Advertisement
ಮಕ್ಕಳಲ್ಲಿರುವ ವೈಜ್ಞಾನಿಕ ಚಿಂತನೆಗೆ ಮೂರ್ತ ರೂಪ ನೀಡುವುದು ಈ ಸ್ಪರ್ಧೆಯ ಉದ್ದೇಶ. ಕಳೆದ ಆರೇಳು ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ.
6ರಿಂದ 10ನೇ ತರಗತಿ ಮಕ್ಕಳಿಗೆ ಈ ಸ್ಪರ್ಧೆ ಮೀಸಲಾಗಿದ್ದು 5 ವಿಭಾಗಗಳಲ್ಲಿ ನಡೆಯುತ್ತಿದೆ. ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆ ಗಳ ಮಕ್ಕಳು ಭಾಗವಹಿಸಬಹುದು. ಒಟ್ಟು 1 ಲಕ್ಷ ಮಕ್ಕಳಿಗೆ ತಲಾ 10 ಸಾವಿರ ರೂ. ನೀಡಿ ಅವರಿಗೆ ಸಂಬಂಧಿತ ವಿಜ್ಞಾನದ ಮಾದರಿ ತಯಾರಿಸುವಂತೆ ತಿಳಿಸಲಾಗುತ್ತದೆ. ಸ್ಪರ್ಧೆಯನ್ನು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಡೆಸಲಾಗುತ್ತದೆ. ಪ್ರತೀ ಹಂತದಲ್ಲಿ 1/10 ಉತ್ತಮ ಮೊಡೆಲ್‌ಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ.ದ.ಕ. ಜಿಲ್ಲೆಗೆ ಸಂಬಂಧಿಸಿ 2021- 22ರಲ್ಲಿ 2,602 ವಿದ್ಯಾರ್ಥಿಗಳು ಭಾಗವಹಿಸಿದ್ದು, 305 ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ. ಸಿಕ್ಕಿದೆ. ನೋಂದಣಿಯಲ್ಲಿ
ಮುಂದಿರುವ ಶಾಲೆಗಳು
ಈ ಸಾಲಿನಲ್ಲಿ ಮೂಡುಬಿದಿರೆ, ಪುತ್ತೂರು, ಸುಳ್ಯ ಶೈಕ್ಷಣಿಕ ಬ್ಲಾಕ್‌ನ ಶಾಲೆಗಳು ಹೆಚ್ಚು ಆಸಕ್ತಿ ತೋರಿದ್ದು, ಶೇ. 100ರಷ್ಟು ಮಕ್ಕಳು ನೋಂದಣಿ ಮಾಡಿದ್ದಾರೆ. ಜಿಲ್ಲೆಯ ಬೆಳ್ತಂಗಡಿ, ಮಂಗಳೂರು ದಕ್ಷಿಣದ ಶೈಕ್ಷಣಿಕ ಬ್ಲಾಕ್ ಹಿಂದೆ ಇವೆ. ಸೆ. 30ರ ವರೆಗೆ ನೋಂದಣಿಗೆ ಅವಕಾಶವಿದೆ.
Related Articles
Advertisement
ಉಡುಪಿ: 5 ಸಾವಿರ ಗುರಿಉಡುಪಿ ಜಿಲ್ಲೆಯ 370 ಶಾಲೆಗಳ1,063 ಮಂದಿ ನೋಂದಾಯಿಸಿ ಕೊಂಡಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ5 ಸಾವಿರ ಮಂದಿ ನೋಂದಣಿ ಮಾಡಿ ಕೊಳ್ಳಲು ಗುರಿ ಇರಿಸಿಕೊಳ್ಳಲಾಗಿದೆ. ವಲಯವಾರು ಬ್ರಹ್ಮಾವರ ವಲಯದ 44 ಶಾಲೆಗಳ 144, ಬೈಂದೂರು ವಲಯದ 58 ಶಾಲೆಗಳ 154, ಕಾರ್ಕಳವಲಯದ 73 ಶಾಲೆಗಳ 245, ಕುಂದಾಪುರ ವಲಯದ 117 ಶಾಲೆಗಳ 324 ಹಾಗೂ ಉಡುಪಿ ವಲಯದ 74 ಶಾಲೆಗಳ 196 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.