Advertisement
ಶೀಘ್ರದಲ್ಲಿ ಹೊಸ ಅಪ್ ಡೇಟ್ ಬಳಕೆದಾರರಿಗೆ ಲಭ್ಯವಾಗಲಿದೆ. ಹೀಗಾಗಿ ಇನ್ನುಮುಂದೆ ಇನ್ ಸ್ಟಾಗ್ರಾಂ ಮೂಲಕವೇ ಫೇಸ್ ಬುಕ್ ಮೆಸೆಂಜರ್ ಸಂದೇಶ ಕಳುಹಿಸಬಹುದು. ಮಾತ್ರವಲ್ಲದೆ ಈ ಹೊಸ ಅಪ್ ಡೇಟ್ ನೊಂದಿಗೆ ನೂತನ ಹತ್ತು ಫೀಚರ್ ಗಳು ಕೂಡ ಬಳಕೆಗೆ ಬರಲಿದೆ.
Related Articles
Advertisement
ವಾಚ್ ಟುಗೇದರ್: ಈ ವರ್ಷಾರಂಭದಲ್ಲಿ ಇನ್ ಸ್ಟಾಗ್ರಾಂ ಕೋ-ವಾಚಿಂಗ್ ಫೀಚರ್ ಬಳಕೆಗೆ ತಂದಿತ್ತು. ಇದೇ ಫೀಚರ್ ಇದೀಗ ಮೆಸೆಂಜರ್ ಮತ್ತು ಫೇಸ್ ಬುಕ್ ನಲ್ಲಿ ಲಭ್ಯವಿರಲಿದೆ. ಇದರ ಮೂಲಕ ಐಜಿ ಟಿವಿ, ಟಿ,ವಿ ಕಾರ್ಯಕ್ರಮಗಳು, ಸಿನಿಮಾ ಮುಂತಾದವನ್ನೂ ವೀಕ್ಷಿಸಬಹುದು. ಮಾತ್ರವಲ್ಲದೆ ಇನ್ ಸ್ಟಾಗ್ರಾಂ ರೀಲ್ಸ್ ನಲ್ಲೂ ಈ ಫೀಚರ್ ಬಳಕೆಗೆ ಬರಲಿದೆ.
ವ್ಯಾನಿಶ್ ಮೋಡ್: ಬಳಕೆದಾರರು ಯಾವುದೇ ಮೆಸೇಜ್ ಸ್ವೀಕರಿಸಿದ ಅಥವಾ ಕಳುಹಿಸಿದಾಗ ಅದು ಪರದೆಯ ಮೇಲೆ ಎಷ್ಟು ನಿಮಿಷ/ ಗಂಟೆಯ ಕಾಲ ಗೋಚರಿಸಬೇಕೆಂಬುದನ್ನು ಈ ಫೀಚರ್ ನಿರ್ಧರಿಸುತ್ತದೆ. ಇದರ ಜೊತೆಗೆ ಸಂದೇಶ ಓದಿದಾಕ್ಷಣ ಡಿಲೀಟ್ ಆಗುವ ಆಯ್ಕೆಯೂ ಇದೆ.
ಸೆಲ್ಫಿ ಸ್ಟಿಕರ್ಸ್: ಈ ಫೀಚರ್ ಬಳಸಿಕೊಂಡು ನಿಮ್ಮ ಸೆಲ್ಫಿಗೆ ಬೂಮ್ ರಂಗ್ ಮಾದರಿಯ ಸ್ಟಿಕರ್ಸ್ ಅಳವಡಿಸಿ ಶೇರ್ ಮಾಡಬಹುದು
ಚಾಟ್ ಕಲರ್ಸ್: ಮೆಸೆಂಜರ್ ನ ಅತೀ ಜನಪ್ರಿಯ ಫೀಚರ್ ಇದೀಗ ಇನ್ ಸ್ಟಾಗ್ರಾಂ ಗೂ ಲಗ್ಗೆಯಿಟ್ಟಿದೆ. ಚಾಟ್ ಮಾಡುವ ಸಂದರ್ಭದಲ್ಲಿ ಕಲರ್ ಗಳ ಆಯ್ಕೆಯನ್ನು ಮಾಡಬಹುದು. ಒಮ್ಮೆ ನೀವು ಚಾಟ್ ಕಲರ್ ಬದಲಿಸಿದರೆ, ಸಂದೇಶ ಸ್ವೀಕರಿಸುವವರ ಚಾಟ್ ನಲ್ಲೂ ಅದು ಗೋಚರಿಸುತ್ತದೆ.
ಕಸ್ಟಮ್ ಇಮೋಜಿ ರಿಯಾಕ್ಷನ್: ಇದೀಗ ಅಟೋಮ್ಯಾಟಿಕ್ ಆಗಿ ಇಮೋಜಿಗಳನ್ನು ಬಳಕೆ ಮಾಡಬಹುದು. ಮಾತ್ರವಲ್ಲದೆ ಇದನ್ನು ಶಾರ್ಟ್ ಕಟ್ ಆಗಿಯೂ ಬಳಸಬಹುದು.