Advertisement

ಕೃಷಿ ಪರಿಕರ ಮಾರಾಟ ಮಳಿಗೆಗಳ ತಪಾಸಣೆ

10:28 AM Aug 27, 2019 | Suhan S |

ದಾವಣಗೆರೆ: ಜಿಲ್ಲೆಯಲ್ಲಿ ವಿವಿಧ ತಾಲೂಕುಗಳ ಕೃಷಿ ಮಳಿಗೆಗಳ ಮೇಲೆ ದಿಢೀರ್‌ ದಾಳಿ ನಡೆಸಿದ ಕೃಷಿ ಅಧಿಕಾರಿಗಳ ತಂಡ, ಜೈವಿಕ ಉತ್ಪನ್ನಗಳ ಹೆಸರಲ್ಲಿ ಮಾರಾಟ ಮಾಡುತ್ತಿದ್ದ ಮಾದರಿಗಳನ್ನು ಸಂಗ್ರಹಿಸಿ, ತಪಾಸಣೆಗೆ ಕಳುಹಿಸಿದೆ

Advertisement

ಬೆಂಗಳೂರಿನ ಅಪರ ಕೃಷಿ ನಿರ್ದೇಶಕ ಎಂ.ಎಸ್‌.ದಿವಾಕರ್‌ ಹಾಗೂ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಬಿ ಮುದಗಲ್ ನೇತೃತ್ವದಲ್ಲಿ ಕೃಷಿ ಪರಿಕರಗಳ ಗುಣ, ನಿಯಂತ್ರಣ ಪರಿವೀಕ್ಷಕರೊಂದಿಗೆ ಹಠಾತ್‌ ದಾಳಿ ನಡೆಸಿ, ಜೈವಿಕ ಉತ್ಪನ್ನಗಳ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆಗೆ ಕಳುಹಿಸಿ ಕೊಡಲಾಗಿದೆ.

ಹೊನ್ನಾಳಿ, ಚನ್ನಗಿರಿ, ಹರಿಹರ ಮತ್ತು ಜಗಳೂರು ತಾಲೂಕುಗಳಲ್ಲಿ ಏಕ ಕಾಲಕ್ಕೆ ಕೃಷಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದ ಇಲಾಖಾ ಅಧಿಕಾರಿಗಳು, ಜೈವಿಕ ಉತ್ಪನ್ನಗಳ ಹೆಸರಿನಲ್ಲಿ ದಾಸ್ತಾನಿರಿಸಿ, ಮಾರಾಟ ಮಾಡುತ್ತಿದ್ದ ಜೈವಿಕ ಕೀಟನಾಶಕಗಳು, ಸಸ್ಯ ವರ್ಧಕಗಳು, ಹಾರ್ಮೋನ್‌ಗಳು ಎಂಬ ವಿವಿಧ ಹೆಸರಿನ ಉತ್ಪನ್ನಗಳನ್ನು ಪರಿಶೀಲಿಸಿ, ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಸಂಗ್ರಹಿಸಿದರು.

ಪ್ರಿನ್ಸಿಪಲ್ ಸರ್ಟಿಫಿಕೇಟ್ ಪರವಾನಿಗೆಯಲ್ಲಿ ನಮೂದಿಸದೆ ಇರುವ ಉತ್ಪನ್ನಗಳು, ಇನ್‌ವಾಯ್ಸ ಇಲ್ಲದೆ ದಾಸ್ತಾನಿರಿಸಿದ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಅಧಿಕಾರಿಗಳು ಮಳಿಗೆಗಳ ಮಾಲೀಕರಿಗೆ ಸೂಚಿಸಿದರಲ್ಲದೆ, ಕೃಷಿ ಉಪಕರಣಗಳ ಅಧಿಕೃತ ಪರವಾನಿಗೆ ಇಲ್ಲದೆ, ಇನ್‌ವಾಯ್ಸ ಇಲ್ಲದೆ ದಾಸ್ತಾನು ಅಥವಾ ಮಾರಾಟ ಮಾಡಿದ್ದಲ್ಲಿ ಮಾರಾಟಗಾರರ ಪರವಾನಿಗೆ ರದ್ದು ಪಡಿಸಲಾಗುವುದು ಎಂದು ಎಚ್ಚರಿಸಿದರು.

ಅಧಿಕಾರಿಗಳ ತಂಡ ನಗರದ ಎನ್‌.ಆರ್‌ ರಸ್ತೆ, ಕೆ.ಆರ್‌ ರಸ್ತೆ, ಜಗಳೂರು ಬಸ್‌ ನಿಲ್ದಾಣ ಸೇರಿದಂತೆ ಮಾರಾಟ ಮಳಿಗೆಗಳಲ್ಲಿ ಈ ಕಾರ್ಯಾಚರಣೆ ನಡೆಸಿದ್ದು, ದಾವಣಗೆರೆ ಮತ್ತು ಹೊನ್ನಾಳಿ ಉಪವಿಭಾಗದ ಉಪ ಕೃಷಿ ನಿರ್ದೇಶಕರು, ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯದ ಉಪ ಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು ಜಾರಿದಳದ ಎಲ್ಲಾ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಕೃಷಿ ಅಧಿಕಾರಿಗಳ ನಲವತ್ತು ಜನರ ತಂಡ ವಿಶೇಷ ತಪಾಸಣಾ ಕಾರ್ಯದಲ್ಲಿ ಭಾಗವಹಿಸಿತ್ತು ಎಂದು ಪ್ರಕಟಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next