Advertisement
ಈ ವೇಳೆ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ಬಾಬಾನಗರ ಗ್ರಾಪಂ ವ್ಯಾಪ್ತಿಯಲ್ಲಿ, ಸಮಗ್ರ ಶಾಲಾ ಅಭಿವೃದ್ಧಿ ಕಾರ್ಯಕ್ರಮದಡಿ ಶಾಲೆಯೊಂದರ ಸುವ್ಯವಸ್ಥೆ ಕಂಡು ಸಿಇಒ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
Related Articles
Advertisement
ಗ್ರಾಪಂ ಕಟ್ಟಡ ಕಾಮಗಾರಿ ಸ್ಥಳಕ್ಕೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಸತಿ ನಿಲಯಕ್ಕೆ ಕೂಡ ಸಿಇಒ ಭೇಟಿ ನೀಡಿದರು. ವಸತಿ ನಿಲಯದಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡ ಪೌಷ್ಟಿಕ ತೋಟ ನಿರ್ಮಿಸಿದ್ದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಂಥಾಲಯಕ್ಕೂ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಮನರೇಗಾ ಯೋಜನೆಯ ಸಂಪೂರ್ಣ ಸದ್ಬಳಕೆ ಮಾಡಿಕೊಂಡು ಮಾದರಿ ಗ್ರಾಮ ಮಾಡುವ ನಿಟ್ಟಿನಲ್ಲಿ ಎಲ್ಲ ಅ ಕಾರಿ ಮತ್ತು ಜನಪ್ರತಿನಿಧಿ ಗಳು ಮುಂದಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಶುದ್ಧತೆ ಕಾಪಾಡಿಕೊಳ್ಳಲು ಮತ್ತು ನೀರಿನ ಸದ್ಬಳಕೆ ಮಾಡಿಕೊಳ್ಳಲು ತಿಳಿಸಿದರು.
ಬಿಜ್ಜರಗಿ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ವಿಕಲಚೇತನರಿಗು ಸಹ ಆದ್ಯತೆ ಮೇರೆಗೆ ಕೆಲಸ ನೀಡಿರುವುದು ನಿಜಕ್ಕೂ ಮೆಚ್ಚುವಂತಹ ಕಾರ್ಯ. ಇಂತಹ ಕೆಲಸ ಇತರೆ ಗ್ರಾಮ ಪಂಚಾಯಿತಿಗಳಿಗೆ ಮಾದರಿಯಾಗಲಿ ಎಂದು ಸಂತಸದಿಂದ ಶ್ಲಾಘಿ ಸಿದರು. ಶಾಲಾ ಮಕ್ಕಳಿಗೆ ಶಿಕ್ಷಣ ನೀಡುವ ವಿಷಯದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳಬೇಡಿ ಎಂದ ಸಿಇಒ ಅವರು, ಶಾಲೆಯೊಂದರ ಗುಣಮಟ್ಟ ತಿಳಿಯುವುದು ಅದರ ಸುಂದರವಾದ ಕಟ್ಟಡದಿಂದಲ್ಲ, ಮಕ್ಕಳ ಶಿಕ್ಷಣದ ಫಲಿತಾಂಶದ ಆಧಾರದ ಮೇಲೆ ನಿರ್ಧರಿತವಾಗುತ್ತದೆ ಎಂದರು.
ಗ್ರಾಮೀಣ ಶಾಲಾ ಮಕ್ಕಳ ಶಿಕ್ಷಣ ಸಲುವಾಗಿ ವಸತಿ ನಿಲಯಗಳಲ್ಲಿ ಟ್ಯೂಷನ್ ಕ್ಲಾಸ್ ಆರಂಭಿಸಿ, ವಸತಿ ನಿಲಯದ ಮಕ್ಕಳ ಜೊತೆ ಇತರೆ ಮಕ್ಕಳಿಗೂ ಈ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರು.
ವಿದ್ಯಾರ್ಥಿನಿಗೆ ಸನ್ಮಾನ: ವಿಜಯಪುರದ ಸರ್ಕಾರಿ ಪಪೂ ಕಾಲೇಜಿನಲ್ಲಿ ಪಿಯೂ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇ.92.50 ಅಂಕ ಪಡೆದ ಬಾಬಾನಗರದ ಪೂಜಾ ಹಡಪದ ವಿದ್ಯಾರ್ಥಿನಿಯನ್ನು ಸನ್ಮಾನಿಸಿದರು.
ತಿಕೋಟಾ ತಾಪಂ ಇಒ ಎಚ್.ಡಿ. ರಾಜೇಶ, ಮನರೇಗಾ ಸಹಾಯಕ ನಿರ್ದೇಶಕ ಎಂ.ಬಿ.ಮನಗೂಳಿ, ಬಿಜ್ಜರಗಿ ಗ್ರಾಪಂ ಅಧ್ಯಕ್ಷ ಸುಭಾಷ್‌ಗೌಡ ಪಾಟೀಲ, ಬಾಬಾನಗರ ಪಿಡಿಒ ರೇಣುಕಾ ಸೋಲಾಪುರ, ಬಿಜ್ಜರಗಿ ಪಿಡಿಒ ಜೆ.ಎ.ದಶವಂತ, ತಾಂತ್ರಿಕ ಸಂಯೋಜಕರಾದ ಪ್ರಕಾಶ ಮಸಳಿ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ ಇದ್ದರು.