Advertisement

ಇನ್ಸ್‌ಪೆಕ್ಟರ್‌ ಮೇಲೆ ಪಾನಮತ್ತನ ಹಲ್ಲೆ

11:36 AM Apr 10, 2017 | Team Udayavani |

ಬೆಂಗಳೂರು: ಮದ್ಯ ಸೇವಿಸಿ ವಾಹನ ಚಲಾಯಿಸಿದ್ದನ್ನು ಪ್ರಶ್ನಿಸಿದ ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಟಿಕ್ಕಿಗಳನ್ನು ಮಹದೇವಪುರ ಠಾಣೆ ಪೊಲೀಸರು ಬಂಸಿದ್ದಾರೆ. ಬಿಹಾರ ಮೂಲದ ಪ್ರಿಯಾಂಶು ಮತ್ತು ಅಲೋಕ್‌ ಬಂತರು. ಹಳೆ ವಿಮಾನ ನಿಲ್ದಾಣ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಮೊಹಮ್ಮದ್‌ ಹಲ್ಲೆಗೊಳಗಾದವರು. 

Advertisement

ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ದೊಡ್ಡನೆಕ್ಕುಂದಿ ಬಳಿಯ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೊಹಮ್ಮದ್‌ ಅವರಿಗೆ ಪೊಲೀಸ್‌ ಕಂಟ್ರೋಲ್‌ ರೂಂನಿಂದ ಕರೆ ಬಂದಿತ್ತು. “ದೊಡ್ಡನೆಕ್ಕುಂದಿ ಬಳಿ ಕೆಲವರು ಶಸ್ತ್ರಾಸ್ತ್ರ ಇಟ್ಟು ಕೊಂಡು ಓಡಾಡುತ್ತಿದ್ದಾರೆ’ ಎಂದು ಮಾಹಿತಿ ನೀಡಲಾಗಿತ್ತು. ಈ ಸೂಚನೆ ಮೇರೆಗೆ ಮೊಹಮ್ಮದ್‌ ಸ್ಥಳಕ್ಕೆ ಹೋಗಿದ್ದರು. ಇದೇ ಮಾಹಿತಿ ಆಧರಿಸಿ ಮಹದೇವಪುರ ಠಾಣೆ ಇನ್‌ಸ್ಪೆಕ್ಟರ್‌ ಕೂಡ ಸ್ಥಳಕ್ಕೆ ಬಂದಿದ್ದರು. ಆದರೆ, ಅಲ್ಲಿ ಅಂತಹ ಯಾವುದೇ ವ್ಯಕ್ತಿಗಳು ಕಂಡು ಬಂದಿರಲಿಲ್ಲ. ಹಾಗಾಗಿ ಮಹದೇವಪುರ ಇನ್‌ಸ್ಪೆಕ್ಟರ್‌ ಅಲ್ಲಿಂದ ವಾಪಸ್‌ ತೆರಳಿದ್ದರು. 

ಇನ್‌ಸ್ಪೆಕ್ಟರ್‌ ಮೊಹಮ್ಮದ್‌ ಅಲ್ಲಿಂದ ಇನ್ನೇನು ತೆರಳಬೇಕು ಎನ್ನುವಷ್ಟರಲ್ಲಿ ಇನ್‌ಸ್ಪೆಕ್ಟರ್‌ ಬಳಿಗೆ ಬಂದ ವ್ಯಕ್ತಿಯೊಬ್ಬ ಯಾರೋ ಇಬ್ಬರು ಯುವಕರು ನನ್ನ ಮೇಲೆ ಹಲ್ಲೆ ನಡೆಸಿ ಬೈಕ್‌ ಕಸಿದುಕೊಂಡ‌ರು ಎಂದು ಹೇಳಿಕೊಂಡಿದ್ದ. ಅಲ್ಲದೆ, ಬೈಕ್‌ ನಂಬರನ್ನೂ ನೀಡಿದ್ದ. ಹಾಗಾಗಿ ವಾಕಿಟಾಕಿ ಮೂಲಕ ಎಲ್ಲ ಸಿಬ್ಬಂದಿಗೂ ವಿಷಯ ತಿಳಿಸಿ ತಾವೂ ತಪಾಸಣೆಗಿಳಿದಿದ್ದರು. ಇದೇ ಮಾರ್ಗವಾಗಿ ಅಲೋಕ್‌ ಎಂಬಾತ ಬೈಕ್‌ ಓಡಿಸಿಕೊಂಡು ಬಂದಿದ್ದ.

ಮದ್ಯ ಸೇವಿಸಿದ್ದರಿಂದ ಪೊಲೀಸರನ್ನು ಕಂಡು ಅಲೋಕ್‌ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಸಿಬ್ಬಂದಿ ಕೂಡಲೇ ಆತನನ್ನು ಬೆನ್ನಟ್ಟಿ ವಶಕ್ಕೆ ಪಡೆದಿದ್ದರು. ನಂತರ ವಾಹನದ ದಾಖಲೆ ಪರಿಶೀಲನೆಗೆ ಮುಂದಾದಾಗ ಅಲೋಕ್‌ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದ.  ನಂತರ ಸ್ನೇಹಿತ ಪ್ರಿಯಾಂಶುನನ್ನು ಕರೆಸಿಕೊಂಡ. ಸ್ಥಳಕ್ಕೆ ಬಂದ ಪ್ರಿಯಾಂಶು ಪೊಲೀಸರ ಜತೆ ಜಗಳ ತೆಗೆದು ಇನ್‌ಸ್ಪೆಕ್ಟರ್‌ ಮೊಹಮ್ಮದ್‌ ಕೆನ್ನೆಗೆ ಹೊಡೆದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next