Advertisement
ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಜಲಶಕ್ತಿ ಅಭಿಯಾನದಡಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೇಂದ್ರ ಸರಕಾರದ ಉಪ ಕಾರ್ಯದರ್ಶಿ ಅಂಕಿತ ಮಿಶ್ರಾ, ವಿಜ್ಞಾನಿ ಎನ್.ಎ. ಸೋನಾವಾನೆ ಅವರನ್ನೊಳಗೊಂಡ ಜಲಶಕ್ತಿ ತಂಡದ ಸದಸ್ಯರು ವೀಕ್ಷಿಸಿ ಕಾಮಗಾರಿಗಳ ಮಾಹಿತಿ ಪಡೆದುಕೊಂಡರು.
Related Articles
Advertisement
ಕುಮಟಾ ತಾಲೂಕಿನ ಗ್ರಾಮಗಳ ಜಲ ರಕ್ಷಣೆ ಕಾಮಗಾರಿಗಳನ್ನು ಖುದ್ದಾಗಿ ನೋಡಿದ ನಂತರ ಹೊನ್ನಾವರ ತಾಲೂಕಿನ ಕಡತೋಕ ಗ್ರಾಪಂ ವ್ಯಾಪ್ತಿಯ ಕೆಕ್ಕಾರ ಗ್ರಾಮದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ ಅಭಿವೃದ್ಧಿಪಡಿಸಲಾದ ಕೃಷಿ ಹೊಂಡ, ನರೇಗಾದಡಿ ನಳಿನಿ ನಾಗಪ್ಪ ಗೌಡರ ಜಮೀನಿನಲ್ಲಿ ಕೈಗೊಂಡ ಡ್ರ್ಯಾಗನ್ ಫ್ರೂಟ್ ತೋಟ ನಿರ್ಮಾಣ ಕಾಮಗಾರಿ, ಮಂಕಿ-ಸಿ ಚಿತ್ತಾರ ಗ್ರಾಪಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ನರೇಗಾದಡಿ ನಿರ್ಮಿಸಲಾದ ಚೆಕ್ ಡ್ಯಾಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜಿಪಂ ಅಭಿವೃದ್ಧಿ ವಿಭಾಗದ ಉಪ ಕಾರ್ಯದರ್ಶಿ ದಿಲೀಪ್ ಜಕ್ಕಪ್ಪಗೋಳ್, ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಪಂ ಇಒಗಳಾದ ಪಿ.ವೈ. ಸಾವಂತ, ನಾಗರತ್ನಾ ನಾಯಕ, ಸುರೇಶ ನಾಯ್ಕ, ನರೇಗಾ ಸಹಾಯಕ ನಿರ್ದೇಶಕರಾದ ಕೃಷ್ಣಾನಂದ ಕೆ., ಬಾಲಚಂದ್ರ ಪಟಗಾರ ಹಾಗೂ ವಿವಿಧ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಡಿಇಸಿ ಸಚಿನ್ ಬಂಟ್, ತಾಂತ್ರಿಕ ಸಂಯೋಜಕರಾದ ಅನಿಲ ಗಾಯತ್ರಿ, ಅಲೋಕ ನಾಯಕ, ಸುನಿಲ ಆಚಾರ್ಯ, ತಾಲೂಕು ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.