Advertisement

ʼತುನಿವುʼ ಸಿನಿಮಾದಿಂದ ಪ್ರೇರಣೆಗೊಂಡು ಬ್ಯಾಂಕ್‌ ದರೋಡೆಗೆ ಬಂದ ವಿದ್ಯಾರ್ಥಿ.!

12:44 PM Feb 05, 2023 | Team Udayavani |

ಚೆನ್ನೈ: ಸಿನಿಮಾಗಳು ನಮ್ಮ ಮೇಲೆ ತುಂಬಾ ಪರಿಣಾಮವನ್ನು ಬೀರುತ್ತದೆ. ಸಿನಿಮಾವನ್ನೇ ನೋಡಿ ನಮ್ಮ ಜೀವನವೂ ಹೀಗೆಯೇ ಇರಬೇಕಿತ್ತು ಕೆಲವೊಮ್ಮೆ ಅಂದುಕೊಳ್ಳುತ್ತೇವೆ. ಸಿನಿಮಾವನ್ನು ನೋಡಿ ವ್ಯಕ್ತಿಯೊಬ್ಬ ಇಲ್ಲಿ ಏನೋ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ.

Advertisement

ಕಾಲಿವುಡ್‌ ಸ್ಟಾರ್‌ ಅಜಿತ್‌ ಕುಮಾರ್‌ ಅವರ ʼತುನಿವುʼ ಯಶಸ್ವಿಯಾಗಿ ಪ್ರದರ್ಶನವನ್ನು ಕಾಣುತ್ತಿದೆ. ಬ್ಯಾಂಕ್‌ ದರೋಡೆಯ ಕಥೆಯನ್ನೊಳಗೊಂಡ ಸಿನಿಮಾದಲ್ಲಿ ಮಾಸ್‌, ಕ್ಲಾಸ್‌ ಎರಡೂ ಅಂಶವೂ ಇದೆ. ಸಿನಿಮಾದಲ್ಲಿ ಬ್ಯಾಂಕ್‌ ದರೋಡೆ ಮಾಡುವ ದೃಶ್ಯವನ್ನು ನೋಡಿ, ವ್ಯಕ್ತಿಯೊಬ್ಬ ಬ್ಯಾಂಕ್‌ ಲೂಟಿ ಮಾಡಲು ಬಂದು  ಸಿಕ್ಕಿ ಬಿದ್ದಿರುವ ಘಟನೆ ತಿರುಪ್ಪೂರಿನ ಧಾರಾಪುರಂ ಪ್ರದೇಶದಲ್ಲಿ ನಡೆದಿದೆ.

ಸುರೇಶ್ ಎಂಬ ಪಾಲಿಟೆಕ್ನಿಕ್ ವಿದ್ಯಾರ್ಥಿ ʼತುನಿವುʼ ಸಿನಿಮಾದಿಂದ ಪ್ರೇರಣೆಗೊಂಡು ಬುರ್ಖಾಧರಿಸಿ ಬ್ಯಾಂಕ್‌ ಗೆ ಬಂದಿದ್ದಾನೆ. ಕೆಲ ಸಮಯ ಅತ್ತಿತ್ತ ನೋಡಿ, ಕೈಯಲ್ಲಿ ಚಾಕು ಹಾಗೂ ಗನ್‌ ಹಿಡಿದುಕೊಂಡು ಅಲ್ಲಿಂದ ಗ್ರಾಹಕರು, ಸಿಬ್ಬಂದಿಗಳನ್ನು ಹೆದರಿಸಿದ್ದಾನೆ. ಹಣ ನೀಡಿ ಎಂದು ಸಿಬ್ಬಂದಿಗೆ ಬೆದರಿಸಲು ಮುಂದೆ ಹೋಗುವಾಗ ಕೈ ಆಯುಧವೊಂದು ಕೆಳಕ್ಕೆ ಬೀಳುತ್ತದೆ. ಆಯುಧವನ್ನು ತೆಗೆದುಕೊಳ್ಳಲು ಬಗ್ಗುವಾಗ, ಭಯದಲ್ಲೇ ಚೇರ್‌ ನಲ್ಲಿ ಕೂತಿದ್ದ ವೃದ್ಧರೊಬ್ಬರು ಇದನ್ನು ನೋಡಿ ಕೂಡಲೇ ತನ್ನ ಟವೆಲ್ ನಲ್ಲಿ ದರೋಡೆಕೋರನನ್ನು ಗಟ್ಟಿಯಾಗಿ ಹಿಡಿದು ನುಕ್ಕುತ್ತಾರೆ. ಇದಕ್ಕೆ ಎಲ್ಲರೂ ಸಾಥ್‌ ಕೊಟ್ಟು ದರೋಡೆ ಮಾಡಲು ಬಂದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ.

ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿಯ ಬಳಿ ಇದ್ದದ್ದು ಆಟಿಕೆ ಗನ್‌ ಎಂದು ತಿಳಿದು ಬಂದಿದೆ. ಸದ್ಯ ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿದ್ದು ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next