Advertisement

ರಸ್ತೆ ಮರು ಡಾಂಬರೀಕರಣಕ್ಕೆ ಗ್ರಾಮಸ್ಥರ ಒತ್ತಾಯ

06:04 PM Mar 22, 2022 | Shwetha M |

ಇಂಡಿ: ನಿರ್ವಹಣೆ ಹಂತದಲ್ಲಿ ಇರುವಾಗಲೇ ಸಂಪೂರ್ಣ ಹಾಳಾದ ರಸ್ತೆಯ ಮರು ಡಾಂಬರೀಕರಣ ಕಾರ್ಯ ಮಾಡಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಆರು ತಿಂಗಳ ಹಿಂದೆ ಹಿರೇಬೇವನೂರ ಗ್ರಾಮದ ಕೊಟ್ಟರ ಬಸವಣ್ಣನ ಕಟ್ಟೆಯಿಂದ ಆಳೂರವರೆಗೆ 3 ಕಿ.ಮೀ ರಸ್ತೆ ಡಾಂಬರೀಕರಣ ಕಾಮಗಾರಿ ಅಂದಾಜು 60 ಲಕ್ಷ ರೂ. ವೆಚ್ಚದಲ್ಲಿ ಮಾಡಲಾಗಿದೆ. ರಸ್ತೆ ಡಾಂಬರೀಕರಣವಾದ ಮೂರ್ನಾಲ್ಕು ತಿಂಗಳ ಅವಧಿಯಲ್ಲಿಯೇ ಡಾಂಬರ ಸಂಪೂರ್ಣ ಕಿತ್ತು ಹೋಗಿದೆ. ಜತೆಗೆ ರಸ್ತೆ ಮಧ್ಯದಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ನಿರ್ವಹಿಸಿರುವುದೇ ರಸ್ತೆ ಹಾಳಾಗಲು ಮುಖ್ಯ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕೂಡಲೇ ರಸ್ತೆ ಪರಿಶೀಲನೆ ನಡೆಸಿ ಮರು ಡಾಂಬರೀಕರಣ ಕಾಮಗಾರಿ ಮಾಡಿಕೊಡುವಂತೆ ಕ್ರಮ ಜರುಗಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಸಿದ್ದಾರೆ.

ಗ್ರಾಮಸ್ಥರಾದ ಆದಪ್ಪ ನಾಯ್ದೊಡಿ, ಬೂತಾಳಿ ಪೂಜಾರಿ, ಸುರೇಶ ಚವ್ಹಾಣ, ಗಡೇಪ್ಪ ಬೇವನೂರ, ಈಶ್ವರ ಭಜಂತ್ರಿ, ಮಹಾದೇವ ನಂದರಗಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next