Advertisement

ದ.ಕ, ಉಡುಪಿ ಗಡಿಯಲ್ಲಿ ತಪಾಸಣೆ ಬಿಗಿ

12:10 AM Aug 03, 2021 | Team Udayavani |

ಮಂಗಳೂರು / ಉಡುಪಿ /ಕುಂದಾಪುರ: ಕೇರಳ ಮತ್ತು ಮಹಾ ರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗಡಿಗಳಲ್ಲಿ ತಪಾಸಣೆಯನ್ನು  ಬಿಗಿಗೊಳಿಸಲಾಗಿದೆ.

Advertisement

ಜಿಲ್ಲೆಯನ್ನು ಪ್ರವೇಶಿಸುವವರಿಗೆ ಟೆಸ್ಟ್‌ ಮತ್ತು ನೆಗೆಟಿವ್‌ ವರದಿ ಕಡ್ಡಾಯವಾಗಿದ್ದು, ಅದನ್ನು ಹೊಂದಿರದವ ರನ್ನು ಚೆಕ್‌ ಪೋಸ್ಟ್‌ಗಳಲ್ಲೇ ತಡೆಯಲಾ ಗುತ್ತಿದೆ. ಇದು ಕೆಲವೆಡೆ ಪೊಲೀಸರು ಮತ್ತು ನಾಗರಿಕರ ನಡುವೆ ಮಾತಿನ ಚಕಮಕಿಗೂ ಕಾರಣವಾಗುತ್ತಿದೆ.

ತಲಪಾಡಿಯಲ್ಲಿ ಸೋಮವಾರ ಕೇರಳದಿಂದ ಪ್ರವೇಶಿಸುವವರಿಗೆ ಆರ್‌ಟಿ- ಪಿಸಿಆರ್‌ ಟೆಸ್ಟ್‌ ಕಡ್ಡಾಯ ಗೊಳಿಸಿರುವುದನ್ನು ಆಕ್ಷೇಪಿಸಿ ಕೆಲವರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದ ಪ್ರಸಂಗವೂ ನಡೆದಿದೆ.

ಪುತ್ತೂರಿನಲ್ಲಿ ಶಾಸಕ ಎ. ಸಂಜೀವ ಮಠಂದೂರು ಅವರು ಎಲ್ಲ ಕರ್ನಾಟಕ-ಕೇರಳ ಸಂಪರ್ಕ ರಸ್ತೆಗಳನ್ನು ಮುಚ್ಚಲು ಸೂಚಿಸಿದ್ದಾರೆ. ಇದರೊಂದಿಗೆ ಪುತ್ತೂರು-ಸುಳ್ಯದ ಗಡಿ ಭಾಗಗಳಲ್ಲೂ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದೆ.

ಮಹಾರಾಷ್ಟ್ರದಿಂದ ಬರುವವರ ಮೇಲೆ ನಿಗಾ ವಹಿಸಲು ಕುಂದಾಪುರದ ಮೂರು ಕಡೆ ಚೆಕ್‌ ಪೋಸ್ಟ್‌ ಸ್ಥಾಪಿಸಿ ತಪಾಸಣೆ ನಡೆಸಲಾಗುತ್ತಿದೆ.

Advertisement

ವಿದ್ಯಾರ್ಥಿಗಳಿಗೆ ವಿನಾಯಿತಿ :

ಮಂಗಳೂರು ವಿ.ವಿ. ಪದವಿ ವಿದ್ಯಾರ್ಥಿಗಳಿಗೆ ಆ. 14ರ ವರೆಗೆ ಪರೀಕ್ಷೆ ಇದ್ದು, ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಗುರುತು ಚೀಟಿ ಮತ್ತು ಪರೀಕ್ಷಾ ಪ್ರವೇಶ ಪತ್ರದ ಆಧಾರದಲ್ಲಿ ಅನುಮತಿ ನೀಡಲಾಯಿತು. ಆ. 14ರ ವರೆಗೆ ಈ ಸೌಲಭ್ಯ ಇರಲಿದೆ. ವಿದ್ಯಾರ್ಥಿಗಳ ಆರ್‌ಟಿ- ಪಿಸಿಆರ್‌ ಪರೀಕ್ಷೆಗೆ ವ್ಯವಸ್ಥೆ ಮಾಡಬೇಕು ಎಂದು ದ.ಕನ್ನಡ ಡಿ.ಸಿ. ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next