Advertisement

ಇನ್ಸ್ಟಾಗ್ರಾಮ್ ನಿಂದ ಕನ್ನಡದಲ್ಲಿ ಪೇರೆಂಟ್ಸ್ ಗೈಡ್ ಆರಂಭ

03:23 PM Jul 30, 2021 | Team Udayavani |

ಬೆಂಗಳೂರು: ಭಾರತದ ಯುವಜನರ ಸುರಕ್ಷತೆಗೆ ಒತ್ತು ನೀಡಿರುವ ಬದ್ಧತೆಯನ್ನು ಹೆಚ್ಚಿಸಿರುವ ಇನ್ಸ್ಟಾಗ್ರಾಮ್ ಕನ್ನಡದಲ್ಲಿ ಪೋಷಕರ ಮಾರ್ಗದರ್ಶಿಯನ್ನು (ಪೇರೆಂಟ್ಸ್ ಗೈಡ್) ಅನ್ನು ಪ್ರಾರಂಭಿಸಿದೆ.

Advertisement

ಈ ಪ್ಲಾಟ್ ಫಾರ್ಮ್ ನಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಸುರಕ್ಷತಾ ವೈಶಿಷ್ಟ್ಯತೆಗಳ ಬಗ್ಗೆ ಪೋಷಕರಿಗೆ ತಿಳಿಸುವ ಮೂಲಕ ಯುವ ಜನರನ್ನು ಸುರಕ್ಷಿತವಾಗಿಡುವ ಉದ್ದೇಶವನ್ನು ಹೊಂದಿದೆ.

ಈ ಪೇರೆಂಟ್ಸ್ ಗೈಡ್ ಇನ್ಸ್ಟಾಗ್ರಾಮ್ ನ ಮೂಲವಾಗಿದ್ದು, ಬದಲಾಗುತ್ತಿರುವ ಡಿಜಿಟಲ್ ಲ್ಯಾಂಡ್ಯ ಸ್ಕೇಪ್ ಅನ್ನು ಉತ್ತಮವಾಗಿ ತಿಳಿದುಕೊಳ್ಳಲು ಪೋಷಕರಿಗೆ ನೆರವಾಗುತ್ತಿದೆ. ಇದು ಅನೇಕ ದೇಶಗಳಲ್ಲಿ ಲಭ್ಯವಿದೆ. ಏಕೆಂದರೆ ಇದು ತಮ್ಮ ಮಕ್ಕಳನ್ನು ಇನ್ಸ್ಟಾಗ್ರಾಮ್ ನಲ್ಲಿ ಸುರಕ್ಷಿತವಾಗಿಡಲು ಇರುವ ಸಾಧನಗಳ ಬಗ್ಗೆ ಮಾಹಿತಿಯನ್ನು ಪೂರೈಸುತ್ತದೆ. ಮಕ್ಕಳ ಹಕ್ಕುಗಳು ಮತ್ತು ಸುರಕ್ಷತೆಯ ಬಗ್ಗೆ ಸಕ್ರಿಯವಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಸೆಂಟರ್ ಫಾರ್ ಸೋಶಿಯಲ್ ರೀಸರ್ಚ್, ಸೈಬರ್ಪೀಸ್ ಫೌಂಡೇಷನ್, ಆರಂಭ್ ಇಂಡಿಯಾ ಇನಿಶಿಯೇಟಿವ್, ಯಂಗ್ ಲೀಡರ್ಸ್ ಫಾರ್ ಆಕ್ಟಿವಿಟಿ ಸಿಟಿಜನ್ಶಿಪ್, ಇಟ್ಸ್ ಒಕೆ ಟು ಟಾಕ್ ಅಂಡ್ ಸೂಸೈಡ್ ಪ್ರಿವೆನ್ಷನ್ ಇಂಡಿಯಾ ಫೌಂಡೇಷನ್ ನಂತಹ ಪ್ರಮುಖ ಸಂಸ್ಥೆಗಳಿಂದ ಮಾರ್ಗದರ್ಶನ ಹೊಂದಿದೆ.

ಇದನ್ನೂ ಓದಿ:ಶಿಶುಕಾಮ/ಮಕ್ಕಳ ಕಳ್ಳ ಸಾಗಾಣಿಕೆ; ಸತ್ಯ ಘಟನೆ ಆಧರಿತ ಚಿತ್ರ “ಐ ಯಾಮ್ ಆಲ್ ಗರ್ಲ್ಸ್”

