Advertisement

ಸಿಸಿ ರಸ್ತೆ ಕಾಮಗಾರಿ ಪರಿಶೀಲನೆ

08:20 PM Aug 25, 2022 | Shwetha M |

ತಾಂಬಾ: ರಸ್ತೆಗಳ ಅಭಿವೃದ್ಧಿ, ಚರಂಡಿ ಮತ್ತು ಶೌಚಾಲಯಗಳ ನಿರ್ಮಾಣ ಹಾಗೂ ಪ್ರತಿಯೊಂದು ಹಳ್ಳಿಗೆ ಮನೆ ಮನೆಗೆ ನಳ ಜೋಡಣೆ ಮಾಡಿ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಸಿಂದಗಿ ಶಾಸಕ ರಮೇಶ ಭೂಸನೂರ ಹೇಳಿದರು.

Advertisement

ಗ್ರಾಮದ ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಡೆದ ಸಿಸಿ ರಸ್ತೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ಹರಿದು ಬರಲಿದೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಬರಲಿರುವ ಚುನಾವಣೆಯೊಳಗೆ ಮುಗಿಸಲಾಗುವುದು ಎಂದರು.

ಇಂಡಿ, ದೇವರಹಿಪ್ಪರಗಿ ರಸ್ತೆಗೆ 5 ಕೋಟಿ ರೂ. ಮಂಜೂರು ಮಾಡಲಾಗಿದೆ. ತಾಂಬಾದಿಂದ ಬಳಗಾನೂರವರೆಗೆ ಡಾಂಬರಿಕರಣ ಮಾಡಲಾಗುವುದು. ದೊಡ್ಡ ಹಳ್ಳಕ್ಕೆ 5 ಬಾಂದಾರ್‌ಗಳನ್ನು ನಿರ್ಮಿಸಲಾಗಿದೆ. ಜನರ ಬಹು ದಿನಗಳ ಬೇಡಿಕೆಯಾದ ರುದ್ರಭೂಮಿಗೆ ಹೋಗಲು ಮಿನಿ ಬ್ರಿಡ್ಜ್ ಕಟ್ಟಲಾಗುವುದು ಎಂದರು.

ಬಿಜೆಪಿ ಮುಖಂಡ ಜಿ.ವೈ. ಗೊರನಾಳ ಮಾತನಾಡಿ, ಸಿಂದಗಿ ಕ್ಷೇತ್ರದ ಸಮಗ್ರ ನೀರಾವರಿ ಕನಸನ್ನು ಶಾಸಕ ರಮೇಶ ಭೂಸನೂರ ನನಸು ಮಾಡಲಿದ್ದಾರೆ ಎಂದರು. ಗ್ರಾಪಂ ಅಧ್ಯಕ್ಷ ರಾಜು ಗಂಗನಳ್ಳಿ, ಪ್ರಕಾಶ ಮುಂಜಿ, ಈರಣ್ಣ ಬ್ಯಾಕೋಡ, ನಿಂಗಪ್ಪ ನಿಂಬಾಳ, ಶಂಕರ ಯಳಕೋಟಿ, ಗುರಸಂಗಪ್ಪ ಬಾಗಲಕೋಟ, ಪರಸು ಬರಮಣ್ಣ, ಸಂಜೀವ ಗೋರನಾಳ, ಬೀರಪ್ಪ ಮ್ಯಾಗೇರಿ, ಸಿದ್ದು ಬೂದಿಹಾಳ, ಬಸು ಸರಸಂಬಿ, ರಮೇಶ ಹಿರೇಕುರಬರ, ಅಕಂಡಪ್ಪ ಸಿಂದಗಿ, ಸದಾಶಿವ ಬುಲಬುಲೆ, ಶಿವಲಿಂಗಯ್ಯ ಇರಸಿದ್ದಪ್ಪನಮಠ, ಸಂಗಯ್ಯ ಸ್ಥಾವರಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next