Advertisement

ಕಡ್ಡಾಯ ಸ್ಕೌಟ್‌-ಗೈಡ್ಸ್‌ ಘಟಕ ಸ್ಥಾಪಿಸಿ

12:06 PM Feb 05, 2020 | Suhan S |

ಚಿಕ್ಕೋಡಿ: ಸ್ಕೌಟ್‌ ಮತ್ತು ಗೈಡ್ಸ್‌ ಇಲ್ಲದ ಪ್ರತಿ ಅನುದಾನಿತ, ಅನುದಾನರಹಿತ ಮತ್ತು ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡಿ ಕಡ್ಡಾಯವಾಗಿ ಘಟಕಗಳನ್ನು ಸ್ಥಾಪಿಸಬೇಕೆಂದು ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಬೆಳಗಾವಿ ಜಿಲ್ಲಾ ಮುಖ್ಯ ಆಯುಕ್ತರು ಹಾಗೂ ಡಿಡಿಪಿಐ ಗಜಾನನ ಮನ್ನಿಕೇರಿ ಹೇಳಿದರು.

Advertisement

ಇಲ್ಲಿನ ಸಿಟಿಇ ಸಂಸ್ಥೆಯ ಡಿ. ಕೆ. ಶಹಾ ಶಾಲಾ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಚಿಕ್ಕೋಡಿ ಹಾಗೂ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆ ಚಿಕ್ಕೋಡಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆಗೆ ಕಾರ್ಯಕ್ರಮ ನಡೆಸಲು ಕೊಠಡಿಯ ಬೇಡಿಕೆಗೆ ಅನುಮೋದನೆ ನೀಡಿದ ಅವರು, ಶಿಕ್ಷಕರೊಂದಿಗೆ ಚರ್ಚೆ ನಡೆಸಿ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿದರು. ರಾಜ್ಯದಲ್ಲಿಯೇ ಚಿಕ್ಕೋಡಿ ತಾಲೂಕನ್ನು ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಮಾದರಿ ತಾಲೂಕಾಗಿಸಲು ಸೂಚಿಸಿದರು. ಅಧ್ಯಕ್ಷತೆ ವಹಿಸಿದ್ದ ಚಿಕ್ಕೋಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ. ಮೇಕನಮರಡಿ ಪ್ರತಿ ಶಾಲೆಯಲ್ಲಿ ಘಟಕಗಳನ್ನು ಸ್ಥಾಪಿಸಿ ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.

ಕಾರ್ಯಕ್ರಮಕ್ಕೆ ಜಿಲ್ಲಾ ಸಂಘಟಕರಾದ ಎನ್‌.ಬಿ. ಗುಡಸಿ, ಡಿ.ಬಿ. ಅತ್ತಾರ, ಡಿ.ಕೆ. ಶಹಾ ಶಾಲೆಯ ಆಡಳಿತಾಧಿಕಾರಿ ಆರ್‌.ಪಿ. ದೊಡಮನಿ, ಚಿಕ್ಕೋಡಿ ದೈಹಿಕ ಶಿಕ್ಷಣ ಪ್ರಭಾರಿ ಶಿಕ್ಷಣಾ ಧಿಕಾರಿ ಬಿ.ಎಸ್‌. ಶೇವಾಳೆ, ಸಂಪನ್ಮೂಲ ವ್ಯಕ್ತಿಗಳಾದ ಪಿ.ಪಿ. ಸಾಮಕ, ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆ ಚಿಕ್ಕೋಡಿಯ ಕಾರ್ಯದರ್ಶಿಗಳಾದ ಎನ್‌.ಜಿ. ಪಾಟೀಲ, ಮತ್ತು ತಾಲೂಕಿನ ಎಲ್ಲ ಸ್ಕೌಟ್‌ ಮಾಸ್ಟರ್ ಮತ್ತು ಗೈಡ್ಸ್‌ ಕ್ಯಾಪ್ಟನ್ಸ್‌ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಎನ್‌.ಜಿ. ಪಾಟೀಲ ಸ್ವಾಗತಿಸಿದರು. ಕಿರಣ ಮುರಾಳೆ ವಂದಿಸಿದರು. ಶ್ರೀಮತಿ ಎಸ್‌.ಜಿ. ಜೋಶಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next