Advertisement

ಇನ್ಸ್ಟಾಗ್ರಾಮ್ ನಲ್ಲಿ ಯಾರು ಮೆಸೇಜ್ ಕಳುಹಿಸಬಹುದು ಮತ್ತು ಇನ್ಸ್ಟಾಗ್ರಾಮ್ ಡೈರೆಕ್ಟ್ ನಲ್ಲಿ ಯಾರು ಗುಂಪುಗಳಿಗೆ ಸೇರಿಸಬಹುದು ಎಂಬುದನ್ನು ಆಯ್ಕೆ ಮಾಡುವ ನಿಯಂತ್ರಣವನ್ನು ಕ್ರಿಯೇಟರ್ ಮತ್ತು ಬ್ಯುಸಿನೆಸ್ ಅಕೌಂಟ್ ಗಳಿಗೆ ನೀಡುವ `ಡಿಎಂ ರೀಚೇಬಿಲಿಟಿ ಕಂಟ್ರೋಲ್ಸ್’ನಂತಹ ಇನ್ಸ್ಟಾಗ್ರಾಮ್ ನಲ್ಲಿನ ಎಲ್ಲಾ ಹೊಸ ಸುರಕ್ಷತಾ ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿಗಳನ್ನು ಈ ಗೈಡ್ ಒಳಗೊಂಡಿದೆ. ಇದಕ್ಕೆ ಮತ್ತೊಂದು ಉದಾಹರಣೆಯೆಂದರೆ, `ಬಲ್ಕ್ ಕಮೆಂಟ್ ಮ್ಯಾನೇಜ್ಮೆಂಟ್’- ಇದು ಜನರಿಗೆ ಕಮೆಂಟ್ ಗಳನ್ನು ದೊಡ್ಡ ಪ್ರಮಾಣದಲ್ಲಿ ಅಳಿಸುವ ಅಂದರೆ ಡಿಲೀಟ್ ಮಾಡುವ ಆಯ್ಕೆಯನ್ನು ನೀಡುತ್ತದೆ. ಇದರ ಜೊತೆಗೆ ನಕಾರಾತ್ಮಕ ಕಮೆಂಟ್ಗಳನ್ನು ಪೋಸ್ಟ್ ಮಾಡುವ ಬಹು ಖಾತೆಗಳನ್ನು ನಿರ್ಬಂಧಿಸುತ್ತದೆ. ಇದರಲ್ಲಿರುವ ಇನ್ನು ಕೆಲವು ವೈಶಿಷ್ಟ್ಯತೆಗಳಲ್ಲಿ `ರಿಸ್ಟ್ರಿಕ್ಟ್’ ನಿಮ್ಮ ಮಗುವಿಗೆ ಅರಿವಿಲ್ಲದೇ ಅನಗತ್ಯ ಸಂವಹನ ನಡೆಸುವುದರಿಂದ ರಕ್ಷಣೆ ಮಾಡುತ್ತದೆ.

ಭಾರತದಲ್ಲಿ ಇನ್ಸ್ಟಾಗ್ರಾಮ್ ನ ಪಬ್ಲಿಕ್ ಪಾಲಿಸಿ ಅಂಡ್ ಕಮ್ಯುನಿಟಿ ಔಟ್ರೀಚ್ ಮ್ಯಾನೇಜರ್ ತಾರಾ ಬೇಡಿ ಮಾತನಾಡಿ, “ಯುವಕರು ಆನ್ ಲೈನ್ ನಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದರಿಂದ ಪೋಷಕರು ತಮ್ಮ ಮಕ್ಕಳು ಬಳಸುವ ಉತ್ಪನ್ನಗಳು ಮತ್ತು ವೈಶಿಷ್ಟ್ಯತೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಇನ್ಸ್ಟಾಗ್ರಾಮ್ ನ ಈ ಪೇರೆಂಟ್ಸ್ ಗೈಡ್ ಸುರಕ್ಷಿತ ಮತ್ತು ಬೆಂಬಲದ ವಾತಾವರಣವನ್ನು ಬೆಳೆಸುವ ಮತ್ತೊಂದು ಹೆಜ್ಜೆಯಾಗಿದೆ ಎಂದರು.

ಇತ್ತೀಚೆಗೆ ಯುವಜನರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇನ್ಸ್ಟಾಗ್ರಾಮ್ ಹಲವಾರು ಬದಲಾವಣೆಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಪ್ರಮುಖವಾಗಿ 16 ವರ್ಷಕ್ಕಿಂತ ಕೆಳಗಿನ ಪ್ರತಿಯೊಬ್ಬರೂ ಇನ್ಸ್ಟಾಗ್ರಾಮ್ ಸೇರಿಕೊಂಡಾಗ ಅವರ ಖಾಸಗಿ ಖಾತೆಗೆ ಡೀಫಾಲ್ಟ್ ಆಗುತ್ತಾರೆ ಮತ್ತು `ಸೆಕ್ಯೂರಿಟಿ ಚೆಕಪ್’ಎಂಬ ಹೊಸ ವೈಶಿಷ್ಟ್ಯತೆಯು ಖಾತೆಗಳನ್ನು ಹ್ಯಾಕ್ ಮಾಡಿದ್ದರೆ ಅಂಥವರನ್ನು ಸುರಕ್ಷಿತಗೊಳಿಸಲು ಅಗತ್ಯವಾದ ಹಂತಗಳ ಮೂಲಕ ಮಾರ್ಗದರ್ಶನ ನೀಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next