Advertisement

ಇನ್ಸ್‌ಪೆಕ್ಟರ್‌ ಹತ್ಯೆಗೆ ಟ್ವಿಸ್ಟ್‌: ಯೋಧನಿಂದ ಗುಂಡೇಟು?

06:00 AM Dec 08, 2018 | Team Udayavani |

ಲಕ್ನೋ: ಉತ್ತರಪ್ರದೇಶದ ಬುಲಂದ್‌ ಶಹರ್‌ನಲ್ಲಿ ಇತ್ತೀಚೆಗೆ ನಡೆದ ಪೊಲೀಸ್‌ ಇನ್ಸ್‌ಪೆಕ್ಟರ್‌ ಸುಬೋಧ್‌ ಕುಮಾರ್‌ ಸಿಂಗ್‌ ಹತ್ಯೆ ಪ್ರಕರಣಕ್ಕೆ ವಿಚಿತ್ರ ತಿರುವೊಂದು ಸಿಕ್ಕಿದೆ. ಅಂದು ಉದ್ರಿಕ್ತ ಗುಂಪಿನಲ್ಲಿದ್ದ ಜೀತು ಫೌಜಿ ಎಂಬ ಯೋಧನ ಬಂದೂಕಿನಿಂದ ಹಾರಿದ ಗುಂಡು ಸಿಂಗ್‌ ಅವರನ್ನು ಬಲಿ ಪಡೆಯಿತು ಎಂದು ಅಂದಿನ ಗಲಭೆ ಯಲ್ಲಿ ಭಾಗಿಯಾಗಿದ್ದ ಕೆಲವರು ನೀಡಿರುವ ಹೇಳಿಕೆಯನ್ನು ಆಧರಿಸಿ ಇದೀಗ ಪೊಲೀಸರು ಜೀತು ಬೆನ್ನು ಬಿದ್ದಿದ್ದಾರೆ. 

Advertisement

ಜೀತು ಯಾರು, ಎಲ್ಲಿಯವರು?: ಮಹಾವ್‌ ಜಿಲ್ಲೆಯವರಾದ ಜೀತು, ಸದ್ಯಕ್ಕೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಮಾಹಿತಿ ಲಭ್ಯ ವಾಗಿದೆ. ಘಟನೆ ನಡೆದಾಗಿನಿಂದ ತಲೆ ಮರೆಸಿಕೊಂಡಿದ್ದಾರೆ. ಬಂಧನಕ್ಕೆ ಪೊಲೀಸರ ತಂಡವೊಂದು ಜಮ್ಮು ಕಾಶ್ಮೀರಕ್ಕೆ ಹೋಗಿದೆ. ಜೀತು ಸಿಕ್ಕಿಬಿದ್ದರೆ ನಿಜಾಂಶ ಹೊರಬೀಳಲಿದೆ ಎಂದು ಮೀರತ್‌ ವಲಯದ ವಿಭಾಗೀಯ ಪೊಲೀಸ್‌ ಮಹಾ ನಿರ್ದೇಶಕ ರಾಮ್‌ ಕುಮಾರ್‌ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜೀತು ತಾಯಿ ರತನ್‌ ಕೌರ್‌, ಗಲಭೆ ವಿಡಿಯೋ ಗಳಲ್ಲಿ ತನ್ನ ಮಗನಿರುವುದನ್ನು ಕಂಡು ಹಿಡಿಯಲಾಗಿಲ್ಲ ಎಂದಿದ್ದಾರೆ. 

ಬುಲಂದ್‌ ಶಹರ್‌ ಹತ್ಯೆ ಒಂದು ಆಕಸ್ಮಿಕ ಘಟನೆ. ಇನ್ಸ್‌ ಪೆಕ್ಟರ್‌ ಸಿಂಗ್‌ ಅವರ ಹತ್ಯೆಗೆ ಕಾರಣರಾದವರನ್ನು ಆದಷ್ಟು ಬೇಗನೇ ಬಂಧಿಸಿ ಶಿಕ್ಷೆಗೊಳಪಡಿಸಲಾಗುತ್ತದೆ.  
ಯೋಗಿ ಆದಿತ್ಯನಾಥ್‌, ಉತ್ತರ ಪ್ರದೇಶ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next