Advertisement
ಪಟ್ಟಣದ ತಾಪಂ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ಪಕ್ಷಭೇದ ಮರೆತು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಸಾಬೂಬು ಹೇಳದೇ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಖೋಬ್ರೆ, ದತ್ತಾತ್ತೇಯ ದುರ್ಗದ, ದೀಪಕ ಖೇಡ್ಲ್ ಅವರು, ಕಾಗದ ಮಾಹಿತಿ ನಮಗೆ ಬೇಡ ಸಮಸ್ಯೆ ಉದ್ಭವಿಸಿದ ಹಳ್ಳಿಗೆ ನೀರು ಕೊಡಿ ಎಂದು ಒತ್ತಾಯಿಸಿದರು. ತಾಪಂ ಇಒ ಅನಿತಾ ಕೋಂಡಾಪುರ ಮಧ್ಯೆ ಪ್ರವೇಶಿಸಿ, ಶಾಸಕರ ಅಧ್ಯಕ್ಷತೆಯಲ್ಲಿ ನೀರಿನ ಬೇಡಿಕೆ ಕುರಿತು ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಜಂಟಿ ಸಮೀಕ್ಷೆ ನಡೆಸಿ ಸರಬರಾಜು ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಧಿಕಾರಿಗಳಿಗೆ ತಿಳಿಸಲಾಗಿದೆ. ಈಗಾಗಲೇ ಕೊಳವೆ ಬಾವಿ ತೋಡಿಸಲಾಗಿದೆ. ಇನ್ನೂ ತೋಡುವ ಹಂತದಲ್ಲಿದೆ. ಸದಸ್ಯರು ತಮ್ಮ ಕ್ಷೇತ್ರದ ಹಳ್ಳಿಯಲ್ಲಿ ನೀರಿನ ಸಮಸ್ಯೆ ಇದ್ದರೆ ಲಿಖೀತವಾಗಿ ಅರ್ಜಿ ಕೊಟ್ಟರೆ ಸರಿಪಡಿಸಲಾಗುವುದು ಎಂದು ಹೇಳಿದರು. ಕೊಳವೆಬಾವಿ ತೆರೆದ ಬಾವಿಗೆ ನೀರು ಸಿಗದೆ ಇದ್ದಾಗ, ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು. ಅಕ್ಷರ ದಾಸೋಹ, ವಸತಿ ನಿಲಯಗಳು, ಕೃಷಿ ರಿಯಾಯಿತಿ ಸಾಮಗ್ರಿಗಳು ಅರ್ಹರಿಗೆ ದೊರೆಯುತ್ತಿಲ್ಲ ಎಂದು ಸದಸ್ಯರು ಸಭೆಯಲ್ಲಿ ದೂರಿದಾಗ ಸರಿಪಡಿಸಿಕೊಳ್ಳಿ ಎಂದು ಸಂಬಂಧಿಸಿದ ಕೃಷಿ, ತೋಟಗಾರಿಕೆ ಅಧಿಕಾರಿಗಳಿಗೆ ಇಒ ಸೂಚಿಸಿದರು.
Related Articles
Advertisement