Advertisement
ಈ ಎಲ್ಲಾ ಅಂಶಗಳೊಂದಿಗೆ ಬಂದ “ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರ ಪ್ರೇಕ್ಷಕರನ್ನು ರಂಜಿಸುವಲ್ಲಿ ಹಿಂದೆ ಬೀಳುವುದಿಲ್ಲ. ದೃಶ್ಯದಿಂದ ದೃಶ್ಯಕ್ಕೆ ಮಜ ಕೊಡುತ್ತಾ, ನಡು ನಡುವೆ ಟ್ವಿಸ್ಟ್‌ಗಳೊಂದಿಗೆ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಾ ಸಾಗುವುದು ಈ ಸಿನಿಮಾದ ಹೈಲೈಟ್‌ಗಳಲ್ಲೊಂದು.
Related Articles
Advertisement
ಮೊದಲೇ ಹೇಳಿದಂತೆ ಚಿತ್ರದಲ್ಲಿ ನಟ ದರ್ಶನ್ ಅವರು ಕೂಡಾ ನಟಿಸಿದ್ದಾರೆ. ಅದೊಂದು ವಿಶೇಷ ಪಾತ್ರ. ಈ ಪಾತ್ರ ಕೂಡಾ ಸಿನಿಮಾದ ಮೈಲೇಜ್ ಹೆಚ್ಚಿಸಿದೆ. ಹೆಚ್ಚು ಲಾಜಿಕ್ ಹುಡುಕದೇ ಒಂದು ಕಮರ್ಷಿಯಲ್ ಸಿನಿಮಾವನ್ನು ಖುಷಿಯಿಂದ ಎಂಜಾಯ್ ಮಾಡುವ ಸಿನಿಮಾ ಪ್ರೇಮಿಗಳು ನೀವಾಗಿದ್ದರೆ ನಿಮಗೆ “ಇನ್ಸ್‌ಪೆಕ್ಟರ್ ವಿಕ್ರಂ’ ಖಂಡಿತಾ ನಿಮಗೆ ಇಷ್ಟವಾಗುತ್ತದೆ.
ಮೊದಲೇ ಹೇಳಿದಂತೆ ನಟ ಪ್ರಜ್ವಲ್ ದೇವರಾಜ್ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದಾರೆ. ಈ ಹಿಂದಿನ ಪಾತ್ರಗಳಿಗೆ ಹೋಲಿಸಿದರೆ ಇದು ಅವರಿಗೆ ಹೊಸದು. ಅತ್ತ ಕಡೆ ಆ್ಯಕ್ಷನ್, ಇತ್ತ ಕಡೆ ಲವ್ … ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುವ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ನಾಯಕಿ ಭಾವನಾ ಈ ಸಿನಿಮಾದ ಮತ್ತೂಂದು ಅಚ್ಚರಿ. ಇಲ್ಲಿ ಅವರು ಎರಡು ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಅವರ ಹೊಸ ಗೆಟಪ್ ಚಿತ್ರದ ಟ್ವಿಸ್ಟ್‌ಗಳಲ್ಲೊಂದು. ರಘು ಮುಖರ್ಜಿಯವರ ಪಾತ್ರ ಕೂಡಾ ಸಿನಿಮಾದಲ್ಲಿ ಪ್ರಮುಖವಾಗಿದೆ. ಉಳಿದಂತೆ ಧರ್ಮಣ್ಣ ಹಾಗೂ ಇತರರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ತಾಂತ್ರಿಕವಾಗಿಯೂ ಈ ಸಿನಿಮಾ ಅದ್ಧೂರಿಯಾಗಿದೆ. ಛಾಯಾಗ್ರಾಹಕ ನವೀನ್ ಕುಮಾರ್ ಇಡೀ ಚಿತ್ರವನ್ನು ಹಬ್ಬದಂತೆ ಕಟ್ಟಿಕೊಟ್ಟರೆ ಸಂಗೀತ ನಿರ್ದೇಶಕ ಅನೂಪ್ ಸೀಳೀನ್ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಚಿತ್ರದ ವೇಗ ಹೆಚ್ಚಿಸಿದೆ.