Advertisement

ಮಾಳೇಗೆರೆಯಲ್ಲಿ ಬಸ್‌ ತಂಗುದಾಣ ನಿರ್ಮಿಸಲು ಒತ್ತಾಯ

04:59 PM Aug 27, 2019 | Suhan S |

ಬೇಲೂರು: ತಾಲೂಕಿನ ಕೋಗಿಲಮನೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಂದ ದಿನನಿತ್ಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಾರ್ವ ಜನಿಕರು ಸಂಚರಿಸುತ್ತಿದ್ದು, ಮದ ಘಟ್ಟ ರಸ್ತೆಯ ಶನೇಶ್ವರ ದೇಗುಲ ಸಮೀಪ ಬಸ್‌ ತಂಗುದಾಣ ನಿರ್ಮಿಸುವಂತೆ ಜನ ಪ್ರತಿನಿಧಿಗಳು ಹಾಗೂ ಅಧಿ ಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

ತಾಲೂಕಿನ ಬಿಕ್ಕೋಡು ಹೋಬಳಿ ಕೋಗಿಲಮನೆ ಗ್ರಾಪಂಗೆ ಸೇರುವ ಮಾಳೇಗೆರೆ ಹಳೇಊರು, ಹೊಸಕೊಪ್ಪಲು, ಚಲುವೇಗೌಡನ ಕೊಪ್ಪಲು ಹಾಗೂ ಮಾಳೇಗೆರೆ ಕಾಲೋನಿಗಳಿಂದ ದಿನನಿತ್ಯ ಸಾಕಷ್ಟು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬೇಲೂರು, ಬಿಕ್ಕೋಡು ಹಾಸನಕ್ಕೆ ಪ್ರಯಾಣಿ ಸುತ್ತಿದ್ದು ಮಳೆ ಬಿಸಿಲೆನ್ನದೆ ಮರದ ಕೆಳಗೆ ನೀಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲಾ ಮಕ್ಕಳ ಪರದಾಟ: ಬೇಸಿಗೆ ಸಮಯದಲ್ಲಿ ರಸ್ತೆ ಪಕ್ಕದ ಮರದ ಕೆಳಗೆ ನಿಲ್ಲಬಹುದು. ಆದರೆ ಮಳೆಗಾಲದಲ್ಲಿ ಶಾಲಾ ಕಾಲೇಜಿಗೆ ತೆರಳುವ ಮಕ್ಕಳು ಪಠ್ಯಪುಸ್ತಕ ಹಾಗೂ ನೋಟ್ ಬುಕ್ಸ್‌ ಹಾಗೂ ಇನ್ನಿತರೆ ವಸ್ತುಗಳೆಲ್ಲ ಮಳೆ ನೀರಿನಲ್ಲಿ ನೆನೆಯುವುದಲ್ಲದೇ, ರಸ್ತೆ ಪಕ್ಕದಲ್ಲಿ ನಿಲ್ಲುವ ನೀರಿನಿಂದ ಬಟ್ಟೆಗಳೆಲ್ಲ ಕೊಳೆಯಾಗುತ್ತದೆ. ಶಾಲಾ ಕಾಲೇಜುಗಳಿಗೆ ತೆರಳಿದರೆ ಶಿಕ್ಷಕರು ಮತ್ತು ಉಪನ್ಯಾಸಕರಿಂದ ಬೈಸಿಕೊಳ್ಳುವುದು ಅನಿವಾರ್ಯವಾಗಿದೆ.

ವೃದ್ಧರು ಮಳೆಯರು, ಮಕ್ಕಳಿಗೂ ತೊಂದರೆ ಆಗುತ್ತಿರುವುದರಿಂದ ನಮಗೆ ತಕ್ಷಣವೇ ಮದಘಟ್ಟ ರಸ್ತೆಯ ಮಾಳೇಗೆರೆ ಶನೇಶ್ವರ ದೇಗುಲ ಸಮೀಪ ಬಸ್‌ ತಂಗುದಾಣ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಮಾಳೇಗೆರೆ ಶನೇಶ್ವರ ದೇಗುಲ ಸಮೀಪ ಬಸ್‌ಗಳನ್ನು ತಡೆದು ಪ್ರತಿಭಟಿಸ ಬೇಕಾಗುತ್ತದೆ ಎಂದು ಈ ಭಾಗದ ಗ್ರಾಮಸ್ಥರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next