Advertisement

ಮಾಸ್ಕ್, ಸ್ಯಾನಿಟೈಸರ್‌ ಖರೀದಿಗೆ ಒತ್ತಾಯ ಸಲ್ಲ

06:06 AM Jun 09, 2020 | Lakshmi GovindaRaj |

ಬೆಂಗಳೂರು: ಶಾಲೆಗಳಲ್ಲಿ ಮಾಸ್ಕ್ , ಕೈ ಗವಸು, ಸ್ಯಾನಿಟೈಸರ್‌ ಮತ್ತು ಇತರೆ ವಸ್ತುಗಳನ್ನು ಮಾರಾಟ ಮಾಡುವುದು, ನಿರ್ದಿಷ್ಟ ಮಾರಾಟಗಾರರಿಂದ ಖರೀದಿ ಮಾಡುವಂತೆ ಒತ್ತಾಯಿಸುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.

Advertisement

ರಾಜ್ಯದ ಅನೇಕ ಶಾಲೆಗಳಲ್ಲಿ ಮಾಸ್ಕ್, ಕೈ ಗವಸು ಮತ್ತು ಸ್ಯಾನಿಟೈಸರ್‌ಗಳನ್ನು ಶಾಲಾ ಆಡಳಿತ ಮಂಡಳಿ ವತಿಯಿಂದಲೇ ಖರೀದಿಸುವಂತೆ ಒತ್ತಾಯ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇಲಾಖೆ ಈ ಕ್ರಮ ಕೈಗೊಂಡಿದೆ.

ಒಂದು ವೇಳೆ  ವಸ್ತುಗಳನ್ನು ಶಾಲೆಯಲ್ಲಿಯೇ ಮತ್ತು ನಿರ್ದಿಷ್ಟ ಮಾರಾಟಗಾರರಿಂದ ಖರೀದಿ ಮಾಡುವಂತೆ ಒತ್ತಾಯಿಸಿದ್ದಲ್ಲಿ ಸಂಬಂಧಪಟ್ಟ ಶಾಲೆಗಳ ವಿರುದ್ಧ ಶಿಸ್ತುಕ್ರಮ  ಜರುಗಿಸಲಾಗುವುದು ಎಂದು ಶಿಕ್ಷಣ ಇಲಾಖೆ ಆಯುಕ್ತರಾದ ಡಾ. ಕೆ.ಜಿ. ಜಗದೀಶ್‌ ಆದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next