Advertisement

ಅಂಚೆ ಕಚೇರಿ ಸ್ಥಳಾಂತರಕ್ಕೆ ಪರಿಶೀಲನೆ

04:41 PM Jul 07, 2020 | Suhan S |

ಕುಮಟಾ: ಮಣಕಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಖಾಸಗಿ ಕಟ್ಟವೊಂದರಲ್ಲಿರುವ ಅಂಚೆ ಕಚೇರಿ ಶಾಖೆಯನ್ನು ಬೇರೆಡೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಅಂಚೆ ಕಚೇರಿಯಿರುವ ಕಟ್ಟಡದಲ್ಲಿ ಈಗ ಬಾರ್‌ ಮತ್ತು ರೆಸ್ಟೋರೆಂಟ್‌ ಆರಂಭಗೊಂಡ ಹಿನ್ನೆಲೆಯಲ್ಲಿ ಅಂಚೆ ಕಚೇರಿಗೆ ತೆರಳಲು ಮಹಿಳೆಯರು ಹಾಗೂ ಯುವತಿಯರಿಗೆ ಮುಜುಗರವೆನಿಸುತ್ತಿತ್ತು. ಹೀಗಾಗಿ ಸ್ಥಳೀಯರು ಅಂಚೆ ಕಚೇರಿ ಕಟ್ಟಡವನ್ನು ಬೇರೆಡೆ ಸ್ಥಳಾಂತರಿಸುವಂತೆ ಶಾಸಕರಿಗೆ ಮನವಿ ಮಾಡಿದ್ದರು.

ಈ ಬಗ್ಗೆ ತಕ್ಷಣ ಸ್ಪಂದಿಸಿದ ಶಾಸಕ ದಿನಕರ ಶೆಟ್ಟಿ, ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ವಸ್ತು ಸ್ಥಿತಿಯನ್ನು ಗಮನಿಸಿ, ಹತ್ತಿರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ನಂತರ ಸಂಬಂಧಪಟ್ಟ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ, ಈಗಿರುವ ಶಾಲೆ ಆವರಣದ ಒಂದು ಮೂಲೆಯಲ್ಲಿ ಅಂಚೆ ಕಚೇರಿ ನಿರ್ಮಿಸಲು 10-10 ಅಡಿ ಜಾಗ ನೀಡುವಂತೆ ಸೂಚಿಸಿದರು. ಇದಕ್ಕೆ ಮೇಲಧಿಕಾರಿಗಳು ಒಪ್ಪಿಗೆ ಸೂಚಿಸಿದ ನಂತರ ಸ್ಥಳಿಯರು ಕಟ್ಟಡ ನಿರ್ಮಾಣಕ್ಕೆ ನಾವೇ ಹಣ ಸಂಗ್ರಹಿಸಿ ನೀಡುವುದಾಗಿ ತಿಳಿಸಿದರು.

ಸ್ಥಳೀಯರಾದ ಜಿ.ಕೆ. ಹೆಗಡೆ, ನಾಗೇಂದ್ರ ಭಂಡಾರಿ, ದಿನೇಶ ಭಂಡಾರಿ, ಬಾಲಚಂದ್ರ ಮಣಕೀಕರ, ಪಾಂಡುರಂಗ ಭಂಡಾರಿ, ಲಿನಾಷ ಫರ್ನಾಂಡೀಸ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next