ಮಲ್ಪೆ: ಯಾರಲ್ಲಿ ಆತ್ಮವಿಶ್ವಾಸ, ಧರ್ಮ, ಧೈರ್ಯ ಇದೆಯೋ ಅಲ್ಲಿ ಹನುಮಂತನಿದ್ದಾನೆ. ಹನುಮನ ಬದುಕೆ ಸಾಧನೆಗೆ ಪ್ರೇರಣೆ, ನಮ್ಮೆಲ್ಲರ ಬದುಕಿಗೆ ಸ್ಫೂರ್ತಿ ನೀಡುವ ಹನುಮಂತ ಇಂದಿಗೂ ಜೀವಂತ ಎಂದು ತೆಂಕನಿಡಿಯೂರು ರಾಧಾ¾ ರೆಸಿಡೆಸಿನ್ಶಿÕಯ ಪ್ರವರ್ತಕ ಪ್ರಖ್ಯಾತ್ ಶೆಟ್ಟಿ ಬೆಳ್ಕಳೆ ಹೇಳಿದರು.
ಅವರು ಶುಕ್ರವಾರ ಕೆಳಾರ್ಕಳಬೆಟ್ಟು ವಿಷ್ಣುಮೂರ್ತಿನಗರ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ 9ನೇ ವರ್ಷದ ಪ್ರತಿಷ್ಠಾ ವರ್ಧಂತಿಯ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಬೆಳ್ಕಳೆ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ಭಟ್ ಧಾರ್ಮಿಕ ಸಭೆ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಸಿವಿಲ್ ಎಂಜಿನಿಯರ್ ಭಾಸ್ಕರ್ ಜತ್ತನ್, ತೆಂಕನಿಡಿಯೂರು ಗ್ರಾ.ಪಂ. ಅಧ್ಯಕ್ಷ ಕೃಷ್ಣ ಶೆಟ್ಟಿ, ತಾ.ಪಂ. ಸದಸ್ಯ ಧನಂಜಯ ಕುಂದರ್, ಮುಂಬಯಿ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಎಲ್.ಎಂ. ತೋನ್ಸೆ, ಡಿ.ಕೆ. ಸೌಂಡ್ಸ್ ದೀಪಕ್ ಕೊಪ್ಪಲ್‌ತೋಟ, ನೇಜಾರ್ ಭಗವತಿ ತೀಯಾ ಸಮಾಜದ ಅಧ್ಯಕ್ಷ ಪ್ರಶಾಂತ್ ಸಾಲ್ಯಾನ್, ಮತೊÕéàದ್ಯಮಿ ಶೇಖರ್ ಜಿ. ಕೋಟ್ಯಾನ್, ತೆಂಕನಿಡಿಯೂರು ಕಿರಣ್ ಮಿಲ್ಕ್ ಡೈರಿಯ ಗೋಪಾಲಕೃಷ್ಣ ಶೆಟ್ಟಿ, ಕೆಳಾರ್ಕಳಬೆಟ್ಟು ಶ್ರೀದೇವಿ ಭೂದೇವಿ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಸದಾನಂದ ನಾಯಕ್, ಯುವ ಉದ್ಯಮಿ ಜೀವನ್ ಪಾಳೆಕಟ್ಟೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವ್ಯಾಯಾಮ ಶಾಲೆಯ ಗೌರವಾಧ್ಯಕ್ಷ ದಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಧುಸೂದನ್, ಜತೆ ಕಾರ್ಯದರ್ಶಿ ಅಜಿತ್, ಕೋಶಾಧಿಕಾರಿ ರಕ್ಷಿತ್, ಸುಮಿತ್ ಪಾಲನ್, ಕ್ರೀಡಾ ಕಾರ್ಯದರ್ಶಿ ಚೇತನ್‌ರಾವ್, ನಾಗೇಶ್ ಪಾಲನ್, ಸುಭಾಸ್ ಕೊಳ, ಗೌರವ ಸಲಹೆಗಾರರಾದ ಭವಾನಿ ಶಂಕರ್ ಲಾಡ್, ಅಣ್ಣಯ್ಯ ಪಾಲನ್, ಬಾಬು ಸಾಲ್ಯಾನ್, ಅಂಚನ್ ಮಾತೃ ಮಂಡಳಿಯ ಅಧ್ಯಕ್ಷೆ ಜಯಂತಿ, ಶಿಕ್ಷಕ ಕೃಷ್ಣಪ್ಪ ತಿಂಗಳಾಯ ಅರ್ಚಕರಾದ ಅಶೋಕ ಕೋಟ್ಯಾನ್, ಧನ್‌ರಾಜ್, ಉದಯ್, ಪ್ರಣವ್ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಮುಖರನ್ನು ಈ ಸಂದರ್ಭ ಸಮ್ಮಾನಿಸಲಾಯಿತು.
ವ್ಯಾಯಾಮ ಶಾಲೆಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ಅನಿಲ್ ಪಾಲನ್ ವಂದಿಸಿದರು. ವಿಜೇತ ಶೆಟ್ಟಿ ನಿರೂಪಿಸಿದರು.