Advertisement

‘ಲಾಲ್ ಕಪ್ತಾನ್‌’ಚಲನಚಿತ್ರ ನಿಷೇಧಕ್ಕೆ ಒತ್ತಾಯ

02:00 PM Jul 27, 2019 | Suhan S |

ಹಳಿಯಾಳ: ನ್ಯಾಯವಾದಿ ಸಂಜೀವ ಪುನಾಳೆಕರ ವಿರುದ್ಧ ದಾಖಲಾದ ಆರೋಪವನ್ನು ಕೂಡಲೇ ಹಿಂಪಡೆಯಬೇಕು, ನಾಗಾ ಸಾಧುಗಳಿಗೆ ಸಂಬಂಧಪಟ್ಟ ವಿಕೃತ ದೃಶ್ಯ ತೋರಿಸುವ ‘ಲಾಲ್ ಕಪ್ತಾನ್‌’ ಚಲನಚಿತ್ರ ನಿಷೇಧಿಸಬೇಕು ಹಾಗೂ ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಮತಾಂಧರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮೀತಿ ನೇತೃತ್ವದಲ್ಲಿ ರಾಷ್ಟ್ರೀಯ ಹಿಂದೂ ಆಂದೋಲನ ಸಮೀತಿಯವರು ತಹಶೀಲ್ದಾರ್‌ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಮಹಾರಾಷ್ಟ್ರದ ಡಾ| ನರೇಂದ್ರ ದಾಭೊಲಕರ ಹಾಗೂ ಪಾನಸರೆಯವರ ಹತ್ಯೆ ಬಗೆಗಿನ ದಿಕ್ಕಿಲ್ಲದ ತನಿಖೆ ಬಗ್ಗೆ ನ್ಯಾಯಾಲಯದಲ್ಲಿ ವಾದ ಮಂಡಿಸಿ ನ್ಯಾಯವಾದಿ ಸಂಜೀವ್‌ ಪುನಾಳೆಕರ್‌ ತನಿಖಾ ದಳದ ನಿಷ್ಕ್ರಿಯತೆ ಜನರ ಮುಂದೆ ಬಯಲಿಗೆಳೆದಿದ್ದಾರೆ. ಆದ್ದರಿಂದ ಇದಕ್ಕೆ ಪ್ರತಿಕಾರವೆಂಬಂತೆ ನ್ಯಾಯವಾದಿ ಸಂಜೀವ ಪುನಾಳೆಕರ ಹಾಗೂ ಮಾಹಿತಿ ಹಕ್ಕು ಅಧಿಕಾರದ ಕಾರ್ಯಕರ್ತ ವಿಕ್ರಮ ಭಾವೆಯವರನ್ನು ಸಿಬಿಐಯು ಅನಧಿಕೃತವಾಗಿ ಬಂಧಿಸಿತ್ತು ಎಂದು ಆರೋಪಿಸಿದ್ದಾರೆ.

ಸಿಬಿಐ ಮೂಲಕ ಆಗುತ್ತಿರುವ ಈ ಕಾರ್ಯಾಚರಣೆ ಸಂವಿಧಾನ ವಿರೋಧಿ ಹಾಗೂ ಸಂಪೂರ್ಣ ನ್ಯಾಯವಾದಿ ವ್ಯವಸ್ಥೆ ಹಾಗೂ ಜನತೆಯ ನ್ಯಾಯಾಂಗದ ಹಕ್ಕಿನ ಕಗ್ಗೊಲೆಯಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಪ್ರತಿಭಟನಾಕಾರರು ತಕ್ಷಣ ಸಿಬಿಐ ಪುನಾಳೇಕರ್‌ ಮೇಲೆ ದಾಖಲಿಸಿದ ಆರೋಪವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿದೆ.

ಲಾಲ್ ಕಪ್ತಾನ್‌ ನಿಷೇಧಿಸಿ: ಕೆಲವೆ ದಿನಗಳಲ್ಲಿ ಬಿಡುಗಡೆ ಆಗಲಿರುವ ಚಲನಚಿತ್ರ ‘ಲಾಲ್ ಕಪ್ತಾನ್‌’ನ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವ ಸಮೀತಿ ಚಿತ್ರದಲ್ಲಿ ನಾಗಾ ಸಾಧುಗಳಿಗೆ ಸಂಬಂಧಪಟ್ಟ ಕೆಲವು ವಿಕೃತ ದೃಶ್ಯಗಳಿವೆ. ಸಂಸ್ಕೃತೀಯ ವಸ್ತುಸ್ಥಿತಿಯನ್ನು ಬದಿಗಿಟ್ಟು ಹಿಂದೂ ಧರ್ಮಕ್ಕಾಗಿ ಪ್ರಾಣ ಪಣಕ್ಕಿಡುವ ನಾಗಾಸಾಧುಗಳನ್ನು ಚಲನಚಿತ್ರಗಳ ಮೂಲಕ ಅವಮಾನಿಸುವ ಪ್ರಯತ್ನವಾಗುತ್ತಿದೆ. ಇದನ್ನು ಶ್ರದ್ಧಾವಂತ ಹಿಂದೂಗಳು ಎಂದಿಗೂ ಸಹಿಸುವುದಿಲ್ಲ. ಆದ್ದರಿಂದ ‘ಲಾಲ್ ಕಪ್ತಾನ್‌’ ಚಲನಚಿತ್ರವನ್ನು ನಿಷೇಧಿಸುವಂತೆ ಆಗ್ರಹಿಸಲಾಗಿದೆ.

ಗೋಹತ್ಯಾ ನಿಷೇಧ ಕಾನೂನು ಜಾರಿಯಾಗಲಿ: ಮಹಾರಾಷ್ಟ್ರದ ಗೋ ರಕ್ಷಕ ಚೇತನ ಶರ್ಮಾ, ವಿಕಾಸ ಗೋಮಸಾಳೆ, ಮಯೂರ ವಿಭಾಂಡಿಕರ ಮೇಲೆ ಮತಾಂಧ ಕಟುಕರು ನಡೆಸಿದ ಮಾರಣಾಂತಿಕ ಹಲ್ಲೆ ಖಂಡಿಸಿರುವ ಹಿಂಜ ಸಮೀತಿ ಗೋಮಾತೆ ರಕ್ಷಣೆಗಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಕಾರ್ಯ ಮಾಡುವ ಗೋರಕ್ಷಕರಿಗೆ ಇಂದು ದೇಶದಲ್ಲಿ ಯಾವ ರಕ್ಷಣೆಯು ಇಲ್ಲವಾಗಿದೆ. ಆದ್ದರಿಂದ ಗೋರಕ್ಷಕರ ಮೇಲೆ ಹಲ್ಲೆಯನ್ನು ಮಾಡುವ ಮತಾಂಧರ ಮೇಲೆ ಕಠಿಣಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

Advertisement

ಮಂಜುನಾಥ ಎನ್‌.ಕೆ, ನಿಥೀನ ಡಾಂಗೆ, ಕಾಂಚನಾ ರಜಪೂತ, ಮನೋಜ ಹೆಳವರ, ಮಂಜುನಾಥ ಬಾರ್ಕಿ, ಮೋಹಿನ ಹೊಂದೂರಕರ, ಗುರು ಬಾರ್ಕಿ ವಿವಿಧ ಹಿಂದೂಪರ ಸಂಘಟನಾಕಾರರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next