Advertisement
ಮೂವರು ಕೌನ್ಸಿಲರ್‌ಗಳು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರನ್ನು ಭೇಟಿಯಾದರು. ವಿನೋದ್ ತಾವ್ಡೆ ಚಂಡೀಗಢ ಮೇಯರ್ ಚುನಾವಣೆಯ ಉಸ್ತುವಾರಿಯೂ ಆಗಿದ್ದಾರೆ. ಇದರೊಂದಿಗೆ ಮೇಯರ್ ಚುನಾವಣೆಯಲ್ಲಿ ಅಕ್ರಮ ನಡೆದ ಪ್ರಕರಣದ ವಿಚಾರಣೆಗೂ ಮುನ್ನವೇ ಆಪ್ ಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಬಿಜೆಪಿ ಸೇರಿದ ನೇಹಾ ಮುಸಾವತ್ ಮಾತನಾಡಿ ‘ಆಮ್ ಆದ್ಮಿ ಪಕ್ಷ ನನ್ನನ್ನು ಮೇಯರ್ ಅಭ್ಯರ್ಥಿಯನ್ನಾಗಿ ಮಾಡಿದೆ ಎಂದು ಸುಳ್ಳು ಭರವಸೆ ನೀಡಿದೆ. ಮೇಯರ್ ಹುದ್ದೆಗೆ ನನ್ನನ್ನು ಅತ್ಯಂತ ವಿದ್ಯಾವಂತ ಅಭ್ಯರ್ಥಿ ಎಂದು ಪರಿಗಣಿಸಲಾಗಿತ್ತು, ಆದರೆ ಸಮಯ ಬಂದಾಗ ಬೇರೆಯವರನ್ನು ಅಭ್ಯರ್ಥಿ ಎಂದು ಘೋಷಿಸಿ ಸುಳ್ಳು ಭರವಸೆ ನೀಡುವ ಮೂಲಕ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಡವರು, ದಲಿತರ ಕಲ್ಯಾಣಕ್ಕಾಗಿ ಪ್ರಧಾನಿ ಮೋದಿ ಅವರು ಮಾಡಿರುವ ಕೆಲಸಗಳಿಂದ ಪ್ರಭಾವಿತನಾಗಿದ್ದೇನೆ ಅದೇ ಕಾರಣದಿಂದ ಇಂದು ಬಿಜೆಪಿ ಸೇರುತ್ತಿದ್ದೇನೆ ಎಂದು ಹೇಳಿದ್ದಾರೆ.
Related Articles
Advertisement
ಇದನ್ನೂ ಓದಿ: Court ವಿಚಾರಣೆಗೂ ಮೊದಲೇ ಚಂಡೀಗಢ ಮೇಯರ್ ಸ್ಥಾನಕ್ಕೆ ಬಿಜೆಪಿಯ ಮನೋಜ್ ಸೋಂಕರ್ ರಾಜೀನಾಮೆ