Advertisement

ಜಿಲ್ಲಾಧಿಕಾರಿ ನೇತೃತ್ವದ ತಂಡದಿಂದ ತಪಾಸಣೆ

10:11 PM Mar 23, 2019 | |

ಕಾಸರಗೋಡು: ಲೋಕಸಭೆ ಚುನಾವಣೆ ಸಿದ್ಧತೆ ಅಂಗವಾಗಿ ಜಿಲ್ಲೆಯ ಅರಣ್ಯ ಪ್ರದೇಶಗಳ ಬಳಿಯ ಮತಗಟ್ಟೆಗಳಲ್ಲಿ ಸುರಕ್ಷತಾ ವ್ಯವಸ್ಥೆ ಸಬಲಗೊಳಿಸುವ ಅಂಗವಾಗಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಅವರ ನೇತೃತ್ವದಲ್ಲಿ ಹಿರಿಯ ಮಟ್ಟದ ಅಧಿಕಾರಿಗಳ ತಂಡ ಸಂದರ್ಶನ ನಡೆಸಿದೆ. 

Advertisement

ಸಂದರ್ಶನ  ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಜೊತೆ ಜಿಲ್ಲಾ  ಪೊಲೀಸ್‌ ವರಿಷ್ಠಾಧಿಕಾರಿ ಜೇಮ್ಸ್‌ ಜೋಸೆಫ್‌, ವಿಭಾಗೀಯ ಅರಣ್ಯ ಅಧಿಕಾರಿ ಪಿ.ಕೆ.ಅನೂಪ್‌ ಕುಮಾರ್‌ ತಂಡ ನೇತೃತ್ವ ವಹಿಸಿತ್ತು.  ಸಮಸ್ಯಾತ್ಮಕ ಪ್ರದೇಶಗಳಲ್ಲಿ ಕೇಂದ್ರ ಸೇನೆಯ ಭದ್ರತೆ ಏರ್ಪಡಿಸುವ ಹಿನ್ನೆಲೆಯಲ್ಲೂ ಈ ಸಂರಕ್ಷಣೆ ನಡೆದಿದೆ.

ಚಿತ್ತಾರಿಕಲ್‌ ತೋಮಾಪುರಂ ಸಂತ ಥಾಮಸ್‌ ಹೈಯರ್‌ ಸೆಕೆಂಡರಿ ಶಾಲೆಗೆ ಈ ತಂಡ ಮೊದಲಿಗೆ ಭೇಟಿ ನೀಡಿದೆ. ಶಾಲೆ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ತಪಾಸಣೆ ನಡೆಸಿದ ಅನಂತರ ತಯೆÂàನಿ ಸರಕಾರಿ ಪ್ರೌಢ ಶಾಲೆ, ಪಾಲಾವಯಲ್‌ ಸಂತ ಜೋನ್ಸ್‌ ಹೈಯರ್‌ ಸೆಕೆಂಡರಿ ಶಾಲೆ ಇತ್ಯಾದಿ ಕಡೆೆ ಸಂರಕ್ಷಣೆ ನಡೆಸಲಾಯಿತು.

ಸಹಾಯಕ  ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಬಿ.ಪ್ರಶೋಬ್‌, ಡಿವೈಎಸ್‌ಪಿಗಳಾದ ಟಿ.ಎನ್‌.ಸಜೀವ್‌, ಎಂ. ಅಸೀನಾರ್‌ ತಂಡದಲ್ಲಿದ್ದರು. ಜತೆಗೆ ಇನ್ಸ್‌ಪೆಕ್ಟರ್‌ ದಯಾರಾಂ ಸಿಂಗ್‌ ನೇತೃತ್ವದ 74 ಸದಸ್ಯರಿರುವ ಸಿ.ಆರ್‌.ಪಿ.ಎಫ್‌. ಬೆಟಾಲಿಯನ್‌ ಇವರ ಜತೆಗಿದ್ದರು.ವನಪ್ರದೇಶಗಳ ಬಳಿಯಿರುವ ಮತಗಟ್ಟೆಗಳಲ್ಲಿ ಸ್ಥಳೀಯರು ಯಾವುದೇ ಭೀತಿ ಆತಂಕಗಳಿಲ್ಲದೆ ಮತದಾನ ನಡೆಸುವ ಎಲ್ಲ ಸೌಲಭ್ಯಗಳನ್ನೂ ಏರ್ಪಡಿಸಲಾಗಿದೆ. ಇವುಗಳ ತಪಾಸಣೆ ಮತ್ತು ಭದ್ರತೆಯ ಪರಿಶೀಲನೆಯ ನಿಟ್ಟಿನಲ್ಲಿ ಈ ಸಂದರ್ಶನ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ ಬಾಬು ಈ ಸಂದರ್ಭದಲ್ಲಿ ತಿಳಿಸಿದರು.

ಈ ನಿಟ್ಟಿನಲ್ಲಿ ರಾಜಪುರಂ ಮತ್ತು ವೆಳ್ಳರಿಕುಂಡ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲೂ ತಪಾಸಣೆ ನಡೆಯಲಿದೆ ಎಂದವರು ಹೇಳಿದರು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next