ್ಟಿ ಮೂಡ್‌ನ‌ಲ್ಲಿ ಆಲ್‌ ಓ.ಕೆ; ಆಲ್ಬಂ ಹಾಡಿಗೆ ಅದ್ವಿಕಾ ಹೆಜ್ಜೆ

“ಬ್ರೇಕ್‌ ಫ್ರೀ ಸಿನಿಮಾಸ್‌’ ಬ್ಯಾನರಿನಲ್ಲಿ ಸಂತೋಷ್‌ ಮಹಾಂತೇಶ್‌ ನಿರ್ಮಿಸಿರುವ ” ಇನ್ಸ್ಟಂಟ್‌ ಕರ್ಮ’ ಚಿತ್ರದಲ್ಲಿ ಯಶ್‌ ಶೆಟ್ಟಿ, ಶ್ರೇಷ್ಠಕೆಂಡ, ಅಂಜನ್‌ ದೇವ್‌, ಪ್ರಜ್ವಲ್‌ ಶೆಟ್ಟಿ, ಹರಿ ಧನಂಜಯ ಪ್ರಮುಖ ಐದು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಬೆಂಗಳೂರು ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. “ಇನ್ಸ್ಟಂಟ್‌ ಕರ್ಮ’ ಚಿತ್ರದ ಹಾಡುಗಳಿಗೆ ಸೂರಜ್‌ ಜೋಯ್ಸ್ ಸಂಗೀತ ಸಂಯೋಜಿಸಿದ್ದು, ಭಾಸ್ಕರ ರೆಡ್ಡಿ ಛಾಯಾಗ್ರಹಣ, ಸುರೇಶ ಆರುಮುಗಂ ಸಂಕಲನವಿದೆ.

Advertisement

“ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ “ಇನ್ಸ್ಟಂಟ್‌ ಕರ್ಮ’ ಸಿನಿಮಾ ಬಂದಿದ್ದು, ಸೀಟ್‌ ತುದಿಯಲ್ಲಿ ಪ್ರೇಕ್ಷಕರನ್ನು ಹಿಡಿದು ಕೂರಿಸುವಂಥ ಸಿನಿಮಾ ಮಾಡಿದ್ದೇವೆ. ಪ್ರೇಕ್ಷಕರ ಮನಮುಟ್ಟುವಂಥ ಸಬ್ಜೆಕ್ಟ್ ಇರುವುದರಿಂದ ಸಿನಿಮಾ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ’ ಎಂದು ಭರವಸೆಯ ಮಾತುಗಳನ್ನಾಡುತ್ತದೆ ಚಿತ್ರತಂಡ. ಅಂದಹಾಗೆ, ಸದ್ಯಕ್ಕೆ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ” ಇನ್ಸ್ಟಂಟ್‌ ಕರ್ಮ’ ಇದೇ ಏ. 1ಕ್ಕೆ ತೆರೆಗೆ ಬರುತ್ತಿದೆ

Advertisement

Udayavani is now on Telegram. Click here to join our channel and stay updated with the latest news.

Next