Advertisement

ನಕಲಿ ಮದ್ಯ ನಿಷೇಧಕ್ಕೆ ಒತ್ತಾಯ

03:45 PM Jun 02, 2022 | Team Udayavani |

ಚಿತ್ತಾಪುರ: ರಾಜ್ಯದ ತಾಂಡಾ ಮತ್ತು ಹಳ್ಳಿಗಳಲ್ಲಿನ ನಕಲಿ ಮದ್ಯ ಮಾರಾಟ ನಿಷೇಧಿಸಬೇಕು ಹಾಗೂ ಯಾದಗಿರಿ ಜಿಲ್ಲೆ, ಶಹಾಪುರ ತಾಲೂಕಿನ ಅಬಕಾರಿ ಅಧಿಕಾರಿಗಳ ಮೇಲಾಗಿರುವ ಹಲ್ಲೆ ಖಂಡಿಸಿ ಗೋರ ಸೇನಾ ರಾಷ್ಟ್ರೀಯ ಸಂಘಟನೆ ತಾಲೂಕು ಅಧ್ಯಕ್ಷ ಮನೋಜ ರಾಠೊಡ ನೇತೃತ್ವದಲ್ಲಿ ಮುಖಂಡರು ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಗೋರ ಸೇನಾ ಜಿಲ್ಲಾ ಉಪಾಧ್ಯಕ್ಷ ಅಶ್ವಥ ರಾಠೊಡ ಮಾತನಾಡಿ, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಅಬಕಾರಿ ಅಧಿಕಾರಿಗಳು ನಕಲಿ ಮದ್ಯ ಮಾರಾಟ ಜಾಲದ ಆರೋಪಿಗಳನ್ನು ಬಂಧಿಸಲು ಹೋದಾಗ ಅಧಿಕಾರಿಗಳ ಮೇಲೆ ಆಗಿರುವ ಹಲ್ಲೆ ಯನ್ನು ಖಂಡಿಸುತ್ತೇವೆ ಎಂದರು.

ಮುಖಂಡರಾದ ವಿಜಯಕುಮಾರ ಚವ್ಹಾಣ, ರವಿ ಪವಾರ, ಆನಂದ ಜಾಧವ, ಆಕಾಶ ಚವ್ಹಾಣ, ಬಿ.ಜಿ. ಪವಾರ, ರವಿ ರಾಠೊಡ, ಸಂತೋಷ ರಾಠೊಡ, ಪ್ರೇಮ ಪವಾರ, ಅಂಬಾದಾಸ ರಾಠೊಡ, ನರೇಶ ರಾಠೊಡ, ಪವನ ಪವಾರ್‌, ಆಕಾಶ, ಆನಂದ ಪವಾರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next