ಬಂಗಾರಪೇಟೆ: ತಾಲೂಕು ಗಡಿಗೆ ಹೊಂದಿಕೊಂಡ ಆಂಧ್ರದ ವಿ.ಕೋಟೆ, ತಮಿಳುನಾಡಿನ ಯಾಪನಪಲ್ಲಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿರುವುದರಿಂದ ಬಂಗಾರಪೇಟೆ ಹಾಗೂ ಕೆಜಿಎಫ್ ತಾಲೂಕು ಆಡಳಿತ, ಜಿಲ್ಲಾಡಳಿತ ಎಚ್ಚರ ವಹಿಸಬೇಕು ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.
ಪಟ್ಟಣದ ಎಪಿಎಂಸಿ ಆಡಳಿತ ಮಂಡಳಿ ಜೊತೆ ಚರ್ಚೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ವೈರಸ್ ಇರುವ ಜಿಲ್ಲೆಗಳಾದ ಕಲಬುರಗಿ, ರಾಯಚೂರು, ದಾವಣಗೆರೆ, ಆಂಧ್ರ, ಮಹಾರಾಷ್ಟ್ರ ರಾಜ್ಯಗಳಿಂದ ಬಂಗಾರ ಪೇಟೆಗೆ ಪ್ರತಿ ದಿನ 30ಕ್ಕೂ ಹೆಚ್ಚು ಗೂಡ್ಸ್ ವಾಹನಗಳು ಯಾವುದೇ ತಪಾಸಣೆ ಮಾಡದೇ ಬರುತ್ತಿವೆ ಎಂದರು.
ಎಪಿಎಂಸಿ ಆಡಳಿತ ಮಂಡಳಿ ಪ್ರತಿ ಗೂಡ್ಸ್ ವಾಹನ ತಪಾಸಣೆ ಮಾಡಿ, ಆರೋಗ್ಯ ಇಲಾಖೆ ಯವರಿಂದ ಕೊರೊನಾ ತಪಾಸಣೆ ಮಾಡಿಸುವಂತೆ ಹೇಳಿದರು.ಕೆಜಿಎಫ್ ತಾಲೂಕಿಗೆ ಹೊಂದಿಕೊಂಡಿ ರುವ ವಿ.ಕೋಟೆಯಲ್ಲಿ ಒಬ್ಬರಿಗೆ ಪಾಸಿಟಿವ್ ಖಚಿತಪಡಿಸಲಾಗಿದೆ. ಈ ವ್ಯಕ್ತಿ ಬಂಗಾರಪೇಟೆ, ಕೆಜಿ ಎಫ್ ಹಾಗೂ ಬೇತಮಂಗಲದಲ್ಲಿ ಓಡಾಡಿ ಹಣದ ವ್ಯವಹಾರ ನಡೆಸಿದ್ದಾನೆ ಎಂಬ ಆತಂಕ ಇದೆ ಎಂದರು.
ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಎಪಿಎಂಸಿ ಅಧ್ಯಕ್ಷ ಎಸ್.ನಾರಾಯಣಗೌಡ, ಕೋಲಾರ ಎಪಿಎಂಸಿ ಅಧ್ಯಕ್ಷ ವಡಗೂರು ನಾಗರಾಜ್, ಜಿಪಂ ಸದಸ್ಯ ಬಿ.ವಿ.ಮಹೇಶ್, ಜಯಪ್ರಕಾಶ್ ನಾಯ್ಡು, ಮುಖಂಡ ಎಂ.ಪಿ.ಶ್ರೀ ನಿವಾಸ ಗೌಡ, ತಹಶೀಲ್ದಾರ್ ಕೆ.ಬಿ.ಚಂದ್ರಮೌಳೇಶ್ವರ್, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರಿ, ಸಬ್ ಇನ್ಸ್‌ಪೆಕ್ಟರ್
ಜಗದೀಶರೆಡ್ಡಿ, ಎಪಿಂಎಂಸಿ ನಿರ್ದೇಶಕ ರಾಜಾರೆಡ್ಡಿ, ತಾಪಂ ಸದಸ್ಯ ಅಮರೇಶ್, ಬಾಲಚಂದ್ರ, ಎಪಿಎಂಸಿ ಮೇಲ್ವಿಚಾರಕ ಆಂಜನೇಯಗೌಡ ಇತರರಿದ್ದರು.