Advertisement

ಹಾರಂಗಿ ಅಣೆಕಟ್ಟಿಗೆ ಟೆಲಿಮೆಟ್ರಿ ವಾಟರ್‌ ಗೇಜ್‌ ಅಳವಡಿಕೆ

12:28 PM Jul 29, 2019 | keerthan |

ಮಡಿಕೇರಿ: ಕಾವೇರಿ ಕಣಿವೆಯ ಪ್ರಮುಖ ಜಲಾಶಯ ಗಳಲ್ಲಿ ಒಂದಾಗಿರುವ ಹಾರಂಗಿ ಅಣೆಕಟ್ಟಿಗೆ ಟೆಲಿಮೆಟ್ರಿ ವಾಟರ್‌ ಗೇಜ್‌ ಅಳವಡಿಸಲಾಗಿದ್ದು, ಜಲಾಶಯಕ್ಕೆ ಸಂಬಂಧಿಸಿದ ಪ್ರತಿಯೊಂದು ವಿವರವೂ ಕ್ಷಣಕ್ಷಣಕ್ಕೂ ಕೇಂದ್ರ ಜಲ ಆಯೋಗಕ್ಕೆ ಉಪಗ್ರಹ ಮೂಲಕ ತಲುಪುವ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಹಾರಂಗಿ ಅಣೆಕಟ್ಟು ಕೇಂದ್ರ ಜಲ ಆಯೋಗದ ನೇರ ನಿಯಂತ್ರಣಕ್ಕೆ ಒಳಪಟ್ಟಂತಾಗಿದೆ.

Advertisement

ಮಾಹಿತಿ ನೇರ ಅಯೋಗಕ್ಕೆ ಇದಕ್ಕೂ ಮೊದಲು ಹಾರಂಗಿ ಜಲಾಶಯದ ಸಿಬಂದಿ ಜಲಮಟ್ಟವನ್ನು ಅಳತೆ ಮಾಡಿ ಲಿಖೀತ ರೂಪದಲ್ಲಿ ಜಲ ಆಯೋಗಕ್ಕೆ ವರದಿ ಕಳುಹಿಸುವ ವ್ಯವಸ್ಥೆ ಇತ್ತು. ಈಗ ಅತ್ಯಾಧುನಿಕ
ಯಂತ್ರೋಪಕರಣ ಅಳವಡಿಸಿರುವುದರಿಂದ ಎಲ್ಲ ಮಾಹಿತಿ ನೇರವಾಗಿ ಆಯೋಗಕ್ಕೆ ತಲುಪುತ್ತಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ, ಪ್ರವಾಹಗಳಿಗೆ ಹಾರಂಗಿ ಅಣೆಕಟ್ಟೆಯಲ್ಲಿನ ನೀರಿನ ಅವೈಜ್ಞಾನಿಕ ಸಂಗ್ರಹವೇ ಕಾರಣ ಎನ್ನುವ ಆರೋಪ ವ್ಯಾಪಕವಾಗಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಲಾಶಯದ ವಿದ್ಯಮಾನಗಳ ಮೇಲೆ ಕಣ್ಣಿಡಲು ಕೇಂದ್ರ ಸರಕಾರ ಟೆಲಿಮೆಟ್ರಿ ವಾಟರ್‌ ಗೇಜ್‌ ಅಳವಡಿಸಿದೆ ಎನ್ನಲಾಗುತ್ತಿದೆ. ತಮಿಳುನಾಡಿಗೆ ಹರಿಸುವ ಕಾವೇರಿ ನೀರಿನಲ್ಲಿ ಹಾರಂಗಿ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣವೂ ಮಹತ್ವದ ಪಾತ್ರ ವಹಿಸುತ್ತದೆ. ಜಲ ಆಯೋಗ ಅಣೆಕಟ್ಟಿನ ಮೇಲೆ ನಿಯಂತ್ರಣ ಹೊಂದಲು ಆಟೋ ಮೆಟಿಕ್‌ ವಾಟರ್‌ ಗೇಜ್‌ ಅಳವಡಿಕೆ ಸಹಾಯಕವಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ತಿಂಗಳ ಹಿಂದೆ ಹಾರಂಗಿ ಜಲಾಶಯಕ್ಕೆ ಟೆಲಿಮೆಟ್ರಿ ವಾಟರ್‌ ಗೇಜ್‌ ಅಳವಡಿಸಲಾಗಿದೆ. ಈ ಉಪಕರಣ ಸಂಗ್ರಹಿಸುವ ವಿವರಗಳು ಉಪಗ್ರಹ ಮೂಲಕ ನೇರವಾಗಿ ಕೇಂದ್ರ ಜಲ ಆಯೋಗಕ್ಕೆ ತಲುಪುತ್ತವೆ. ಸ್ಥಳೀಯವಾಗಿ ಯಾವುದೇ ಮಾಹಿತಿ ಸಿಗುವುದಿಲ್ಲ. ನಾವು ಹಳೆಯ ವ್ಯವಸ್ಥೆಯಲ್ಲಿ ಸಂಗ್ರಹಿಸುವ ಅಂಕಿ ಅಂಶಗಳು ಮತ್ತು ಈ ಉಪಕರಣ ನೀಡುವ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಕಂಡು ಬಂದರೆ ಕೂಡಲೇ ನಮಗೆ ಎಚ್ಚರಿಕೆಯ ಸಂದೇಶ ಬರುತ್ತದೆ.
 - ನಾಗರಾಜ್‌, ಸಹಾಯಕ ಅಭಿಯಂತರ, ಹಾರಂಗಿ

Advertisement

Udayavani is now on Telegram. Click here to join our channel and stay updated with the latest news.

Next