Advertisement
ಟಿಕ್ ಟಾಕ್ ಮಾದರಿಯಂತೆ ಇನ್ ಸ್ಟಾಗ್ರಾಂ ಕೂಡ ತನ್ನ ಸ್ಟೋರಿಯಲ್ಲಿ ಮ್ಯೂಸಿಕ್ ಆಯ್ಕೆಯನ್ನು ನೀಡಿದೆ. ಯಾವುದೇ ಪೋಟೋ ಅಥವಾ ವಿಡಿಯೋವನ್ನು ಸ್ಟೋರಿಯಲ್ಲಿ ಹಾಕುವಾಗ ಅದಕ್ಕೆ ಮ್ಯೂಸಿಕ್ ಅನ್ನು ಅಳವಡಿಸಬಹುದಾಗಿದೆ. ಈಗಾಗಲೇ ಫಿಲ್ಟರ್ ಮತ್ತು ಅ್ಯನಿಮೇಟೆಡ್ ಸ್ಟಿಕರ್ಸ್ ಗಳನ್ನು ಅಪ್ಲೋಡ್ ಮಾಡುವ ಆಯ್ಕೆಯಿದೆ. ಇದೀಗ ಬಂದಿರುವ ಫೀಚರ್ ಇನ್ ಸ್ಟಾ ಸ್ಟೋರಿಯನ್ನು ಇನ್ನಷ್ಟು ಆಕರ್ಷಕವಾಗಿಡಲು ಸಹಾಯಕವಾಗಲಿದೆ. ಟಿಕ್ ಟಾಕ್ ಸೇರಿದಂತೆ ಇತರ ಆ್ಯಪ್ ಗಳಿಗೆ ಪೈಪೋಟಿ ನೀಡಲು ಈ ಹೊಸ ಫೀಚರ್ ಅನ್ನು ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
- ಇನ್ ಸ್ಟಾಗ್ರಾಂನಲ್ಲಿ ಸ್ಟೋರಿ ಪೋಸ್ಟ್ ಮಾಡುವ ಆಯ್ಕೆಯನ್ನು ಒತ್ತಿ.
- ಫಿಲ್ಟರ್ ಆಯ್ಕೆಯಲ್ಲಿ ನೂತನವಾಗಿ ಜಾರಿಗೆ ತಂದಿರುವ ಮ್ಯೂಸಿಕ್ ಐಕಾನ್ ಕಾಣಿಸುತ್ತದೆ.
- ಅದನ್ನು ಅಯ್ಕೆ ಮಾಡಿದ ತಕ್ಷಣ ಮ್ಯೂಸಿಕ್ ಲೈಬ್ರರಿ ಕಾಣಿಸುತ್ತದೆ.
- ನಂತರ ನಿಮ್ಮ ಮೆಚ್ಚಿನ ಮ್ಯೂಸಿಕ್ ಅನ್ನು ಸರ್ಚ್ ಮಾಡುವ ಮೂಲಕ ಬಳಸಿಕೊಳ್ಳಬಹುದು.
- ಇ ಮೂಲಕ ನಿಮ್ಮ ಸ್ಟೋರಿಯನ್ನು ಇನ್ನಷ್ಟು ಆಕರ್ಷಕವಾಗಿಡಬಹುದು.