ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲುಕು ಹನಿಯೂರು ಗ್ರಾಮ ಬಳಿಯಲ್ಲಿ ಮಹಾಶಿವರಾತ್ರಿ ದಿನಂದು 30 ಅಡಿ ಎತ್ತರದ ಬೃಹತ್ ಶಿವಲಿಂಗವನ್ನು ಪ್ರತಿಷ್ಠಾಪನೆಯಾಗಿದೆ.
ಶ್ರೀ ಶನೇಶ್ವರ ಕ್ಷೇತ್ರದ ಟ್ರಸ್ಟಿ ಡಾ.ಶಿವಕುಮಾರ್ ಸ್ವಾಮಿ, ಹೃಥ್ವಿಕ ಸಂಪತ್ ನೇತೃತ್ವದಲ್ಲಿ 5 ಮಂದಿ ಪುರೋಹಿತರಿಂದ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಕಳಶ ಸ್ಥಾಪನೆ, ಪ್ರಾಣ ಪ್ರತಿಷ್ಟಾಪನೆ, ಪಂಚಾಮೃತ ಅಭಿಷೇಕ, ಗಣ ಹೋಮ, ರುದ್ರ ಹೋಮ, ನಂದಿ ಪೂಜೆ ಸೇರಿದಂತೆ ವಿವಿಧ ಹೋಮ ಹವನಗಳು ಹಾಗೂ ವಿವಿಧ ಧಾರ್ಮಿಕ ಕಾರ್ಯ ನಡಸಿ ಬೃಹತ್ ಶಿವಲಿಂಗವನ್ನ ಪ್ರತಿಷ್ಠಾಪಿಸಿದರೇ ಭಕ್ತಗಣ 30 ಅಡಿ ಎತ್ತರದ ಶಿವಲಿಂಗವನ್ನು ಕಣ್ತುಂಬಿಕೊಂಡರು.
ಕ್ಷೇತ್ರದ ಹಿನ್ನೆಲೆ :
ಪಾಂಡವರು ವನವಾಸಕ್ಕೆ ಈ ಸ್ಥಳಕ್ಕೆ ಬಂದ ಸಂದರ್ಭದಲ್ಲಿ ಶ್ರೀ ಕೃಷ್ಣ ನಮ್ಮ ಬೆಂಬಗಾವಲಿಗೆ ಇದ್ದರೂ ನಮಗೆ ಫಲ ಪುಷ್ಪ ಸಿಗದೇ ಪರಿತಪಿಸಿ, ಪ್ರಾಣ ತ್ಯಾಗ ಮಾಡಲು ಮುಂದಾಗುತ್ತಾರೆ. ಆಗ ಇಲ್ಲಿಗೆ ಶನಿ ಮಹಾತ್ಮ ಆಂಜನೇಯನ್ನು ಕಳುಹಿಸಿ ಅವರಿಗೆ ಫಲ-ಪುಷ್ಪ ಸೇರಿದಂತೆ ಅವರ ರಕ್ಷಣೆಗೆ ನಿಲ್ಲುವಂತೆ ಸಿದ್ಧ ಋಷಿಗಳನ್ನು ಕಳುಹಿಸುತ್ತಾರೆ ಎಂಬುದು ಸ್ಥಳೀಯರ ನಂಬಿಕೆ. ಈ ಜಾಗದಲ್ಲಿ ಸಿದ್ದ ಋಷಿಗಳ ಗುಹೆ ಇದ್ದು, ಪ್ರತಿ ವರ್ಷ ಅವರಿಗೆ ಛತ್ರ ಚಾಮರಗಳ ಪೂಜೆ ಸಲ್ಲಿಸಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಇಲ್ಲಿ ಆಂಜನೇಯ, ಛಾಯದೇವಿ ಸೇರಿದಂತೆ ದೇವಾಲಯಗಳನ್ನು ನಿರ್ಮಿಸಲಾಗಿದೆ. ಇನ್ನು ಹಲವು ವಿಗ್ರಹಗಳನ್ನು ಭಕ್ತರ ನೆರವಿನೋಂದಿಗೆ ನಿರ್ಮಾಣ ಮಾಡಿ ಜಿಲ್ಲೆಯಲ್ಲಿ ಪ್ರಮುಖ ಧಾರ್ಮಿಕ ಕೇಂದ್ರ ಮಾಡಲಾಗುವುದೆಂದು ಕ್ಷೇತ್ರದ ಧರ್ಮದರ್ಶಿ ನಾಗೇಶ್ ಬೈರಾಪಟ್ಟಣ ಮಾಹಿತಿ ನೀಡಿದರು.
ಇಂದು ಮತ್ತು ನಾಳೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾಂಸೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.