ಬುಲಂದ್‌ಶಹರ್: ಉತ್ತರಪ್ರದೇಶದ ಬುಲಂದ್ ಶಹರ್‌ನಲ್ಲಿ ಸೋಮವಾರ ನಡೆದ ಹಿಂಸಾಚಾರದಲ್ಲಿ ಯುವಕ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ಸೇರಿ ಇಬ್ಬರ ಹತ್ಯೆ ಪ್ರಕರಣ ಸಂಬಂಧ ಮಂಗಳವಾರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಜರಂಗದಳ ಜಿಲ್ಲಾ ಸಂಚಾಲಕ ಯೋಗೇಶ್ ರಾಜ್ ಪ್ರಮುಖ ಆರೋಪಿ ಎಂದು ಪೊಲೀಸರು ಗುರುತಿಸಿದ್ದು, ಆತ ತಲೆಮರೆಸಿಕೊಂಡಿದ್ದಾನೆ. 27 ಮಂದಿಯ ಹೆಸರನ್ನು ಎಫ್ಐಆರ್‌ನಲ್ಲಿ ಉಲ್ಲೇಖೀಸಲಾಗಿದ್ದು, 60 ಮಂದಿ ಅಪರಿಚಿತರ ವಿರುದ್ಧ ಕೇಸು ದಾಖಲಿಸಲಾಗಿದೆ. ಇನ್ನೊಂದೆಡೆ, ಈ ಘಟನೆಯು ರಾಜಕೀಯ ಪಕ್ಷಗಳ ನಡುವೆ ವಾಗ್ಯುದ್ಧಕ್ಕೂ ಕಾರಣವಾಗಿದೆ.
ಇನ್‌ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಹಾಗೂ ಯುವಕ ಸುಮಿತ್ ಇಬ್ಬರೂ ಗುಂಡೇಟು ತಗುಲಿ ಮೃತಪಟ್ಟಿ ದ್ದಾರೆ. ಅವರ ಮೇಲೆ ಘನ ವಸ್ತು ಗಳಿಂದ ಹಲ್ಲೆಯನ್ನೂ ನಡೆಸಲಾಗಿದೆ ಎಂದು ಡಿಜಿಪಿ ಆನಂದ್ ಕುಮಾರ್ ತಿಳಿಸಿದ್ದಾರೆ.
ಇದೊಂದು ಸಂಚು: ಘಟನೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ಮೃತ ಇನ್‌ಸ್ಪೆಕ್ಟರ್ ಸಿಂಗ್ ಅವರ ಸಹೋ ದರಿ ಸುನಿತಾ ಸಿಂಗ್, “ನನ್ನ ಸಹೋದರ ಸುಬೋಧ್ ಅವರು ದಾದ್ರಿಯಲ್ಲಿ ನಡೆದ ಅಖಾÉಕ್ ಹತ್ಯೆ ಪ್ರಕರಣದ ತನಿಖಾಧಿಕಾರಿ ಯಾಗಿದ್ದರು. ಹೀಗಾಗಿ ಅವರನ್ನು ಸಂಚು ರೂಪಿಸಿ ಪೊಲೀಸರೇ ಕೊಂದು ಹಾಕಿ ದ್ದಾರೆ’ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಇನ್‌ಸ್ಪೆಕ್ಟರ್ ಸುಬೋಧ್‌ಗೆ ಗುಂಡು ಹಾರಿಸಿದ್ದು ಪೊಲೀಸರೇ ಹೊರತು, ಬಜರಂಗದಳ ಕಾರ್ಯಕರ್ತ ರಲ್ಲ ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.
ನೋಟಿಸ್: ಪ್ರಕರಣ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಉತ್ತರ ಪ್ರದೇಶ ಸರಕಾರ ಹಾಗೂ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದೆ.
ಧರ್ಮದ ಹೆಸರಲ್ಲಿ ಯಾವತ್ತೂ ಹಿಂಸೆಗಿಳಿಯಬೇಡ. ಒಬ್ಬ ಒಳ್ಳೆಯ ನಾಗರಿಕನಾಗು ಎಂದು ಆಗಾಗ ಅಪ್ಪ ನನಗೆ ಹೇಳುತ್ತಿದ್ದರು. ಈಗ ಹಿಂದೂ-ಮುಸ್ಲಿಂ ಜಗಳದಲ್ಲಿ ನನ್ನ ತಂದೆ ಪ್ರಾಣ ಕಳೆದುಕೊಳ್ಳ ಬೇಕಾಯಿತು. ನಾಳೆ ಯಾರ ಅಪ್ಪನ ಸರದಿಯೋ ಗೊತ್ತಿಲ್ಲ?
– ಅಭಿಷೇಕ್, ಮೃತ ಇನ್‌ಸ್ಪೆಕ್ಟರ್ ಪುತ್ರ