Advertisement

ಟ್ರಾಫಿಕ್‌ ನಿಯಂತ್ರಣಕ್ಕೆ ಒತ್ತಾಯ

04:03 PM Jan 07, 2020 | Team Udayavani |

ಹಿರೇಬಾಗೇವಾಡಿ: ಬೈಲಹೊಂಗಲಕ್ಕೆ ತೆರಳಲು ಇಲ್ಲಿರುವ ಬಸ್‌ಸ್ಟಾಪ್‌ ಮತ್ತು ಬಸವೇಶ್ವರ ವೃತ್ತದಲ್ಲಿ ಇತ್ತೀಚಿನ ಕೆಲ ವರ್ಷಗಳಲ್ಲಿ ವಿಪರೀತ ಜನ ಹಾಗೂ ವಾಹನ ಸಂದಣಿಯಾಗುತ್ತಿದೆ. ಇಂಥ ತೊಂದರೆ ಪರಿಹರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಸ್ಥಳೀಯ ಆರಕ್ಷಕ ನಿರೀಕ್ಷಕ ಎನ್‌.ಎನ್‌. ಅಂಬಿಗೇರ ಅವರಿಗೆ ಮನವಿ ಸಲ್ಲಿಸಿದರು.

Advertisement

ಅತಿಯಾದ ವಾಹನ ಹಾಗೂ ಜನ ದಟ್ಟಣೆಯು ನಿಯಂತ್ರಣವಿಲ್ಲದೇ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಭಾಗದ ಸುತ್ತ-ಮುತ್ತಲಿನ ಗ್ರಾಮಸ್ಥರು ಬೆಳಗಾವಿ ಮತ್ತು ಬೈಲಹೊಂಗಲ, ಸವದತ್ತಿ ಭಾಗಗಳಿಗೆ ಸಂಚರಿಸಲು ಈ ಬಸ್‌ ನಿಲ್ದಾಣವೇ ಆಸರೆಯಾಗಿದೆ. ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳು ಬೆಳಗಿನಿಂದ ಸಂಜೆಯವರೆಗೂ ನಿರಂತರವಾಗಿ ಪ್ರಯಾಣಿಸುವುದರಿಂದ ಈ ಬಸ್‌ ಸ್ಟಾಪ್‌ ಸದಾ ಜನ ಹಾಗೂ ವಾಹನ ದಟ್ಟಣೆಯಿಂದ ಕೂಡಿರುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಸಂತೆಯ ದಿನವಾದ ಮಂಗಳವಾರ ಇನ್ನೂ ಹೆಚ್ಚಿನ ಜನದಟ್ಟಣೆ ಆಗುತ್ತಿದೆ. ಹಾಗಾಗಿ ಈ ಹಿಂದೆ ಸಣ್ಣ ಪುಟ್ಟ ಜಗಳ, ವ್ಯಾಜ್ಯ ಹಾಗೂ ಅಪಘಾತಗಳೂ ಸಹ ಸಂಭವಿಸಿವೆ. ಅತಿಯಾದ ದಟ್ಟಣೆಯಿಂದ ಅಪಘಾತಗಳೂ ಸಂಭವಿಸುತ್ತಿವೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಮನವಿ ಮೇರೆಗೆ ಇಲ್ಲಿ ಕೆಲದಿನಗಳ ಹಿಂದೆ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರನ್ನು ನೇಮಿಸಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಅವರ ಸೇವೆ ನಿಂತು ಹೋಗಿದ್ದು, ಈಗ ಸಾಕಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಶಾಂತಿ, ಸುವ್ಯವಸ್ಥೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಕನಿಷ್ಟ ಇಬ್ಬರು ಪೊಲೀಸ್‌ ಸಿಬ್ಬಂದಿ ನಿಯಮಿಸಿ ಈ ಭಾಗದ ಸಾರ್ವಜನಿಕರು ಮತ್ತು ಪ್ರಯಾಣಿಕರ ದಿನನಿತ್ಯದ ಸಮಸ್ಯೆ ಪರಿಹರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿ¨

Advertisement

Udayavani is now on Telegram. Click here to join our channel and stay updated with the latest news.

Next