Advertisement

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

06:07 PM Sep 18, 2024 | Team Udayavani |

ಸಾಧನೆ ಎಂದರೆ ಯಾವುದೇ ವಿಷಯದಲ್ಲಿ ಪ್ರಯತ್ನ, ಕೌಶಲ ಮತ್ತು ಧೈರ್ಯದಿಂದ ಯಶಸ್ಸನ್ನು ಗಳಿಸುವುದು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಶಿಷ್ಟ ಮತ್ತು ವಿಭಿನ್ನ ಪ್ರತಿಭೆಯಿರುತ್ತದೆ ಹಾಗಾಗಿ ಸಾಧನೆ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೆ ಸಾಧಿಸಲು ಅಗತ್ಯವಾಗಿ ಇರಬೇಕಾದದ್ದು ಸ್ಪಷ್ಟತೆ.

Advertisement

ಸ್ಪಷ್ಟತೆ ಸಾಧನೆಯ ಹಾದಿಗೆ ತಲುಪಲು ಸಹಕಾರಿಯಾಗಿರುತ್ತದೆ. ಸ್ಪಷ್ಟತೆ ಎಂದರೆ ವ್ಯಕ್ತಿ ತನ್ನ ಸಾಧ್ಯತೆ ಮತ್ತು ಮಿತಿಗಳನ್ನು ಅರಿತು, ಸ್ವಯಂ ಅವಲೋಕಿಸಿ ತನ್ನ ಸಾಧ್ಯತೆ ಮತ್ತು ಮಿತಿಗಳನುಸಾರವಾಗಿ ಸೂಕ್ತ ಕ್ಷೇತ್ರಗಳನ್ನು ಆಯ್ಕೆ ಮಾಡಿ ಸ್ಪಷ್ಟ ನಿಲುವು ತೆಗೆದುಕೊಂಡು ಅದರೆಡೆಗೆ ಪ್ರಾಮಾಣಿಕವಾಗಿ ಶ್ರಮಿಸುವುದು. ಆದರೆ ಇಂದಿನ ಯುವಜನಾಂಗ ಸಾಧನೆಯ ವಿಷಯದಲ್ಲಿ ತಾತ್ಕಾಲಿಕ ಪ್ರಚೋದನೆಗೆ ಒಳಗಾಗುತ್ತಿದ್ದಾರೆ.

ಸಾಮಾಜಿಕ ಜಾಲತಾಣದ ಯಾವುದೋ ಮೋಟಿವೇಷನಲ್‌ ವೀಡಿಯೋವನ್ನು ವೀಕ್ಷಿಸಿ ತಾತ್ಕಾಲಿಕವಾಗಿ ಎರಡು ದಿನ ಪ್ರೇರಣೆಗೊಂಡು ಮೂರನೆಯ ದಿನಕ್ಕೆ ಮೊದಲಿನಂತೆ ಅದೇ ಅಲಸ್ಯತನಕ್ಕೆ ಒಳಗಾಗುತ್ತಿದ್ದಾರೆ. ಇಂತವರನ್ನು ಆರಂಭಿಕ ವೀರರೆಂದು ಕರೆಯಬಹುದು. ಇದರಿಂದ ಯಶಸ್ಸು ದಕ್ಕುವುದಿಲ್ಲ ಈ ರೀತಿಯ ತಾತ್ಕಾಲಿಕ ಪ್ರೇರಣೆ ಸಾಧನೆಗೆ ಪೂರಕವಲ್ಲ, ಹೆಚ್ಚಾಗಿ ಸಾಧನೆಗೆ ಸ್ಪೂರ್ತಿ ಮತ್ತು ಪ್ರೇರಣೆಗಿಂತ ಸ್ಪಷ್ಟತೆ ಅವಶ್ಯಕ.

ಇದರೊಂದಿಗೆ ನಮ್ಮ ಯುವಸಮಾಜ ಹಿಂದುಳಿಯಲು ಪ್ರಮುಖ ಕಾರಣಗಳು ಅವರಲ್ಲಿರುವ ಅವೈಚಾರಿಕ ಮನೋಭಾವ, ಕಲಿಕಾಸಕ್ತಿಯ ಕೊರತೆ, ಅಶ್ಲೀಲತೆ, ಪ್ರಸ್ತುತ ರಾಜಕೀಯ ಯುವಸಮಾಜವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವ ಪರಿ ಹಾಗೂ ಕಂಠಪಾಠ ಆಧರಿತ ಶಿಕ್ಷಣ ವ್ಯವಸ್ಥೆಯ ವೈಫ‌ಲ್ಯ ಇವೆಲ್ಲವೂ ಯುವಸಮಾಜದ ಪ್ರಗತಿ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರುತ್ತಿದೆ ಎಂದರೆ ತಪ್ಪಾಗಲಾರದು.

ಯುವಜನಾಂಗ ಈ ಮೇಲಿನ ನಕಾರಾತ್ಮಕ ಪ್ರಭಾವಕ್ಕೆ ಒಳಗಾಗದೆ, ತಾತ್ಕಾಲಿಕ ಪ್ರೇರಣೆ ಸ್ಫೂರ್ತಿಯ ಬದಲು ಸ್ಪಷ್ಟತೆಯನ್ನು ಅರಿತುಕೊಂಡು, ಅದರ ಸಲುವಾಗಿ ಅವಿರತವಾಗಿ ಮತ್ತು ಪ್ರಾಮಾಣಿಕವಾಗಿ ಶ್ರಮಿಸಿದರೆ ಯಶಸ್ಸು ಖಂಡಿತವಾಗಿ ಸಿಗುತ್ತದೆ. ಯುವ ಸಮೂಹ ಕೃಷಿ, ವಿಜ್ಞಾನ, ಕಲೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಾಗ ಒಂದು ಉತ್ತಮ ಸಾಮಾಜಿಕ, ಆರ್ಥಿಕ ಮತ್ತು ನ್ಯಾಯೋಜಿತ ಸಮಾಜ ನಿರ್ಮಾಣವಾಗುವಲ್ಲಿ ಯಾವುದೇ ಅನುಮಾನವಿಲ್ಲ.

Advertisement

-ಮಿಥುನ್‌ ಪಿ.

ತುಮಕೂರು ವಿಶ್ವವಿದ್ಯಾಲಯ

Advertisement

Udayavani is now on Telegram. Click here to join our channel and stay updated with the latest news.

Next